ಆಗುಂಬೆ ಘಾಟ್‌ನಲ್ಲಿ ಪ್ರಪಾತಕ್ಕೆ ಬಿದ್ದ ಲಾರಿ, 4 ಸಾವು, ಹಲವರಿಗೆ ಗಾಯ

By Suvarna NewsFirst Published Oct 29, 2021, 6:27 PM IST
Highlights

* ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ
* ಆಗುಂಬೆ ಘಾಟ್‌ನಲ್ಲಿ  ಪ್ರಪಾತಕ್ಕೆ ಬಿದ್ದ ಲಾರಿ
* 4 ಸಾವು, ಹಲವರ ಸ್ಥಿತಿ ಗಂಭೀರ

ಉಡುಪಿ, (ಅ.29): ಖ್ಯಾತ ನಟ ಪುನೀತ್​ ರಾಜ್​ಕುಮಾರ್​ ಸಾವಿನ ಸುದ್ದಿ ತಿಳಿದು ಇಡೀ ಕರುನಾಡನ್ನು ಸಹ ಶೋಕ ಸಾಗರದಲ್ಲಿ ಮುಳುಗಿಸಿದೆ. ಇದರ ಮಧ್ಯೆ ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಆಗುಂಬೆ ಘಾಟಿಯ (Agumbe Ghat) 10ನೇ ತಿರುವಿನಲ್ಲಿ ಇಂದು (ಅ.29) ಐಶರ್ ವಾಹನವೊಂದು ಘಾಟಿಯ ಪ್ರಪಾತಕ್ಕೆ ಬಿದ್ದಿದೆ.  ವಾಹನದಲ್ಲಿವರ ಪೈಕಿ ನಾಲ್ವರು ಮೃತಪಟ್ಟಿದ್ದು (Deaths), ಐವರು ಗಂಭೀರ ಗಾಯಗೊಂಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಅಗಲಿಕೆ ತಂದ ಆಘಾತ, ಮೋದಿ ಸೇರಿ ಗಣ್ಯರ ಸಂತಾಪ; ಅ.29ರ ಟಾಪ್ 10 ಸುದ್ದಿ!

ಗಾಯಾಳುಗಳನ್ನು ಮಣಿಪಾಲ್ ಆಸ್ಪತ್ರೆಗೆ (Manipal Hospital) ದಾಖಲಿಸಲಾಗಿದೆ. ಲಾರಿ ಘಾಟಿಯನ್ನು ಇಳಿಯುವಾಗ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ.

ಲಾರಿಯೂ ಪ್ರಪಾತಕ್ಕೆ ಮುಗಿಚಿ ಬಿದ್ದಿದ್ದು, ಮೃತದೇಹಗಳನ್ನು ಮೇಲೆತ್ತಲು ಸ್ಥಳೀಯರು ಹರಸಾಹಸ ಪಟ್ಟರು. ಹೆಬ್ರಿ ಮತ್ತು ಆಗುಂಬೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಮೃತಪಟ್ಟವರನ್ನು ಕಾರ್ಕಳ ತಾಲೂಕಿನ ಮಿಯ್ಯಾರಿನವರು ಎಂದು ಎಂದು ತಿಳಿದುಬಂದಿದೆ.

 ಮೃತಪಟ್ಟವರೆಲ್ಲರೂ ಕಾರ್ಕಳ ತಾಲೂಕಿನ ನಿವಾಸಿಗಳಾಗಿದ್ದಾರೆ. ಲಾರಿ ಚಾಲಕ ಕರಿಯಕಲ್ಲು ನಿವಾಸಿ ಯಜ್ಞೇಶ್ (24), ಕಾರ್ಮಿಕರಾದ ಜೋಡುಕಟ್ಟೆ ಕಾರಲ್ ಗುಡ್ಡೆಯ ಮಂಜುನಾಥ (35), ಮಿಯ್ಯಾರು ನೆಲ್ಲಿಗುಡ್ಡೆಯ ಮಣಿ (28), ಹಿರಿಯಂಗಡಿಯ ಶಿವತಿಕೆರೆಯ ಶ್ರೀಜಿತ್ (21) ಎಂದು ಗುರುತಿಸಲಾಗಿದೆ. 

  ಗಾಯಗೊಂಡವರು ಕಾರ್ಕಳದವರಾದ ಮಂಜುನಾಥಗೌಡ ಕಾರ್ಕಳ, ಸೈಯದ್ ಆಸಿಫ್, ಗಣೇಶ್, ಮಹದೇವ ಮತ್ತು ನಾಗರಾಜ ಸಾಯಿಬ್ರಕಟ್ಟೆ. ಅವರೆಲ್ಲರೂ ಶಿವಮೊಗ್ಗದ ಚೆನ್ನಗಿರಿ ಧಾರ್ಮಿಕ ಕ್ಷೇತ್ರಕ್ಕೆ ಶಿಲ್ಪಕಲೆ  ಕೆತ್ತನೆಗೆ ಬೇಕಾದ ಕಲ್ಲುಗಳನ್ನು ಕಾರ್ಕಳದ ಜೋಡುಕಟ್ಟೆಯಿಂದ ಆದಿಶಕ್ತ್ಯಾತ್ಮಕ ಎಂಬ ಹೆಸರಿನ ಲಾರಿಯಲ್ಲಿ ಸಾಗಾಸಿ ಹಿಂದಕ್ಕೆ ಬರುತಿದ್ದಾಗ  ಈ ದುರ್ಘಟನೆ ಸಂಭಿವಿಸಿದೆ. 

  ಘಟನೆಯ ಮಾಹಿತಿ ಪಡೆದ ಹೆಬ್ರಿಮತ್ತು ಆಗುಂಬೆ ಪೊಲೀಸರು ಸ್ಥಳಕ್ಕೆ ಧಾವಿಸಿ ಈ ಘಾಟಿ ರಸ್ತೆಯಲ್ಲಿ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಿ ಕಾರ್ಯಾಚರಣೆ ನಡೆಸಿದರು. ಸ್ಥಳೀಯರ ನೆರವಿನಿಂದ ಹರಸಾಹಸಪಟ್ಟು ಕಂದಕದಿಂದ ಗಾಯಾಳುಗಳನ್ನು ಮತ್ತು ಮೃತದೇಹಗಳನ್ನು ಮೇಲೆತ್ತಿ ತಂದು ಆಸ್ಪತ್ರೆಗೆ ರವಾನಿಸಿದರು. ಅಪಘಾತದ ತೀವ್ರತೆ ಎಷ್ಟಿತ್ತೆಂದರೇ ಲಾರಿಯೊಂದಿಗೆ ಮೇಲಿನಿಂದ ಕೆಳಗೆ ಬಿದ್ದ ಭಾರಿ ಕಲ್ಲುಗಳಡಿಯಲ್ಲಿ ಸಿಕ್ಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 

  ಮೃತರು ಮತ್ತು ಗಾಯಾಳುಗಳು ದಿನಕೂಲಿ ಮಾಡಿ ಜೀವನ ನಡೆಸುತ್ತಿದ್ದ ಬಡ ಕಾರ್ಮಿಕರಾಗಿದ್ದು, ಅವರ ಕುಟುಂಬಗಳಿಗೆ ಆಧಾರಸ್ತಂಭಗಳಾಗಿದ್ದರು.

ಕಾರ್ಕಳ ದಿಂದ ಇಂಟರ್ಲಾಕ್ ತುಂಬಿಸಿಕೊಂಡು ಕೊಪ್ಪಕ್ಕೆ ಹೋಗಿ ಅನ್ ಲೋಡ್ ಮಾಡಿ ಬರುವ ವೇಳೆ ಅಪಘಾತ ಸಂಭವಿಸಿದೆ ಐಶರ್ ವಾಹನದಲ್ಲಿ 9 ಮಂದಿ ಕಾರ್ಮಿಕರು ಎಂದು ಹೇಳಲಾಗಿದೆ. ಹೆಬ್ರಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

click me!