ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮತ್ತಷ್ಟು ಕಗ್ಗಂಟು

By Web DeskFirst Published Oct 10, 2018, 9:55 AM IST
Highlights

ಲೋಕಸಭಾ ಉಪ ಚುನಾವಣೆಗೆ ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ ಮತ್ತಷ್ಟು ಕಗ್ಗಂಟಾಗಿದೆ | ಡಿಕೆಶಿಗೆ ತಲೆನೋವಾಗಿ ಅಭ್ಯರ್ಥಿ ಆಯ್ಕೆ ವಿಚಾರ 

ಬಳ್ಳಾರಿ (ಅ. 10): ಲೋಕಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ ಮತ್ತಷ್ಟು ಕಗ್ಗಂಟಾಗಿದೆ. 

ನಿನ್ನೆ ಕೆಪಿಸಿಸಿಯಲ್ಲಿ‌ ನಡೆದ ಸಭೆಯಲ್ಲಿ ಡಿಕೆಶಿಗೆ ಅಭ್ಯರ್ಥಿ ನಿರ್ಣಯ ಮಾಡುವ ಜವಾಬ್ದಾರಿ ವಹಿಸಲಾಗಿತ್ತು. ನಿನ್ನೆ ರಾತ್ರಿ ಡಿಕೆಶಿ ನೇತೃತ್ವದಲ್ಲಿ ಬಳ್ಳಾರಿ ಶಾಸಕ , ಪರಿಷತ್ತಿನ ಸದಸ್ಯರು ಸಭೆ ನಡೆದಿತ್ತು. ನಾಗೇಂದ್ರ ಅಣ್ಣ ವೆಂಕಟೇಶ ಪ್ರಸಾದ್ ಟಿಕೆಟ್ ನೀಡುವ ವಿಚಾರವಾಗಿ ಪರ-ವಿರೋಧ  ಅಭಿಪ್ರಾಯ ವ್ಯಕ್ತವಾಗಿದೆ. ಇನ್ನೂ ಒಮ್ಮತದ ನಿರ್ಧಾರ ವ್ಯಕ್ತವಾಗಿಲ್ಲ. ಒಳಗೊಳಗೇ ಶಾಸಕರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜಿಲ್ಲೆಯ 6 ಶಾಸಕರಲ್ಲಿ ಒಬ್ಬ ಶಾಸಕರಿಗೂ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. 

ಶಾಸಕರಾದ ಬಿ.ನಾಗೇಂದ್ರ,  ಶಾಸಕ ತುಕಾರಾಂ, ಪಿಟಿ ಪರಮೇಶ್ವರ ನಾಯ್ಕ ಹಾಗೂ  ಆನಂದ್ ಸಿಂಗ್ ಸಚಿವ ಸ್ಥಾನದ ಆಕಾಂಕ್ಷಿಗಳು. ಡಿಕೆಶಿಗೆ ಬಳ್ಳಾರಿಯ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಮತ್ತಷ್ಟು ಕಗ್ಗಂಟಾಗಿದೆ. ನಾಗೇಂದ್ರ ಸಹೋದರ ಜೊತೆ ಹೊಸ ಅಭ್ಯರ್ಥಿ ಬಗ್ಗೆ ಚಿಂತನೆ ನಡೆಸಲಾಗಿದೆ. ಇಂದು ಡಿಕೆಶಿ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.   

click me!