ನಾನು ಸಂಘದ ಸ್ವಯಂ ಸೇವಕ, ಡಿಕೆಶಿ ಕೊತ್ವಾಲ್ ರಾಮಚಂದ್ರನ ಶಿಷ್ಯ: ಸಿ.ಟಿ ರವಿ

By Kannadaprabha NewsFirst Published Aug 15, 2023, 11:00 PM IST
Highlights

ವಿಭಜನೆ ಸಂದರ್ಭದಲ್ಲಿ ಬಲಿದಾನ, ಅತ್ಯಾಚಾರಗಳು ನಡೆದವು. ಅವುಗಳನ್ನು ನೆನೆಸಿಕೊಳ್ಳುವ ಉದ್ದೇಶದಿಂದ ವಿಭಜನೆ ವಿಭಿಷಕ್‌ ಸ್ಮತಿ ದಿವಸ ಸಮಾರಂಭ ಆಯೋಜಿಸಲಾಗಿದ್ದು, ಪಟ್ಟಣದಲ್ಲಿ ಬಲಿದಾನ ತೆತ್ತವರಿಗಾಗಿ ಮೌನ ಪಂಜಿನ ಮೆರವಣಿಗೆ ಆಯೋಜಿಸಲಾಗಿದೆ: ಚಿಕ್ಕೋಡಿ ಲೋಕಸಭೆ ಸದಸ್ಯ ಅಣ್ಣಾಸಾಹೇಬ ಜೊಲ್ಲೆ 

ಚಿಕ್ಕೋಡಿ(ಆ.16):  ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟಮೇಲೆ ಭಾರತ ಮತ್ತು ಪಾಕಿಸ್ತಾನ ದೇಶಗಳ ಪ್ರಧಾನಿಗಳ ತಪ್ಪು ನಿರ್ಧಾರದಿಂದ ಭಾರತ ದೇಶ ವಿಭಜನೆ ಹೊಂದಿ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ದೇಶಗಳ ಉದಯವಾಗಿ ಅಲ್ಲಿರುವ ಭಾರತೀಯರು ಹಾಗೂ ಇಲ್ಲಿನ ಮುಸ್ಲಿಂರು ವಲಸೆ ಹೊರಟ ಸಂದರ್ಭದಲ್ಲಿ ಸಹಸ್ರಾರು ಜನ ಕುಟುಂಬಗಳು ಮನೆ ಮಠಗಳು ಕಳೆದುಕೊಂಡು ನಿರಾಶ್ರಿತರಾದವು ಎಂದು ಚಿಕ್ಕೋಡಿ ಲೋಕಸಭೆ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಪಟ್ಟಣದ ಚಿಕ್ಕೋಡಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡ ವಿಭಜನೆ ವಿಭಿಷಕ್‌ ಸ್ಮತಿ ದಿವಸ ಸಮಾರಂಭದಲ್ಲಿ ಮಾತನಾಡಿ, ವಿಭಜನೆ ಸಂದರ್ಭದಲ್ಲಿ ಬಲಿದಾನ, ಅತ್ಯಾಚಾರಗಳು ನಡೆದವು. ಅವುಗಳನ್ನು ನೆನೆಸಿಕೊಳ್ಳುವ ಉದ್ದೇಶದಿಂದ ವಿಭಜನೆ ವಿಭಿಷಕ್‌ ಸ್ಮತಿ ದಿವಸ ಸಮಾರಂಭ ಆಯೋಜಿಸಲಾಗಿದ್ದು, ಪಟ್ಟಣದಲ್ಲಿ ಬಲಿದಾನ ತೆತ್ತವರಿಗಾಗಿ ಮೌನ ಪಂಜಿನ ಮೆರವಣಿಗೆ ಆಯೋಜಿಸಲಾಗಿದೆ ಎಂದರು.

ಗ್ಯಾರಂಟಿ ಬಗ್ಗೆ ಟೀಕಿಸಿದವರಿಗೆ ತಕ್ಕ ಉತ್ತರ: ಸಚಿವ ಸತೀಶ್‌ ಜಾರಕಿಹೊಳಿ

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, 1947 ಅಖಂಡ ಭಾರತ ವಿಭಜನೆಯಾಗಿ ತುಂಡು ತುಂಡಾಯಿತು. ಈ ಸಂದರ್ಭದಲ್ಲಿ ಹಿಂಸಾಚಾರ ಪ್ರಾಣ ಹಾನಿಗಳಾದವು. ಇದು ಭಾರತೀಯರಿಗೆ ಮರೆಯಲಾಗದ ದಿನ ಎಂದರು.

ಮಾಜಿ ಶಾಸಕ ಪಿ.ರಾಜೀವ ಮಾತನಾಡಿ, ಭಾರತ ವಿಭಜನೆಯ ಸಂದರ್ಭದಲ್ಲಿ ದೊಡ್ಡಪ್ರಮಾಣದಲ್ಲಿ ನರಹತ್ಯೆಯಾದವು 15 ಲಕ್ಷಕ್ಕೂ ಮೀರಿ ಜನ ಸಾವನಪ್ಪಿದರು. ಈ ಸಂದರ್ಭದಲ್ಲಿ ಭಾರತೀಯರು ಪಾಕಿಸ್ತಾನಕ್ಕೆ ಹಾಗೂ ಭಾರತೀಯರು ವಲಿಸಗರು ಬರುವ ಸಂದರ್ಭದಲ್ಲಿ ಆದ ಸಾವು ನೋವುಗಳು ಮತ್ತೊಮ್ಮೆ ದೇಶಕ್ಕೆ ಮರುಕಳಿಸಬಾರದು ಎಂದರು.

ರಾಯಬಾಗ ಶಾಸಕ ಡಿ.ಎಂ.ಐಹೊಳೆ, ಅಥಣಿ ಮಾಜಿ ಶಾಸಕ ಮಹೇಶ ಕುಮಟೊಳ್ಳಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಅಪ್ಪಾಸಾಹೇಬ್‌ ಚೌಗಲಾ, ದೀಪಕ ಪಾಟೀಲ ಸೇರಿದಂತೆ ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಳಿಕ ಪಟ್ಟಣದ ಭವ್ಯ ಮೌನ ಪಂಜಿನ ಮೆರವಣಿಗೆ ನಡೆಯಿತು. ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಾಂಭವಿ ಅಶ್ವಥಪೂರ ಸ್ವಾಗತಿಸಿದರು. ಮಂಡಳ ಅಧ್ಯಕ್ಷ ಸಂಜಯ ಪಾಟೀಲ ನಿರೂಪಿಸಿದರು. ಪ್ರಣವ ಮಾನವಿ ವಂದಿಸಿದರು.

click me!