'BSY ಕಾಲಿಗೆ ಚಕ್ರವಾದ್ರೂ ಕಟ್ಟಿಕೊಳ್ಳಲಿ, ಏನಾದ್ರೂ ಕಟ್ಟಿಕೊಳ್ಳಲಿ ನನಗೇನು'

Web Desk   | Asianet News
Published : Nov 22, 2019, 03:02 PM IST
'BSY ಕಾಲಿಗೆ ಚಕ್ರವಾದ್ರೂ ಕಟ್ಟಿಕೊಳ್ಳಲಿ, ಏನಾದ್ರೂ ಕಟ್ಟಿಕೊಳ್ಳಲಿ ನನಗೇನು'

ಸಾರಾಂಶ

ಯಡಿಯೂರಪ್ಪ ತಮ್ಮ ಅಧಿಕಾರ ಉಳಿಸಿಕೊಳ್ಳಲು ಕಾಲಿಗೆ ಚಕ್ರವಾದ್ರೂ ಕಟ್ಟಿಕೊಳ್ಳಲಿ, ಶ್ರೀಚಕ್ರವಾದ್ರೂ ಕಟ್ಟಿಕೊಳ್ಳಲಿ| ನಮ್ಮದು ಯಾವುದೇ ಅಭ್ಯಂತರವಿಲ್ಲ| ನಮಗೆ ಜನ ಏನು ಓಟು ಹಾಕುತ್ತಾರೆ ಅದೇ ಮುಖ್ಯ ಎಂದ ಡಿಕೆಶಿ|ಹುಣಸೂರಿಗೆ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ| ಚುನಾವಣಾ ಪ್ರಚಾರಕ್ಕೆ ಎಲ್ಲೆಲ್ಲಿ ನನ್ನನ್ನು ನಿಗದಿ ಮಾಡುತ್ತಾರೋ ಅಲ್ಲಲ್ಲಿ ನಾನು ಹೋಗುತ್ತೇನೆ| ನಾನು ಯಾವ ದೊಡ್ಡ ವ್ಯಕ್ತಿಯೂ ಅಲ್ಲ, ಕೇವಲ ಶಾಸಕ‌ ಮಾತ್ರ|

ಕಾರವಾರ(ನ.22): ಅನರ್ಹ ಶಾಸಕರ ವರ್ತನೆ ಯಾವ ಪಕ್ಷದಲ್ಲೂ ಅರಗಿಸಿಕೊಳ್ಳೋಕೆ ಸಾಧ್ಯವಿಲ್ಲ. ಇಂತವರಿಗೆ ಜನರು ಚುನಾವಣೆಯಲ್ಲಿ ಒಳ್ಳೆಯ ತೀರ್ಪು ನೀಡುತ್ತಾರೆ. ಉಪಚುನಾವಣೆಯಲ್ಲಿ ಯಾವ ಟಗ್ ಆಫ್ ವಾರ್ ಕೂಡಾ ಇಲ್ಲ. ‌ಮತದಾರ ಅಂತಿಮ ತೀರ್ಪು ಕೊಡ್ತಾರೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. 

ಶುಕ್ರವಾರದ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಮ್ಮ ಅಧಿಕಾರ ಉಳಿಸಿಕೊಳ್ಳಲು ಕಾಲಿಗೆ ಚಕ್ರವಾದ್ರೂ ಕಟ್ಟಿಕೊಳ್ಳಲಿ, ಶ್ರೀಚಕ್ರವಾದ್ರೂ ಕಟ್ಟಿಕೊಳ್ಳಲಿ, ನಮ್ಮದು ಯಾವುದೇ ಅಭ್ಯಂತರವಿಲ್ಲ. ನಮಗೆ ಜನ ಏನು ಓಟು ಹಾಕುತ್ತಾರೆ ಅದೇ ಮುಖ್ಯ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಉಪಚುನಾವಣೆಯಲ್ಲಿ ನಮ್ಮ ಪಕ್ಷದವರು ಶೆಡ್ಯೂಲ್ ನೀಡುತ್ತಾರೆ. ‌ಅದರಂತೆ ಕ್ಷೇತ್ರಗಳಿಗೆ ಭೇಟಿ ನೀಡುತ್ತೇನೆ. ಹುಣಸೂರಿಗೆ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ. ಚುನಾವಣಾ ಪ್ರಚಾರಕ್ಕೆ ಎಲ್ಲೆಲ್ಲಿ ನನ್ನನ್ನು ನಿಗದಿ ಮಾಡುತ್ತಾರೋ ಅಲ್ಲಲ್ಲಿ ನಾನು ಹೋಗುತ್ತೇನೆ. ನಾನು ಯಾವ ದೊಡ್ಡ ವ್ಯಕ್ತಿಯೂ ಅಲ್ಲ, ಕೇವಲ ಶಾಸಕ‌ ಮಾತ್ರ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ. 

PREV
click me!

Recommended Stories

ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ
ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ