Chikkamagaluru: ಜೇಡಿಕೊಂಡ ಗ್ರಾಮದ 4 ಕುಟುಂಬಕ್ಕೆ ಕಾತಾಳೆ ಮರದ ಎಲೆಯ ಗುಡಿಸಲೇ ಆಸರೆ: ಕಾರಣವೇನು?

By Govindaraj S  |  First Published Jul 10, 2024, 6:20 PM IST

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜೇಡಿಕೊಂಡ ಗ್ರಾಮದ 4 ಕುಟುಂಬಗಳ ಬದುಕಿನ ಸ್ಥಿತಿ ಚಿಂತಾಜನಕವಾಗಿದೆ. ಒಂದೂವರೆ ವರ್ಷದ ಹಿಂದೆ ಅದ್ಯಾರೋ ಗುಡಿಸಲಲ್ಲಿ ಯಾಕೀರ್ತೀರಾ. ಗುಡಿಸಲು ಕೆಡವಿ ಸರ್ಕಾರ ಮನೆ ಕಟ್ಕೊಡುತ್ತೆ ಎಂದಿದ್ದಾರೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್  ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜು.10): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜೇಡಿಕೊಂಡ ಗ್ರಾಮದ 4 ಕುಟುಂಬಗಳ ಬದುಕಿನ ಸ್ಥಿತಿ ಚಿಂತಾಜನಕವಾಗಿದೆ. ಒಂದೂವರೆ ವರ್ಷದ ಹಿಂದೆ ಅದ್ಯಾರೋ ಗುಡಿಸಲಲ್ಲಿ ಯಾಕೀರ್ತೀರಾ. ಗುಡಿಸಲು ಕೆಡವಿ ಸರ್ಕಾರ ಮನೆ ಕಟ್ಕೊಡುತ್ತೆ ಎಂದಿದ್ದಾರೆ. ಅದನ್ನೇ ನಂಬಿದ ಈ ಬಡ ಕುಟುಂಬಗಳು ಇದ್ದ ಗುಡಿಸಲನ್ನೂ ಬೀಳಿಸಿ ಹೊಸ ಮನೆಗೆ ಪೌಂಡೇಷನ್ ತೆಗೆದಿದ್ರು. ಆದ್ರೆ, ಅಲ್ಲಿಂದ ಇಲ್ಲಿವರೆಗೂ ಇವ್ರಿಗೆ  ಮನೆ ನಿರ್ಮಾಣ ಆಗೇ ಇಲ್ಲ. ಇದೀಗ ಕಾತಾಳೆ ಮರದ ಎಲೆಯಲ್ಲಿ ಗುಡಿಸಲು ಕಟ್ಕೊಂಡು ಮಳೆಯಲ್ಲೆ ನೆನೆಯುತ್ತಾ, ಚಳಿಯಲ್ಲಿ ನಡುಗುತ್ತಾ ಬದುಕ್ತಿದ್ದಾರೆ. ಶಾರದಾ, ಮಾರಯಪ್ಪ, ಶೇಷಯ್ಯ, ಮಹಾರುದ್ರ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿ ದಿನಕಳೆಯುತ್ತಿದ್ದಾರೆ. 

Tap to resize

Latest Videos

undefined

ಕಾತಾಳೆ ಮರದ ಎಲೆಯಲ್ಲಿ ಗುಡಿಸಲು ಕಟ್ಕೊಂಡು ಜೀವನ: ಇನ್ನು ಈ ಕುಟುಂಬಗಳು ಒಂದೂವರೆ ವರ್ಷದಿಂದ ಮನೆಯಿಲ್ಲದೇ  ಪರದಾಡಿದ್ದಾರೆ. ಅಲೆದಾಡಿದ್ದಾರೆ. ಬುಡಕಟ್ಟು ಜನಾಂಗಕ್ಕೆ ಸೇರಿರೋ ಈ 4 ಕುಟುಂಬಗಳು ಸೂರಿಗಾಗಿ ಗ್ರಾಮ ಪಂಚಾಯಿತಿಗೆ ಅಲೆದು... ಅಲೆದು ಸುಸ್ತಾಗಿದ್ದಾರೆ. ಅಂದು ಮನೆ ಕೊಡಿಸ್ತೀವಿ ಅಂದೋರು ಈವರೆಗೂ ಎಲ್ಲಿದ್ದಾರೋ ಗೊತ್ತಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಹೇಳಿದ ಮಾತಿಗೆ ಇದ್ದ ಮನೆಯನ್ನು ಕೆಡವಿದ್ದಾರೆ. ಇನ್ನು ಇವ್ರಿಗೆ ಓಡಾಡೋದಕ್ಕೆ ರಸ್ತೆಯೂ ಇಲ್ಲ. ಕಿ.ಮೀ.ಗಟ್ಟಲೇ ನಡ್ಕೊಂಡೇ ಹೋಗಬೇಕು. ಮನೆಯಂತು ನಿರ್ಮಾಣವಾಗ್ಲಿಲ್ಲ. ಈದೀಗ, ಅವ್ರೆ ಸೂರು ಕಟ್ಕೊಂಡಿದ್ದಾರೆ. ಅದು ಕಾತಾಳೆ ಗಿಡದ್ದು. ಗೋಡೆಯಿಲ್ಲ. ಕರೆಂಟ್ ಇಲ್ಲ. ಸೀಮೆಎಣ್ಣೆ ದೀಪವೇ ಗತಿ. ಒಂದೇ ಮನೆಯಲ್ಲಿ ಅಡುಗೆ. 4 ಕುಟುಂಬಗಳು ವಾಸ. ಜೋರು ಮಳೆ ಬಂದ್ರೆ ಈ ಮನೆಯಾದ್ರು ಉಳಿಯುತ್ತಾ ಅನ್ನೋ ಅತಂಕದಲ್ಲಿ ಬದುಕ್ತಿದ್ದಾರೆ. 

ಮುಸ್ಲಿಮರು ಕಾಂಗ್ರೆಸ್ಸಿನ ಷಡ್ಯಂತ್ರಕ್ಕೆ ಬಲಿಯಾಗಬಾರದು: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಜನಪ್ರತಿನಿಧಿಗಳು ವಿರುದ್ದ ಆಕ್ರೋಶ: ಯಾರದ್ದೋ ಮಾತು ಕೇಳಿದ ಬುಡಕಟ್ಟು ಜನ ಇದ್ದ ಗುಡಿಸಲನ್ನೂ ಕೆಡವಿದ್ರು. ಪೌಂಡೇಷನ್ ತೆಗೆದ್ರು. ಆದ್ರೆ, ಸರ್ಕಾರದಿಂದ ಮನೆ ಕಟ್ಟೋಕೆ ಅನುದಾನವಂತೂ ಬರ್ಲೇ ಇಲ್ಲ. ಇಲ್ಲದವರಿಗೆ ಸರ್ಕಾರದಿಂದ ಮನೆ ಕಟ್ಟೋ ಯೋಜನೆ ಇದ್ದೇ ಇದೆ. ಆದ್ರೆ, ಯಾಕೆ ಇಂತಹಾ ಮನೆಯಿಲ್ಲದವರಿಗೆ, ಮನೆಗಾಗಿ ಪರದಾಡ್ತಿರೋರಿಗೆ ಮನೆ ಕೊಟ್ಟಿಲ್ಲ ಅನ್ನೋದು ಅರ್ಥವಾಗ್ತಿಲ್ಲ. ಸರ್ಕಾರದ ವಿರುದ್ಧ ಸ್ಥಳೀಯರು ಕೂಡ ಅಸಮಾಧಾನ ಹೊರಹಾಕ್ತಿದ್ದಾರೆ.

click me!