ಸಂಕಷ್ಟದ ಸೂತ್ರ ಮರೆತು ನೀರು ಬಿಟ್ಟಿರುವುದು ಸಮಯೋಚಿತವಲ್ಲ. ನೀರು ಹರಿಸುವ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಮಾಡಿರುವ ಪಾಪಕ್ಕೆ ಮುದ್ರೆ ಒತ್ತಲು ನಾಳೆ ಸರ್ವಪಕ್ಷಗಳ ಸಭೆ ಮಾಡುತ್ತಿದ್ದಾರೆ ಎಂದು ಟೀಕಿಸಿದ ಮಾಜಿ ಸಚಿವ ಸಿ.ಟಿ.ರವಿ
ಮಂಡ್ಯ(ಆ.23): ಸ್ಟಾಲಿನ್ ಸ್ನೇಹಕ್ಕಾಗಿ ರಾಜ್ಯ ಸರ್ಕಾರ ಕರ್ನಾಟಕವನ್ನು ಬಲಿಕೊಟ್ಟಿದೆ. ತಮ್ಮ‘ಇಂಡಿಯಾ’ ವೈತ್ರಿಕೂಟದ ರಾಜಕೀಯ ಲಾಭಕ್ಕಾಗಿ ತಮಿಳುನಾಡಿಗೆ ನೀರು ಹರಿಸಿ ರಾಜ್ಯದ ಜನರಿಗೆ ಈ ಸರ್ಕಾರ ಶಾಪವಾಗಿ ಪರಿಣಮಿಸಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಕಿಡಿಕಾರಿದರು.
ಮಂಗಳವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಕಷ್ಟದ ಸೂತ್ರ ಮರೆತು ನೀರು ಬಿಟ್ಟಿರುವುದು ಸಮಯೋಚಿತವಲ್ಲ. ನೀರು ಹರಿಸುವ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಮಾಡಿರುವ ಪಾಪಕ್ಕೆ ಮುದ್ರೆ ಒತ್ತಲು ನಾಳೆ ಸರ್ವಪಕ್ಷಗಳ ಸಭೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
undefined
ಸಿದ್ದು ಸರ್ಕಾರದ ನಡೆಯ ಹಿಂದಿದ್ಯಾ I.N.D.I.A. ಋಣ..? ವಿರೋಧದ ಮಧ್ಯೆಯೂ ರಾಜ್ಯ ಸರ್ಕಾರ ನೀರು ಬಿಟ್ಟದ್ದೇಕೆ..?
ತಮಿಳುನಾಡಿಗೆ ಸಾಕಷ್ಟುನೀರು ಹರಿಸಿ ಈಗ ಸಭೆ ಮಾಡಿದರೆ ಏನು ಪ್ರಯೋಜನ? ನೀರು ಬಿಡುವ ಮೊದಲೇ ಸಭೆ ಕರೆಯಬೇಕಿತ್ತು. ಇದು ಕಾಂಗ್ರೆಸ್ ಕರ್ನಾಟಕಕ್ಕೆ ಮಾಡಿರುವ ದೊಡ್ಡ ಅನ್ಯಾಯ ಎಂದು ದೂಷಿಸಿದರು.