'BJP ಆದೇಶ ತೋರಿಸಿದ್ರೆ ರಾಜಕೀಯ ನಿವೃತ್ತಿ'

Kannadaprabha News   | Asianet News
Published : Oct 30, 2021, 07:16 AM ISTUpdated : Oct 30, 2021, 07:31 AM IST
'BJP ಆದೇಶ ತೋರಿಸಿದ್ರೆ ರಾಜಕೀಯ ನಿವೃತ್ತಿ'

ಸಾರಾಂಶ

*  ಮಾಜಿ ಶಾಸಕ ಮಂಕಾಳ ವೈದ್ಯ ಶಾಸಕ ಸುನೀಲ್‌ ನಾಯ್ಕಗೆ ಸವಾಲ್‌ *  ಹಿಂದೂತ್ವದ ಹೆಸರಲ್ಲಿ ಜನರ ಮಧ್ಯೆ ವಿಷಬೀಜ ಭಿತ್ತಿ ಒಡೆದು ಆಳುತ್ತಿರುವ ಬಿಜೆಪಿ *  ಅಧಿಕಾರಕ್ಕೆ ಬಂದು 4 ವರ್ಷವಾಗುತ್ತಾ ಬಂದರೂ ಒಂದೇ ಒಂದು ಮನೆ ಮಂಜೂರಾಗಿಲ್ಲ

ಹೊನ್ನಾವರ(ಅ.30):  ಸಿದ್ದರಾಮಯ್ಯ(Siddaramaiah) ನೇತ್ರತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮುಂದುವರೆಯುತ್ತಿದೆ. ಗೇರುಸೊಪ್ಪಾ ಸೇತುವೆ ತಮ್ಮ ಅವಧಿಯಲ್ಲಿ ತಂದಿರುವುದು ಎಂದು ಸುಳ್ಳು ಹೇಳುವ ಬದಲು ಆದೇಶಪ್ರತಿ ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಶಾಸಕ ಸುನೀಲ್‌ ನಾಯ್ಕಗೆ(Sunil Naik) ಸವಾಲ್‌ ಎಸೆದಿದ್ದಾರೆ.

ತಾಲೂಕಿನ ಖರ್ವಾ ಗ್ರಾಮದ ಹರಿಜನಕೇರಿ ಸಭಾಭವನದಲ್ಲಿ ಸ್ವಾತ್ರಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ಮಹಾತ್ಮಗಾಂಧಿ ಗ್ರಾಮ ಸ್ವರಾಜ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾಗುತ್ತಾ ಬಂದರೂ ಕ್ಷೇತ್ರದಲ್ಲಿ ಒಂದೇ ಒಂದು ಮನೆ ಮಂಜೂರಾಗಿಲ್ಲ. ನನ್ನ ಅವಧಿಯಲ್ಲಿ ಏಳು ಸಾವಿರ ಮನೆ ಮಂಜೂರಾಗಿತ್ತು. ಆದರೆ ಇವರ ಅವಧಿಯಲ್ಲಿ ಹೊಸ ಮನೆ ತರುವುದಿರಲಿ ಮಂಜೂರಾದ ಮನೆಗಳಿಗೆ ಅನುದಾನವು ನೀಡಲಾಗಿಲ್ಲ. ತಹಸೀಲ್ದಾರ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಘೇರಾವ್‌ ಹಾಕಬೇಕು ಎಂದರು.

ಕುಮಟಾದ ಬಾಂಬ್‌ ಅಸಲಿಯಲ್ಲ ಡಮ್ಮಿ: ನಿಟ್ಟುಸಿರುಬಿಟ್ಟ ಜನತೆ

ಗ್ರಾಮೀಣ ಭಾಗಕ್ಕೆ ಹೊಸ ರಸ್ತೆ ನಿರ್ಮಾಣ ಆಶೆ ತೋರಿಸುವ ಬದಲು ಇರುವಂತಹ ರಸ್ತೆಗಳ ಹೊಂಡವಾದರೂ ಮುಚ್ಚಿ ಸಂಚಾರ ಯೋಗ್ಯ ಮಾಡಿ. 132 ಕಾಮಗಾರಿ 23 ಕೋಟಿ ಅನುದಾನ ತಂದಿರುವ ಬಗ್ಗೆ ರಸ್ತೆ ಬದಿಯ ಬ್ಯಾನರ್‌ ನೋಡಿ ನಗು ಬಂದಿದೆ. ನನ್ನ ಅವಧಿಯಲ್ಲಿ ಒಂದೊಂದು ಕಾಮಗಾರಿಗೆ 20ರಿಂದ 30 ಕೋಟಿ ಅನುದಾನ(Grants) ತಂದಿರುವೆ ಎಂದು ಕುಟುಕಿದರು.

ಹಿಂದೂತ್ವದ(Hindutva) ಹೆಸರಲ್ಲಿ ಜನರ ಮಧ್ಯೆ ವಿಷಬೀಜ ಭಿತ್ತಿ ಒಡೆದು ಆಳುತ್ತಿದ್ದಾರೆ. ಹಿಂದೂ ದೇವಾಲಯ(Hindu Temple) ಕೆಡವು ಇವರಿಗೆ ಯಾವ ನೈತಿಕತೆಯಿಂದ ರಾಜಕೀಯ(Politics) ಮಾಡುತ್ತಾರೆ ಎಂದು ಜರೆದರು. ಅಂದು ಕಾಂಗ್ರೆಸ್‌(Congress) ಸರ್ಕಾರದ ಅವಧಿಯಲ್ಲಿ ಬೆಲೆ ಎರಿಕೆ ಎಂದು ಬೀದಿಯಲ್ಲಿ ನಿಂತು ಬೊಬ್ಬಿರಿದ ಬಿಜೆಪಿ(BJP) ಶೋಭಕ್ಕ ಈಗ ಎಲ್ಲಿ ಹೋದರು? ಎಂದು ವ್ಯಂಗ್ಯವಾಡಿದರು. ಇದು ಪೂರ್ಣಾವಧಿ ಸರ್ಕಾರವಲ್ಲ ಯಾವ ಕ್ಷಣದಲ್ಲಿಯು ಚುನಾವಣೆ(Election) ಘೋಷಣೆಯಾಗಬಹುದು ಎಂದರು.

ಮಂಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ರಾಜ್ಯದಿಂದ(Karnataka) ಗೋವಾಕ್ಕೆ(Goa) ಟನ್‌ಗಟ್ಟಲೆ ಗೋಮಾಂಸ(Beef) ರಫ್ತಾಗುತ್ತಿದೆ(Export). ಆದರೆ ದಾರಿಯ ಮೇಲೆ ಹೋಗುವ ಆಕಳ, ಎಮ್ಮೆಯ ಹಾಲ ಕರೆದು ಕದಿಯುವ ಅಂದ ಗೋಭಕ್ತರಿಗೆ ಇದು ತಿಳಿಯುವುದಿಲ್ಲವೇ? ಎಂದು ಟಿಕಿಸಿದರು. ಸೋಲಿನ ಭಯ ಹಿನ್ನೆಲೆ ಬಿಜೆಪಿಗರು ಚುನಾವಣೆ ಗೆಲ್ಲಲು ಪರೇಶ್‌ ಮೇಸ್ತ, ಮಾಗೋಡ್‌ ಪ್ರಕರಣ ಟೂಲ್‌ ಕಿಟ್‌ ಬಳಸಿದರು ಎಂದು ಕುಟುಕಿದರು.

ಅಂಕೋಲಾ ಯುವತಿ ಹತ್ಯೆ​ಗೆ WhatsApp ಸ್ಟೇಟಸ್‌ ಕಾರ​ಣ

ಮಾಜಿ ಜಿಪಂ ಸದಸ್ಯ ಕೃಷ್ಣ ಗೌಡ ಮಾತನಾಡಿ, ಜಾತಿ ಮಧ್ಯೆ ವಿಷ ಬೀಜ ಬಿತ್ತುವ ಸಂಸ್ಕೃತಿ ಬಿಜೆಪಿಯದು. ಚುನಾವಣೆ ಸಮೀಪಿಸುತ್ತಿದ್ದಂತೆ ಬಡವರ ಸಾಯಿಸಿ ರಾಜಕೀಯ ಬಣ್ಣ ಹಚ್ಚಲು ಹಪಹಪಿಸುತ್ತಿದ್ದಾರೆ. ಬಿಜೆಪಿ ಬಡವರ ಪಕ್ಷವಲ್ಲ ಕಾರ್ಪೊರೇಟ್‌ ಉದ್ಯಮಿಗಳ ಪಕ್ಷ ಎಂದು ಲೇವಡಿ ಮಾಡಿದರು.

ಚಿತ್ರಕಲಾವಿದ ಶ್ರೀಕಾಂತ್‌ ನಾಯ್ಕ ಕಡಗೇರಿ ಅವರು ಮಂಕಾಳ ವೈದ್ಯರ ಭಾವಚಿತ್ರ ಬಿಡಿಸಿ ಉಡುಗೊರೆಯಾಗಿ ನೀಡಿದರು. ವೇದಿಕೆಯಲ್ಲಿ ಮಾಜಿ ತಾಪಂ ಸದಸ್ಯ ಲೋಕೇಶ್‌ ನಾಯ್ಕ, ಖರ್ವಾ ಗ್ರಾಪಂ ಅಧ್ಯಕ್ಷೆ ಭವಾನಿ ಗೌಡ, ಉಪಾಧ್ಯಕ್ಷ ಶ್ರೀರ್ಧ ನಾಯ್ಕ, ಸದಸ್ಯರಾದ ರಾಮ ಗೌಡ, ಇಬ್ರಾಹಿಂ, ಕಾಂಗ್ರೆಸ್‌ ಮುಖಂಡರಾದ ಐವಿ ನಾಯ್ಕ, ನಾಗರಾಜ ಹಳ್ಳೆರ್‌ ಮತ್ತಿತರಿದ್ದರು.
 

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ