ರೋಷನ್‌ ಬೇಗ್‌ ನಮ್ಮ ಪಾರ್ಟಿಯಲ್ಲಿಲ್ಲ, ನಮಗೂ ಅವರಿಗೂ ಸಂಬಂಧವಿಲ್ಲ: ಸಿದ್ದು

By Suvarna NewsFirst Published Nov 23, 2020, 1:50 PM IST
Highlights

ಈ ಬಾರಿ ಬೈ ಎಲೆಕ್ಷನ್‌ನಲ್ಲಿ ಪ್ರತಾಪಗೌಡ ಪಾಟೀಲಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ| ಮಸ್ಕಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ನಿಶ್ಚಿತ| ನಾನು ಸಿಎಂ ಆಗಿದ್ದಾಗ ನಡೆದ ಬೈ ಎಲೆಕ್ಷನ್ ನಲ್ಲಿ ನಾವು ಗೆದ್ದಿದ್ದೆವು| ಬಿಜೆಪಿ ಅಧಿಕಾರವನ್ನ ದುರಪಯೋಗ ಪಡಿಸಿಕೊಂಡು ಚುನಾವಣೆ ಮಾಡುತ್ತಿದೆ: ಸಿದ್ದರಾಮಯ್ಯ| 

ರಾಯಚೂರು(ನ.23): ಮಾಜಿ ಸಚಿವ ರೋಷನ್‌ ಬೇಗ್‌ ನಮ್ಮ ಪಾರ್ಟಿಯಲ್ಲಿಲ್ಲ. ನಮಗೂ ಅವರಿಗೂ ನಮಗೂ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಸಿಸಿಬಿಯಿಂದ ರೋಷನ್‌ ಬೇಗ್‌ ಬಂಧನ ವಿಚಾರದ ಬಗ್ಗೆ ಇಂದು(ಸೋಮವಾರ) ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಎಂಎ ಹಗರಣದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್‌ ಕಾನ್‌ ಭಾಗಿ ಆರೋಪ ವಿಚಾರ ಬಗ್ಗೆ ಈಗಾಗಲೇ ಅವರನ್ನ ಕರೆಸಿ ಸಿಸಿಬಿ ವಿಚಾರಣೆ ನಡೆಸಿದೆ. ಈಗಾಗಲೇ ಎರಡರಿಂದ ಮೂರು ಬಾರಿ ಜಮೀರ್‌ ವಿಚಾರಣೆ ವೇಳೆಯಲ್ಲಿ ಅವರದೇನು ಪಾತ್ರವಿಲ್ಲವೆಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಮಾಜಿ ಸಚಿವ ರೋಷನ್ ಬೇಗ್ ಅರೆಸ್ಟ್: ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್

ಮಸ್ಕಿ ಬೈ ಎಲೆಕ್ಷನ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಈ ಬಾರಿ ಬೈ ಎಲೆಕ್ಷನ್‌ನಲ್ಲಿ ಜನ ಪ್ರತಾಪಗೌಡ ಪಾಟೀಲಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂಬ ವಿಶ್ವಾವಿದೆ. ಮಸ್ಕಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ನಿಶ್ಚಿತ. ಬಿಜೆಪಿಯವರು ಈಗ ಬೈ ಎಲೆಕ್ಷನ್ ನಾವೇ ಗೆಲ್ಲುತ್ತೇವೆ ಎಂದು ಹೇಳುತ್ತಾರೆ.ನಾನು ಸಿಎಂ ಆಗಿದ್ದಾಗ ನಡೆದ ಬೈ ಎಲೆಕ್ಷನ್ ನಲ್ಲಿ ನಾವು ಗೆದ್ದಿದ್ದೆವು. ಬಿಜೆಪಿ ಅಧಿಕಾರವನ್ನ ದುರಪಯೋಗ ಪಡಿಸಿಕೊಂಡು ಚುನಾವಣೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. 

ಕಾಂಗ್ರೆಸ್ಸಿನಲ್ಲಿ ಯಾವುದೇ ಗೊಂದಲವಿಲ್ಲ, ನಾಯಕತ್ವದ ಬಗ್ಗೆ ಗೊಂದಲ ಇಲ್ಲ, ನಾವು ಒಗ್ಗಟ್ಟಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.  ಜೆಡಿಎಸ್ ಬೈ ಎಲೆಕ್ಷನ್‌ನಲ್ಲಿ ನಿಲ್ಲುವುದಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಅವರು ಚುನಾವಣೆ ದಿನಾಂಕ ಘೋಷಣೆಯಾದ ನಂತರ ಗೊತ್ತಾಗುತ್ತದೆ. ಅವರು ಹೇಳಿದಂತೆ ಎಂದಾದರೂ ನಡೆದುಕೊಂಡಿದ್ದಾರಾ?  ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 
 

click me!