ಇಂಡಿ: ಮಾಜಿ ಶಾಸಕ ರವಿಕಾಂತ ಪಾಟೀಲಗೆ ಮಾತೃವಿಯೋಗ

Suvarna News   | Asianet News
Published : Sep 13, 2020, 01:58 PM ISTUpdated : Sep 13, 2020, 02:08 PM IST
ಇಂಡಿ: ಮಾಜಿ ಶಾಸಕ ರವಿಕಾಂತ ಪಾಟೀಲಗೆ ಮಾತೃವಿಯೋಗ

ಸಾರಾಂಶ

ರವಿಕಾಂತ ಪಾಟೀಲ ತಾಯಿ ಪಾರ್ವತಿಬಾಯಿ ನಿಧನ| ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದ ಕ್ಷೇತ್ರದ ಮಾಜಿ ಶಾಸಕ ರವಿಕಾಂತ ಪಾಟೀಲ| ಪಾರ್ವತಿಬಾಯಿ ಅವರ ನಿಧನಕ್ಕೆ ಗಣ್ಯರು ಸೇರಿದಂತೆ ಅಪಾರ ಬಂಧು ಬಳಗದವರಿಂದ ಸಂತಾಪ| 

ವಿಜಯಪುರ(ಸೆ.13): ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರವಿಕಾಂತ ಪಾಟೀಲ ಅವರ ತಾಯಿ ಪಾರ್ವತಿಬಾಯಿ ಅವರು ಇಂದು(ಭಾನುವಾರ) ನಿಧನರಾಗಿದ್ದಾರೆ. ಮಹಾರಾಷ್ಟ್ರದ ಸೋಲಾಪುರ ನಗರದಲ್ಲಿರುವ ಅವರ ನಿವಾಸದಲ್ಲಿ ಪಾರ್ವತಿಬಾಯಿ ಇಹಲೋಕ ತ್ಯಜಿಸಿದ್ದಾರೆ. ಪಾರ್ವತಿಬಾಯಿ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. 

ಮಹಾರಾಷ್ಟ್ರದ ಸೋಲಾಪುರ ನಗರದಲ್ಲಿರುವ ಅವರ ನಿವಾಸದಲ್ಲಿ ಪಾರ್ವತಿಬಾಯಿ ಇಹಲೋಕ ತ್ಯಜಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಸೋಲಾಪುರ ನಗರದ ರವಿಶಂಕರ್ ಬಂಗಲಾ, ರಾಮಲಾಲ್‌ ಚೌಕ್, ರೇಲ್ವೆ ಲೈನ್ಸ್‌ನಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ. 

ಸಿಂದಗಿ: ಸಾರಿಗೆ ಬಸ್‌, ಬೈಕ್‌ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ಇಬ್ಬರ ದುರ್ಮರಣ

ರವಿಕಾಂತ ಪಾಟೀಲ ಅವರ ತಾಯಿ ಪಾರ್ವತಿಬಾಯಿ ಅವರ ನಿಧನಕ್ಕೆ ಗಣ್ಯರು ಸೇರಿದಂತೆ ಅಪಾರ ಬಂಧು ಬಳಗದವರು ಸಂತಾಪ ಸೂಚಿಸಿದ್ದಾರೆ. 
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC