ರಾಜೀನಾಮೆ ಬಳಿಕ ಮಂಗಳೂರಲ್ಲಿ ಸೆಂಥಿಲ್ : ಮುಂದಿನ ನಡೆ ಬಗ್ಗೆ ಪ್ರಕಟಿಸಿದ ಅಧಿಕಾರಿ

Published : Oct 02, 2019, 03:08 PM IST
ರಾಜೀನಾಮೆ ಬಳಿಕ ಮಂಗಳೂರಲ್ಲಿ ಸೆಂಥಿಲ್ : ಮುಂದಿನ ನಡೆ ಬಗ್ಗೆ ಪ್ರಕಟಿಸಿದ ಅಧಿಕಾರಿ

ಸಾರಾಂಶ

ರಾಜೀನಾಮೆ ಬಳಿಕ ಮೊದಲ ಬಾರಿಗೆ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ಮುಂದಿನ ನಡೆ ಬಗ್ಗೆ ಪ್ರಕಟಿಸಿದ್ದಾರೆ.

ಮಂಗಳೂರು [ಅ.02] : ರಾಜೀನಾಮೆ ಬಳಿಕ ಮೊದಲ ಬಾರಿಗೆ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್  ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. 

ಈ ವೇಳೆ ಸುವರ್ಣ ನ್ಯೂಸ್.ಕಾಮ್‌ಗೆ ಪ್ರತಿಕ್ರಿಯಿಸಿರುವ ಸಸಿಕಾಂತ್ ಸೆಂಥಿಲ್ ವೈಯಕ್ತಿಕ ಕಾರಣಕ್ಕಾಗಿ ತಾವು ರಾಜೀನಾಮೆ ನೀಡಿದ್ದಾಗಿ ಹೇಳಿದರು. 

ನನ್ನ ರಾಜೀನಾಮೆಯಲ್ಲಿ ಯಾರ ಪಾತ್ರವೂ ಇಲ್ಲ. ದೇಶದಲ್ಲಿ ಬಹಳ ವಿಚಾರಗಳು ನಡೆಯುತ್ತಿದ್ದು, ಅದನ್ನು ಸರ್ಕಾರದಿಂದ ಹೊರಗಿದ್ದೆ ಮಾಡಬೇಕಿದೆ. ಹೀಗಾಗಿ ತಾವು ತಮ್ಮ ಕೆಲಸ ತೊರೆದಿದ್ದಾಗಿ ಹೇಳಿದರು.

ನನಗೆ ಕರ್ನಾಟಕದಲ್ಲಿ ಯಾವುದೇ ಸರ್ಕಾರ ಅಥವಾ ರಾಜಕಾರಣಿಯಿಂದಲೂ ಒತ್ತಡ ಇಲ್ಲ. ಇಂದಿನವರೆಗೂ ಎಲ್ಲರೂ ನನ್ನ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ನನ್ನ ವಿರುದ್ಧ ಆರೋಪಗಳಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಹೇಳುವ ಹಕ್ಕಿದ್ದವರು ಮಾತನಾಡುತ್ತಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ತಾವು ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಗಳಿಗೂ ಕೂಡ ಬೆಂಬಲ ನೀಡಲ್ಲ. ಸಮಸ್ಯೆ ಇದ್ದಲ್ಲಿ ನನ್ನ ಕೆಲಸ ಮುಂದುವರಿಯುತ್ತದೆ ಎಂದು ಸೆಂಥಿಲ್ ಹೇಳಿದರು.

PREV
click me!

Recommended Stories

ಜಲಮಂಡಳಿ ನೀರಿನ ಬಿಲ್ ಬಾಕಿದಾರರಿಗೆ 'ಬಂಪರ್ ಆಫರ್': ಅಸಲು ಪಾವತಿಸಿದರೆ ಶೇ.100 ರಷ್ಟು ಬಡ್ಡಿ ಮನ್ನಾ!
ಕೇರಳ ನಿಯೋಗ ಕೋಗಿಲು ಬಡಾವಣೆಗೆ ಬಂದಿದ್ದು ರಾಜಕಾರಣ ಮಾಡಲು, ಹಣವನ್ನೇನು ಕೊಟ್ಟಿಲ್ಲ; ಸಚಿವ ಜಮೀರ್ ಕಿಡಿ!