ಬೆಳಗಾವಿ: ಡಾ.ಅಪ್ಪಾಸಾಹೇಬ್ ನಾಯ್ಕಲ್‌ಗೆ ಉತ್ತಮ ಗ್ರಂಥಪಾಲಕ ರಾಜ್ಯ ಪ್ರಶಸ್ತಿ

By Girish Goudar  |  First Published Aug 15, 2023, 10:20 PM IST

2023ನೇ ಸಾಲಿನ ‘ಉತ್ತಮ ಗ್ರಂಥಪಾಲಕ ರಾಜ್ಯ ಪ್ರಶಸ್ತಿ’ ಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕೋಜಿಕೋಡ್‌ನ ಮುಖ್ಯ ಗ್ರಂಥಾಲಯಾಧಿಕಾರಿ ಡಾ.ಅಪ್ಪಾಸಾಹೇಬ್ ನಾಯ್ಕಲ್ ಸೇರಿದಂತೆ ಇತರಿಗೆ ನೀಡಿ ಗೌರವಿಸಲಾಯಿತು. 
 


ಬೆಳಗಾವಿ(ಆ.16):  ಗ್ರಂಥಪಾಲಕರ ದಿನಾಚರಣೆಯಲ್ಲಿ ಗ್ರಂಥಾಲಯ ವಿಜ್ಞಾನಕ್ಕೆ ಮಹತ್ವದ ಕೊಡುಗೆ ಹಾಗೂ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಗುರುತಿಸಿ 2023ನೇ ಸಾಲಿನ ‘ಉತ್ತಮ ಗ್ರಂಥಪಾಲಕ ರಾಜ್ಯ ಪ್ರಶಸ್ತಿ’ ಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕೋಜಿಕೋಡ್‌ನ ಮುಖ್ಯ ಗ್ರಂಥಾಲಯಾಧಿಕಾರಿ ಡಾ.ಅಪ್ಪಾಸಾಹೇಬ್ ನಾಯ್ಕಲ್ ಸೇರಿದಂತೆ ಇತರಿಗೆ ನೀಡಿ ಗೌರವಿಸಲಾಯಿತು. 

ಗ್ಯಾರಂಟಿ ಬಗ್ಗೆ ಟೀಕಿಸಿದವರಿಗೆ ತಕ್ಕ ಉತ್ತರ: ಸಚಿವ ಸತೀಶ್‌ ಜಾರಕಿಹೊಳಿ

Tap to resize

Latest Videos

ಇತ್ತೀಚೆಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಭಾರತ ಗ್ರಂಥಾಲಯ ವಿಜ್ಞಾನ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ಅವರ 131 ನೇ ಜನ್ಮ ದಿನಾಚರಣೆ ಅಂಗವಾಗಿ ಶನಿವಾರ ಬೆಂಗಳೂರಿನ ಹಂಪಿನಗರದಲ್ಲಿ ನಡೆದ ಈ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶಕುಮಾರ ಎಸ್.ಹೊಸಮನಿ, ಸಾಹಿತಿ ಶೂದ್ರ ಶ್ರೀನಿವಾಸ್ ಸೇರಿದಂತೆ ಗಣ್ಯರು ಇದ್ದರು.

click me!