ಪ್ರಧಾನಿ ಮೋದಿ ಸರ್ಕಾರ 20 ಲಕ್ಷ ಕೋಟಿ ರು. ಪ್ಯಾಕೇಜ್ ಘೋಷಣೆ ಮಾಡಿದೆ| ಮೋದಿ ಘೋಷಿಸಿರುವ ಪ್ಯಾಕೇಜ್‌ನ ಹಣಕ್ಕೆ ಎಷ್ಟು ಸೊನ್ನೆಗಲಿವೆ ಎಂಬುದು ನಿಮಗೆ ಗೊತ್ತಾ? ಇದು ಬೋಗಸ್ ಘೋಷಣೆ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದ: ಸಿದ್ದರಾಮಯ್ಯ| ಹೈಕಮಾಂಡ್ ನಿರ್ದೇಶನದಂತೆ ಕೊರೋನಾ ಲಾಕ್‌ಡೌನ್ ನಿಂದ ಸಂಕಷ್ಟದಲ್ಲಿರುವ ಜನರ ನೆರವಿಗೆ ಕಾಂಗ್ರೆಸ್ ಪಕ್ಷ ಧಾವಿಸಿದೆ|
ಕುದೂರು/ರಾಮನಗರ:(ಮೇ.24): ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ಯಾಕೇಜ್ ಘೋಷಣೆಗಳು ಬರೀ ಬೋಗಸ್ ಪ್ಯಾಕೇಜ್ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕುದೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ 20 ಲಕ್ಷ ಕೋಟಿ ರು. ಪ್ಯಾಕೇಜ್ ಘೋಷಣೆ ಮಾಡಿದೆ. ಅವರು ಘೋಷಿಸಿರುವ ಪ್ಯಾಕೇಜ್‌ನ ಹಣಕ್ಕೆ ಎಷ್ಟು ಸೊನ್ನೆಗಲಿವೆ ಎಂಬುದು ನಿಮಗೆ ಗೊತ್ತಾ? ಇದು ಬೋಗಸ್ ಘೋಷಣೆ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ದೇಶ ಆರ್ಥಿಕವಾಗಿ ಸುಧಾರಣೆ ಆಗಬೇಕಾದರೆ ಬಡವರ ಜೇಬಿನಲ್ಲಿ ಹಣ ಇರಬೇಕು. ಜನರಿಗೆ ಸಾಲ ಕೊಡುತ್ತಾರೆ. ಮತ್ತೆ ಆ ಹಣವನ್ನು ಜನರು ವಾಪಸ್ ನೀಡಬೇಕು. ಜನರ ಜೇಬಿನಲ್ಲಿ ಹಣ ಇಲ್ಲದೆ ಹೋದರೆ ಯಾವ ವ್ಯಾಪಾರ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಶ್ನೆ ಮಾಡಿದರು.
'ಪ್ರಧಾನಿ ಮೋದಿ ಬೇಜವಾಬ್ದಾರಿಯಿಂದ ಭಾರತಕ್ಕೆ ಕೊರೋನಾ ಬಂದಿದೆ'
ನರೇಂದ್ರ ಮೋದಿ ಪ್ರಧಾನಿ ಮಂತ್ರಿ ಆದಾಗನಿಂದಲೂ ಸಾಕಷ್ಟು ಸುಳ್ಳು ಹೇಳಿದ್ದಾರೆ. ಇದೀಗ ಪ್ಯಾಕೇಜ್ ಹೆಸರಿನಲ್ಲಿ ಮತ್ತೆ ಸುಳ್ಳು ಹೇಳುತ್ತಿದ್ದಾರೆ. ಈಗ ಪರಿಸ್ಥಿತಿ ಸಂಕಷ್ಟದಲ್ಲಿದೆ. ಆರ್ಥಿಕವಾಗಿ ಚೇತರಿಸಿಕೊಳ್ಳುವ ಸಲುವಾಗಿ ಲಾಕ್ ಡೌನ್ ಸಡಿಲಿಕೆ ಮಾಡಿದ್ದಾರೆ ಎಂದು ಹೇಳಿದರು.
ಹೈಕಮಾಂಡ್ ನಿರ್ದೇಶನದಂತೆ ಕೊರೋನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಜನರ ನೆರವಿಗೆ ಕಾಂಗ್ರೆಸ್ ಪಕ್ಷ ಧಾವಿಸಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಅದರಂತೆ ಕಷ್ಟದಲ್ಲಿರುವ ಜನರಿಗೆ ಆಹಾರ ಕಿಟ್‌ಗಳನ್ನು ವಿತರಣೆ ಮಾಡುತ್ತಿದ್ದೇವೆ ಎಂದರು.
ವಕ್ಫ್ ಮಂಡಳಿಯಿಂದ ಹಣವನ್ನು ಕೊರೋನಾ ನಿರ್ವಹಣೆಗೆಂದು ಮುಖ್ಯಮಂತ್ರಿ ಪರಿಹಾರಕ್ಕೆ ಕೊಡಬೇಡಿ ಎಂದು ಶಾಸಕ ಜಮೀರ್ ಅಹಮದ್ ಹೇಳಿದ್ದಾರಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ ಸಿದ್ದರಾಮಯ್ಯ, ಈ ಪ್ರಶ್ನೆಯನ್ನು ವಕ್ಫ್ಗೆ ಸಂಬಂಧಿಸಿದವರನ್ನು ಕೇಳಿ ಎಂದು ಹೇಳಿ ತೆರಳಿದರು.