ಸುವರ್ಣ ಚ್ಯಾನಲ್‌ನಲ್ಲಿ ಸಿದ್ದರಾಮಯ್ಯ: ಟಿವಿಗೇ ಪೂಜೆ ಸಲ್ಲಿಸಿದ ಕಟ್ಟಾ ಅಭಿಮಾನಿ..!

By Kannadaprabha News  |  First Published Jun 3, 2020, 10:54 AM IST

ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿ 8 ವರ್ಷದ ಬಾಲಕ ಸಿದ್ದಲಿಂಗ ಪೂಜಾರಿ|  ಸುವರ್ಣ ಸುದ್ದಿ ವಾಹಿನಿಯ ಸ್ಟುಡಿಯೋದಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ| ನ್ಯೂಸ್‌ ಪ್ರಸಾರವಾಗುತ್ತಿದ್ದ ತನ್ನ ಟಿವಿಗೆ ಪೂಜೆ ಸಲ್ಲಿಸಿದ ಸಿದ್ದಲಿಂಗ ಪೂಜಾರಿ|


ಕಲಬುರಗಿ(ಜೂ.03): ಸುವರ್ಣ ಸುದ್ದಿ ವಾಹಿನಿಯ ಸ್ಟುಡಿಯೋದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಅಭಿಮಾನಿಯೋರ್ವ ಮನೆಯಲ್ಲೇ ಸುವರ್ಣ ನ್ಯೂಸ್‌ ಪ್ರಸಾರವಾಗುತ್ತಿದ್ದ ತನ್ನ ಟಿವಿಗೆ ಪೂಜೆ ಸಲ್ಲಿಸಿದ ಪ್ರಸಂಗ ನಡೆದಿದೆ.

ಜಿಲ್ಲೆಯ ಅಫಜಲ್ಪುರ ತಾಲೂಕಿನ ರೇವೂರು ಗ್ರಾಮದ ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿ , 8 ವರ್ಷದ ಬಾಲಕ ಸಿದ್ದಲಿಂಗ ಪೂಜಾರಿಯೇ ಸುವರ್ಣ ಚಾನೆಲ್‌ ಬಿತ್ತರವಾಗುತ್ತಿದ್ದ ತಮ್ಮ ಮನೆ ಟಿವಿಗೆ ಪೂಜೆ ಸಲ್ಲಿಸಿದ್ದಾನೆ.

Tap to resize

Latest Videos

ಕರುನಾಡಲ್ಲಿ ಕೊರೋನಾ ಕುಣಿತ, ಒಂದೇ ದಿನ ದಾಖಲೆಯ 388 ಕೇಸ್: ಯಾವ ಜಿಲ್ಲೆಯಲ್ಲಿ ಎಷ್ಟು?

ಈ ಬಾಲಕನಿಗೆ ಸಿದ್ದರಾಮಯ್ಯ ಎಂದರೆ ತುಂಬ ಅಭಿಮಾನ. ಅದಕ್ಕೇ ಇಂದು ಸುವರ್ಣ ನ್ಯೂಸ್‌ ಚ್ಯಾನಲ್‌ನಲ್ಲಿ ಸಿದ್ದರಾಮಯ್ಯನಮವರ ಫೋನ್‌ ಇನ್‌ ಕಾರ್ಯಕ್ರಮ ಶುರುವಾಗುತ್ತಿದ್ದಂತೆಯೇ ಬಾಲಕ ನೇರವಾಗಿ ಟಿವಿಗೇ ಪೂಜೆ ಮಾಡಿ ಊದುಬತ್ತಿ ಬೆಳಗಿದ. ಬಾಲಕ ಸಿದ್ದರಾಮಯ್ಯನವರ ಮೇಲಿನ ವಿಪರೀತ ಅಭಿಮಾನದಿಂದಾಗಿ ಹೀಗೆ ಮಾಡಿದ್ದಾನೆಂದು ಮನೆಯವರು ಹೇಳಿದ್ದಾನೆ. 

click me!