* ಹಿರಿಯ ರಾಜಕಾರಣಿ ಮೋಟಮ್ಮ ಆತ್ಮಕಥನ ‘ಬಿದಿರು ನೀನ್ಯಾರಿಗಲ್ಲದವಳು’ ಬಿಡುಗಡೆ
* ರಾಜ್ಯಸಭೆಗೆ ಚುನಾವಣೆಗೆ 200 ಮಾತ್ರ ಖರ್ಚಾಗಿತ್ತು
* ನೇರ ಮಾತುಗಳ ಮೂಲಕ ಪಕ್ಷದಲ್ಲಿ ಮೋಟಮ್ಮ ನಿಷ್ಠುರ ಆಗಿದ್ದೂ ಉಂಟು
ಬೆಂಗಳೂರು(ಜೂ.12): ರಾಜ್ಯದಲ್ಲಿ ಸ್ತ್ರೀ ಶಕ್ತಿ ಸಂಘಗಳ ಸ್ಥಾಪನೆಗೆ ನಾಂದಿ ಹಾಡುವ ಮೂಲಕ ಮಹಿಳೆಯರಲ್ಲಿ ಆರ್ಥಿಕ ಶಕ್ತಿ ತುಂಬಿದ ಕೀರ್ತಿ ಮಾಜಿ ಸಚಿವೆ ಮೋಟಮ್ಮ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಶ್ಲಾಘಿಸಿದರು. ವಿಕಾಸ ಪ್ರಕಾಶನ ಹೊರತಂದಿರುವ ಹಿರಿಯ ರಾಜಕಾರಣಿ ಮೋಟಮ್ಮ ಅವರ ರಾಜಕೀಯ ಪಯಣದ ‘ಬಿದಿರು ನೀನ್ಯಾರಿಗಲ್ಲದವಳು’ ಆತ್ಮಕಥನ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸ್ತ್ರೀಶಕ್ತಿ ಸಂಘಗಳ ಸ್ಥಾಪನೆಗೆ ಸಂಬಂಧಿಸಿದ ಯೋಜನೆ ಪರಿಚಯಿಸಿದಾಗ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ತುಮಕೂರಿನಲ್ಲಿ ಆಯೋಜಿಸಿದ್ದ ಬೃಹತ್ ಮಹಿಳಾ ಸಮಾವೇಶದಲ್ಲಿ ಲಕ್ಷಾಂತರ ಜನ ಮಹಿಳೆಯರು ಆಗಮಿಸಿದ್ದರು. ಇದಾದ ನಂತರದಲ್ಲಿ ಸ್ತ್ರೀಶಕ್ತಿ ಸಂಘಗಳು ಸಾಕಷ್ಟುಬೆಳೆಯಿತು, ಅದರ ಯಶಸ್ಸು ಮೋಟಮ್ಮ ಅವರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.
undefined
Karnataka Congress: ಕಾಂಗ್ರೆಸ್ ಸದಸ್ಯತ್ವದಲ್ಲಿ ಹಿನ್ನಡೆ ಮೋಟಮ್ಮ, ಪುತ್ರಿಗೆ ಡಿಕೆಶಿ ಕ್ಲಾಸ್
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ನಡುವೆ ರಾಜಕೀಯ ವೈಮನಸ್ಸು ಪ್ರಾರಂಭವಾಗಿದ್ದ ಸಂದರ್ಭದಲ್ಲಿ ಮೋಟಮ್ಮ ರಾಜಕೀಯ ಪ್ರವೇಶಿಸಿದ್ದರು. ಈ ಇಬ್ಬರೂ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರಿಂದ ಮೋಟಮ್ಮ ಅವರ ವಿವಾಹ ಸಮಾರಂಭಕ್ಕೆ ಇಬ್ಬರೂ ನಾಯಕರು ಬಂದಿದ್ದರು ಎಂದು ಸ್ಮರಿಸಿಕೊಂಡರು.
ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಮಾತನಾಡಿ, ಬದುಕಿನಲ್ಲಿ ಹೆಚ್ಚಾಗಿ ಕಹಿಯನ್ನೇ ಉಂಡ ಮೋಟಮ್ಮ ಅವರು ರಾಜಕೀಯದಲ್ಲಿ ಬೆಳೆದ ರೀತಿ ಹಾಗೂ ರಾಜಕೀಯ ಪಯಣದ ಆತ್ಮಕಥನ ಹೊರತರುವ ಮೂಲಕ ಸಮಾಜಕ್ಕೆ ಸಮಾನತೆ ಮತ್ತು ಸ್ವಾಭಿಮಾನದ ಸಂದೇಶ ಸಾರಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜಕೀಯ ಪಯಣದಲ್ಲಿ ಮೋಟಮ್ಮ ಅವರು ಹಲವಾರು ಪೆಟ್ಟುಗಳನ್ನು ತಿಂದು ಇಷ್ಟು ಎತ್ತರಕ್ಕೆ ಏರಿದ್ದು ನಿಜವಾಗಿಯೂ ದೊಡ್ಡ ಸಾಧನೆ. ನೇರ ಮಾತುಗಳ ಮೂಲಕ ಪಕ್ಷದಲ್ಲಿ ಅವರು ನಿಷ್ಠುರ ಆಗಿದ್ದೂ ಉಂಟು ಎಂದರು.
ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ ಮಾತನಾಡಿ, 1994ರ ವಿಧಾನಸಭಾ ಚುನಾವಣೆ ವೇಳೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೋಟಮ್ಮ ಹೆಸರು ಕೈಬಿಡಲಾಗಿತ್ತು. ಆಗ ಮೋಟಮ್ಮ ಅವರ ಹಿನ್ನೆಲೆ ಮತ್ತು ಕೊಡುಗೆ ಪ್ರಸ್ತಾಪಿಸಿ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದೆ. ಆಗ ಟಿಕೆಟ್ ನೀಡುವ ಜತೆಗೆ ಮೋಟಮ್ಮ ಅವರನ್ನು ಪಕ್ಷದ ಕಾರ್ಯಕಾರಿಣಿ ಸಮಿತಿ ಸದಸ್ಯರನ್ನಾಗಿಯೂ ನೇಮಿಸಲಾಯಿತು. ಮೇಲೆ ಕುಳಿತವರು ಸಹಾಯ ಮಾಡಲು ತಯಾರಿದ್ದಾರೆ. ಆದರೆ, ರಾಜ್ಯದಲ್ಲಿರುವವರು ಏನು ಮಾಡುತ್ತಾರೆ ಎಂಬುದನ್ನು ನಾನು ಹೇಳಲಾರೆ ಎಂದರು.
Bengaluru Rains: ಮಳೆ ಅವಾಂತರದಿಂದ ‘ಬ್ರ್ಯಾಂಡ್ ಬೆಂಗಳೂರಿಗೆ’ ಧಕ್ಕೆ: ಎಸ್.ಎಂ.ಕೃಷ್ಣ
ಸಾಹಿತಿ ಕಮಲಾ ಹಂಪನಾ, ಪತ್ರಕರ್ತ ದಿನೇಶ್ ಅಮಿನ್‌ಮಟ್ಟು, ಮೈಸೂರು ವಿವಿಧ ನಿವೃತ್ತ ಪ್ರಾಧ್ಯಾಪಕ ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಮಾಜಿ ಸಚಿವೆ ರಾಣಿ ಸತೀಶ್, ಬಿಂಬ ರಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು.
‘ರಾಜ್ಯಸಭೆಗೆ ಚುನಾವಣೆಗೆ 200 ಮಾತ್ರ ಖರ್ಚಾಗಿತ್ತು’
ನಾಲ್ಕು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದೆ, ಅದರ ಖರ್ಚು ಕೇವಲ 200 ರು.ಗಳಲ್ಲಿ ಮುಗಿಸಿದ್ದೆ. ಆಯ್ಕೆಯಾದ ಬಳಿಕ ಆ ಮೊತ್ತವೂ ವಾಪಸ್ ಬರುತ್ತಿತ್ತು. ಆದರೆ, ಇಂದು ಒಂದೊಂದು ಸೀಟಿನ ಬೆಲೆ ಕೋಟಿ ರು. ಆಗುತ್ತದೆ, ಇಂದು ರಾಜಕೀಯ ಬದಲಾಗಿದೆ. ಇದನ್ನು ಅತ್ಯಂತ ವಿಷಾದದಿಂದ ಹೇಳಬೇಕಾಗಿದೆ ಎಂದು ಮಾರ್ಗರೇಟ್ ಆಳ್ವ ನುಡಿದರು.