ಮೈಸೂರು : ಅಂಡಾಶಯ ಕ್ಯಾನ್ಸರ್‌ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿ ರಕ್ಷಣೆ

By Kannadaprabha NewsFirst Published Aug 8, 2021, 3:06 PM IST
Highlights
  • ಹತ್ತು ಗಂಟೆಗಳ ಸುದೀರ್ಘ ಹಾಗೂ ಕ್ಲಿಷ್ಟಕರ ಯಶಸ್ವಿ ಶಸ್ತ್ರಚಿಕಿತ್ಸೆ 
  • ತೀವ್ರತರದ ಅಂಡಾಶಯದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿ ರಕ್ಷಣೆ
  •  ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಿಂದ ಸಾಧನೆ

 ಮೈಸೂರು (ಆ.08): ಹತ್ತು ಗಂಟೆಗಳ ಸುದೀರ್ಘ ಹಾಗೂ ಕ್ಲಿಷ್ಟಕರ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ತೀವ್ರತರದ ಅಂಡಾಶಯದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯನ್ನು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಬದುಕಿಸಿದ್ದಾರೆ.

ತೀವ್ರವಾದ ಅಂಡಾಶಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 40 ವರ್ಷದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗುಣಪಡಿಸುವ ಮೂಲಕ ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ.ಕೆ.ಆರ್‌. ಸುಹಾಸ್‌ ಮತ್ತು ಡಾ.ಎಚ್‌.ಎಂ. ಲೋಕೇಶ್‌ ನೇತೃತ್ವದ ಆಂಕೊಲಾಜಿ ವಿಭಾಗವು ತನ್ನ ವೈದ್ಯಕೀಯ ಸಾಧನೆಗೆ ಮತ್ತೊಂದು ಗರಿ ಸೇರಿದೆ. ಸೈಟೋರೆಡಕ್ಟಿವ್‌ ಸರ್ಜರಿ ಮತ್ತು ಹೈಪರ್ಥರ್ಮಿಕ್‌ ಇಂಟ್ರಾಪೆರಿಟೋನಿಯಲ್‌ ಕೀಮೋಥೆರಪಿ ಶಸ್ತ್ರಚಿಕಿತ್ಸೆ ಮೂಲಕ ರೋಗಿಯನ್ನು ರಕ್ಷಿಸಲಾಗಿದೆ.

ಯೋನಿ ಇನ್ಫೆಕ್ಷನ್ , ಕ್ಯಾನ್ಸರ್ ಸಮಸ್ಯೆ ತಡೆಯಲು ನೀವೇನು ಮಾಡಬೇಕು?

ಮೂರು ವಾರಗಳ ಕಾಲ ಹೊಟ್ಟೆನೋವಿನಿಂದ ಬಳಲುತ್ತಿದ್ದ ಶೋಭಾರಾಣಿ (ಹೆಸರು ಬದಲಿಸಲಾಗಿದೆ) ಅವರನ್ನು, ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಯಿತು. ವೈದ್ಯಕೀಯ ತಪಾಸಣೆಯಲ್ಲಿ ರೋಗಿಯ ಹೊಟ್ಟೆಯಲ್ಲಿ ಅನೇಕ ಕ್ಯಾನ್ಸರ್‌ ಕೋಶಗಳ ಶೇಖರಣೆಯೊಂದಿಗೆ ದೊಡ್ಡ ಅಂಡಾಶಯದ ಗೆಡ್ಡೆ ಇರುವುದು ಖಾತ್ರಿಯಾಯಿತು. ಕ್ಯಾನ್ಸರ್‌ ತೀವ್ರತರದ ಹಂತದಲ್ಲಿದ್ದು ಮತ್ತು ಹೊಟ್ಟೆಯ ಉದ್ದಕ್ಕೂ ಹರಡಿಕೊಂಡಿದ್ದರಿಂದ ಕ್ಯಾನ್ಸರ್‌ ಪ್ರದೇಶವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯುವುದು ಅಥವಾ ಕೀಮೋಥೆರಪಿಯಂತಹ ಯಾವುದೇ ಸಾಂಪ್ರದಾಯಿಕ ವಿಧಾನಗಳು ಸೀಮಿತ ಯಶಸ್ಸನ್ನು ನೀಡುತ್ತವೆ ಎಂದು ಅರಿತುಕೊಂಡ ವೈದ್ಯರು ರೋಗಿಗೆ ಸೈಟೋರೆಡಕ್ಟಿವ್‌ ಸರ್ಜರಿ + ಹೈಪರ್ಥರ್ಮಿಕ್‌ ಇಂಟ್ರಾಪೆರಿಟೋನಿಯಲ್‌ ಕೀಮೋಥೆರಪಿ (ಸಿ.ಆರ್‍.ಎಸ್‌ + ಎಚ….ಐ.ಪಿ.ಇ.ಸಿ), ಸುಧಾರಿತ ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆ ಸೂಚಿಸಿದರು.

ಹಿರಿಯ ಹೃದಯ ಶಸ್ತ್ರಚಿಕಿತ್ಸಕ ಡಾ.ಎಂ.ಎನ್‌. ರವಿ ಮಾತನಾಡಿ, ಕಿಬ್ಬೊಟ್ಟೆಯ ಕುಳಿಯಲ್ಲಿರುವ ಕೆಲವು ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡುವುದು ಒಂದು ಸವಾಲು. ಆಸ್ಪತ್ರೆಯಲ್ಲಿ ನಮ್ಮ ತಜ್ಞ ವೈದ್ಯರ ತಂಡವಿದ್ದು, ಸೈಟೋರೆಡಕ್ಟಿವ್‌ ಶಸ್ತ್ರಚಿಕಿತ್ಸೆಯ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಎಚ್‌ಐಪಿಇಸಿ ಯೊಂದಿಗೆ ನಿಭಾಯಿಸುವಲ್ಲಿ ಅವರು ಪರಿಣಿತರಾಗಿದ್ದರೆ, ನಾವು ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಸುಲಭವಾಗುವಂತೆ ಇತ್ತೀಚಿನ ರೋಗನಿರ್ಣಯ ತಂತ್ರಜ್ಞಾನದ ಬಳಕೆಯಿಂದ ಉತ್ಕೃಷ್ಟವಾದ ಚಿಕಿತ್ಸೆಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.

click me!