ಸಚಿವ ಸ್ಥಾನ ನೀಡದ್ದಕ್ಕೆ ಬೇಸರವಿಲ್ಲ: ಲಕ್ಷ್ಮಣ ಸವದಿ

Kannadaprabha News   | Asianet News
Published : Aug 08, 2021, 03:19 PM ISTUpdated : Aug 08, 2021, 03:30 PM IST
ಸಚಿವ ಸ್ಥಾನ ನೀಡದ್ದಕ್ಕೆ ಬೇಸರವಿಲ್ಲ: ಲಕ್ಷ್ಮಣ ಸವದಿ

ಸಾರಾಂಶ

*  ನಾನು ಸೋತಾಗ ಡಿಸಿಎಂ ಸ್ಥಾನ ನೀಡಿ, ಉತ್ತಮ ಅವಕಾಶ ಕೊಟ್ಟಿದ್ದ ಪಕ್ಷದ ವರಿಷ್ಠರು *  ಈಗ ಯಾವುದೇ ಸಚಿವ ಸ್ಥಾನ ಕೊಟ್ಟಿಲ್ಲ ಎಂದು ಕಾರ್ಯಕರ್ತರು ಧೃತಿಗೆಡಬಾರದು *  ಮುಂಬರುವ ದಿನಗಳಲ್ಲಿ ಉತ್ತಮ ಅವಕಾಶಗಳು ಬರುತ್ತವೆ   

ಅಥಣಿ(ಆ.08): ಯಾವುದೇ ಸಚಿವ ಸ್ಥಾನ ನೀಡದಿರುವುದರ ನನಗೆ ಬಗ್ಗೆ ಬೇಸರವಿಲ್ಲ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿ ಕೆಲಸ ಮಾಡಬೇಕಾಗುತ್ತದೆ. ಮುಂದೆ ಉತ್ತಮ ಅವಕಾಶಗಳಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. 

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸೋತಾಗ ಪಕ್ಷದ ವರಿಷ್ಠರು ಡಿಸಿಎಂ ಸ್ಥಾನ ನೀಡಿ, ಉತ್ತಮ ಅವಕಾಶ ಕೊಟ್ಟಿದ್ದಾರೆ. ಆಗ ಅಭಿಮಾನಿಗಳು, ಕಾರ್ಯಕರ್ತರು ಖುಷಿ ಪಟ್ಟಿದ್ದಾರೆ. ಈಗ ಯಾವುದೇ ಸಚಿವ ಸ್ಥಾನ ಕೊಟ್ಟಿಲ್ಲ ಎಂದು ಧೃತಿಗೆಡಬಾರದು ಎಂದು ತಿಳಿಸಿದ್ದಾರೆ. 

ಜಾರಕಿಹೊಳಿ ಕುಟುಂಬಕ್ಕೆ ತಪ್ಪಿದ ಮಂತ್ರಿಸ್ಥಾನ

ಕೆಲವೊಮ್ಮೆ ಮತ್ತೊಬ್ಬರಿಗೆ ಅವಕಾಶ ಕೊಡುವುದಕ್ಕಾಗಿ ಅವಧಿ ಆಧಾರಿತ ಖಾತೆ ಹಂಚಿಕೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಉತ್ತಮ ಅವಕಾಶಗಳು ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
 

PREV
click me!

Recommended Stories

ಕಸದ ರಾಶಿಯಿಂದ ಹತ್ತಿಕೊಂಡ ಬೆಂಕಿ ನೀಲಗಿರಿ ತೋಪಿಗೆ ; ಸ್ಥಳೀಯರ ಸಾಹಸದಿಂದ ತಪ್ಪಿದ ಭಾರಿ ಅನಾಹುತ!
ರಸ್ತೆ ಮೇಲೆಯೇ ಕಾರ್ ಪಾರ್ಕ್ ಮಾಡಿ ಹೋದ ಆಸಾಮಿ! ಟ್ರಾಫಿಕ್ ಜಾಮ್, ಸಾರ್ವಜನಿಕರು ಸೇರಿ ಏನು ಮಾಡಿದ್ರು ನೋಡಿ!