ವಾಲ್ಮೀಕಿ ನಿಗಮದ ಹಗರಣದಲ್ಲಿ ನಾಗೇಂದ್ರ ಅವರ ತಪ್ಪಿಲ್ಲ, ಇಡಿ ಏನ್ ಬೇಕಾದ್ರೂ ತನಿಖೆ ಮಾಡ್ಲಿ: ಡಿ.ಕೆ. ಶಿವಕುಮಾರ್

By Sathish Kumar KH  |  First Published Jul 10, 2024, 6:29 PM IST

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರದ್ದು ಯಾವುದೇ ತಪ್ಪಿಲ್ಲ. ಇಡಿ ಅಧಿಕಾರಿಗಳು ಏನು ಬೇಕಾದರೂ ತನಿಖೆ ಮಾಡಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.


ತುಮಕೂರು (ಜು.10): ರಾಜ್ಯದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರದ್ದು ಯಾವುದೇ ತಪ್ಪಿಲ್ಲ. ನಾವು ವಿಶೇಷ ತನಿಖಾ ತಂಡ (SIT) ರಚನೆ ಮಾಡಿರುವಾಗ ಜಾರಿ ನಿರ್ದೇಶನಾಲಯ (ED) ಬರುವ ಅಗತ್ಯವಿರಲಿಲ್ಲ. ಈಗ ಇಡಿ ಅಧಿಕಾರಿಗಳು ನಾಗೇಂದ್ರನನ್ನು ಏನ್ ಬೇಕಾದ್ರೂ ತನಿಖೆ ಮಾಡ್ಲಿ, ಎಲ್ಲದಕ್ಕೂ ಉತ್ತರ ಕೊಡ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ತುಮಕೂರಿನಲ್ಲಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಬಗ್ಗೆ ತನಿಖೆ ಮಾಡುವುದಕ್ಕೆ ನಮ್ಮ ಸರ್ಕಾರ ಈಗಾಗಲೇ ಎಸ್ಐಟಿ ರಚನೆ ಮಾಡಿದೆ. ಹಣ ವರ್ಗಾವಣೆ ಮಾಡಿದ ಅಧಿಕಾರಿಗಳಿಬ್ಬರಿಗೂ ನೋಟಿಸ್ ಕೊಟ್ಟಿದಿವಿ‌. ನಾವು ಆತಂರಿಕವಾಗಿ ಎಲ್ಲಾ ರೀತಿಯಲ್ಲಿ ತನಿಖೆ ಮಾಡಿದ್ದೀವಿ. ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿರೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಪ್ರಕರಣ ಆಗಬಾರದಾಗಿತ್ತು, ನಡೆದೋಗಿದೆ ಎಂದು ಹೇಳಿದರು.

Tap to resize

Latest Videos

undefined

ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರ ಆಪ್ತ ಸಹಾಯಕ ಬಂಧನ

ಈ ಹಿಂದೆ ಬಿಜೆಪಿ ಕಾಲದಲ್ಲಿಯೂ ಇಂತಹ ಪ್ರಕರಣ ನಡೆದಿರೋ ಉದಾಹರಣೆ ಇದೆ. ಬಹಳ ವ್ಯವಸ್ಥಿತವಾಗಿ ವಂಚನೆ ಮಾಡಿದ್ದಾರೆ. ವಂಚನೆ ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಇದರಲ್ಲಿ ನಮ್ಮ ಶಾಸಕರಾಗಲಿ, ನಮ್ಮ ಸಚಿವರಾಗಲಿ, ಯಾವುದೇ ಕೈವಾಡ ಇಲ್ಲ ಎಂಬುದನ್ನ ಅವರು ನಮಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ನಡುವೆ ಎಸ್ಐಟಿ ಅವರು ತನಿಖೆ ನಡೆಸುತ್ತಿದ್ದಾರೆ. ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಬರುವ ಅವಶ್ಯಕತೆ ಇರಲಿಲ್ಲ. ಇಷ್ಟು ದೊಡ್ಡ ಮೊತ್ತ ಅಂದ ಮೇಲೆ‌ ಬ್ಯಾಂಕಿನವರು ತನಿಖೆ ನಡೆಸಲು ಪವರ್ ಇದೆ. ಇ.ಡಿ ಅವರು ಬರುವಂತಹ ಅವಶ್ಯಕತೆ ಇರಲಿಲ್ಲ. ಆದರೂ ಬಂದಿದ್ದಾರೆ ಎಂದರು.

ಮಾಜಿ ಸಚಿವ ನಾಗೇಂದ್ರ ಅವರ ಮನೆಯ ಮೇಳೆ ಇ.ಡಿ ಅಧಿಕಾರಿಗಳು ದಾಳಿ ಮಾಡಿರುವ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ನಾಗೇಂದ್ರ ಅವರದ್ದು ಯಾವುದೇ ರೀತಿಯ ತಪ್ಪಿಲ್ಲ. ಅವರು ಏನೇ ಕೇಳಿದ್ರು ಉತ್ತರ ಕೊಡ್ತಾರೆ. ಇ.ಡಿ ಅವರು ಏನ್ ಬೇಕಾದರೂ ತನಿಖೆ ಮಾಡಲಿ. ಯಾವುದೇ ತರದ ತಪ್ಪಿಲ್ಲ ಕ್ಲಿನ್ ಆಗಿ ಬರ್ತಾರೆ ಅನ್ನೋ ನಂಬಿಕೆ ಇದೆ ಎಂದು ಮಾಜಿ ಸಚಿವ ನಾಗೇಂದ್ರ ಪರವಾಗಿ ಭರವಸೆ ನೀಡಿದರು.

ಮಾಜಿ ಸಚಿವ ನಾಗೇಂದ್ರಗೆ ಎಸ್ಐಟಿ ಕೇಳಿದ ಪ್ರಶ್ನೆ ಏನು? ಇಂದಿನ ವಿಚಾರಣೆಯಲ್ಲಿ ಏನೆಲ್ಲಾ ಕೇಳಲಾಗುತ್ತೆ?

ಇನ್ನು ಮಠಗಳಿಗೆ ಭೇಟಿ ಕೊಟ್ಟ ವಿಚಾರದ ಬಗ್ಗೆ ಮಾತನಾಡಿ, ನಾನು ನೊಣವಿನಕೆರೆ ಮಠಕ್ಕೆ ಬರೋದು ಸಹಜ‌. ಅದು ನನ್ನ ನಂಬಿಕೆ ವಿಚಾರ. ಹಂದನಕೆರೆ ಮಠಕ್ಕೆ ಹೋಗಿದ್ದೆನು. ಅಲ್ಲಿ ನಾನು ಒಂದು ರೋಡ್ ಮಾಡಿಸಿದ್ದೆ. ಅದು ವ್ಯಾಜ್ಯ ಇತ್ತು, ಅರಣ್ಯ ಇಲಾಖೆ ತಕರಾರು ಇತ್ತು. ನಾನೇ ಹೋಗಿ ಪರಿಶೀಲನೆ ನಡೆಸಿ, ಅದನ್ನ ಸರಿಪಡಿಸಿ ಬಂದೆ. ಇನ್ನು ಚನ್ನಪಟ್ಟಣ ಕ್ಷೇತ್ರಕ್ಕೆ ನೀವು ಅಭ್ಯರ್ಥಿ ಆಗ್ತಿರಾ ಎಂಬ ಪ್ರಶ್ನೆಗೆ ಚನ್ನಪಟ್ಟಣಕ್ಕೆ ಯಾರೇ ನಿಂತ್ರು ನಾನೇ ಕ್ಯಾಡಿಡೇಟ್ ಅಲ್ವಾ...? ಎಂದು ಹೇಳಿ ನಗಾಡುತ್ತಾ ಹೋದರು.

click me!