ಬಳ್ಳಾರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ರಚಾರ | ರಂಗೇರಿದೆ ಉಪ ಚುನಾವಣಾ ಕಣ | ಮೋದಿಯವರನ್ನು ಕಿಚಾಯಿಸಿದ ಸಿದ್ದರಾಮಯ್ಯ
ಬಳ್ಳಾರಿ (ಅ. 22): ಲೋಕಸಭಾ ಉಪ ಚುನಾವಣಾ ಪ್ರಚಾರ ಜೋರಾಗಿದೆ. ಇಟಗಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ಭರಾಟೆ ಜೋರಾಗಿದೆ.
ಶ್ರೀರಾಮುಲುಗೆ ಮತ ಹಾಕಿ ಲೋಕಸಭೆಗೆ ಕಳಿಸಿದ್ದೀರಿ. ಆದರೆ ಅವರು ನಿಮಗೆ ನಂಬಿಕೆ ದ್ರೋಹ ಮಾಡಿ ರಾಜೀನಾಮೆ ನೀಡಿದ್ರು. ರಾಜೀನಾಮೆ ನೀಡುವಾಗ ಮತಕೊಟ್ಟ ನಿಮಗೆ ಕೇಳಿದ್ರಾ? ಯಾವ ಪುರಷಾರ್ಥಕ್ಕಾಗಿ ರಾಜೀನಾಮೆ ನೀಡಿದ್ರು? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸರಿಯಾಗಿ ಕನ್ನಡವನ್ನೇ ಮಾತನಾಡಲು ಬರಲ್ಲ ಅವನಿಗೆ. ವಿಧಾನಸಭೆಯಲ್ಲಿ ಅದ್ಯಾವ ಘನ ಕಾರ್ಯ ಮಾಡಲು ಹೋದ? ಎಂದು ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ತಂದಿಟ್ಟಿದ್ದಾರೆ. ಶ್ರೀರಾಮುಲು, ಶಾಂತಾ ಮತ್ತು ರೆಡ್ಡಿ ಬ್ರದರ್ಸ್ ಗೆ ಮಾತನಾಡಲು ಬರಲ್ಲ. ಅವರು ಯಾವತ್ತೂ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ಅವರಿಗೆ ಲೂಟಿ ಹೊಡೆಯೋದು, ಜೈಲಿಗೆ ಹೋಗೋದು ಬಿಟ್ಟರೆ ಬೇರೆನೂ ಗೊತ್ತಿಲ್ಲ. ಸುಳ್ಳನ್ನ ಸತ್ಯ ಮಾಡೋದು, ಸತ್ಯವನ್ನ ಸುಳ್ಳು ಮಾಡೋದೇ ಬಿಜೆಪಿಗರ ಕೆಲಸ ಎಂದು ಲೇವಡಿ ಮಾಡಿದ್ದಾರೆ.
ನರೇಂದ್ರ ಮೋದಿ ಜಿ ಕ್ಯೂಂ ಜೂಟ್ ಬೋಲೆ ಅಂತ ಹಿಂದಿಯಲ್ಲಿ ವ್ಯಂಗ್ಯವಾಡುತ್ತಾ, ಮೋದಿ ಮನ್ ಕಿ ಬಾತ್ ನಿಂದ ಯಾರ ಹೊಟ್ಟೆನೂ ತುಂಬಲ್ಲ ಕಣಯ್ಯ. ಕಾಮ್ ಕಿ ಬಾತ್ ಮಾತಾಡು ಅಂತ ಸಿದ್ದರಾಮಯ್ಯ ಕಿಚಾಯಿಸಿದ್ದಾರೆ.