ಮಡಿಕೇರಿಯ ಹೊರವಲಯದ ಗ್ರಾಮದಲ್ಲಿ 5 ವರ್ಷದ ಮಗುವಿನ ಮೇಲೆ 14 ವರ್ಷದ ಬಾಲಕ ಅತ್ಯಾಚಾರ ಮಾಡಿರುವಂತಹ ಆಘಾತಕಾರಿ ಘಟನೆ ನಡೆದಿದೆ.
ಮಡಿಕೇರಿ(ಜೂ.03): ಮಡಿಕೇರಿಯ ಹೊರವಲಯದ ಗ್ರಾಮದಲ್ಲಿ 5 ವರ್ಷದ ಮಗುವಿನ ಮೇಲೆ 14 ವರ್ಷದ ಬಾಲಕ ಅತ್ಯಾಚಾರ ಮಾಡಿರುವಂತಹ ಆಘಾತಕಾರಿ ಘಟನೆ ನಡೆದಿದೆ.
ನೆರೆಮನೆಯ ಬಾಲಕನಿಂದ ಕೃತ್ಯ ನಡೆದಿದ್ದು, ನೋವಿನಿಂದ ಬಳಲುತ್ತಿದ್ದ ಮಗುವನ್ನು ಆರೋಗ್ಯ ತಪಾಸಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ. ಬಾಲಕನನ್ನು ವಶಕ್ಕೆ ಪಡೆದಿದ್ದು, ಬಾಲಮಂದಿರಕ್ಕೆ ರವಾನೆ ಮಾಡಲಾಗಿದೆ. ಮಗುವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಡಿಕೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೀಲ್‌ಡೌನ್ ಆಗಿದ್ದ ಗ್ರಾಮದವರಿಂದ ನೆರೆಯ ಗ್ರಾಮದವರ ಮೇಲೆ ದಾಳಿ
ಇತ್ತೀಚೆಗಷ್ಟೇ ವಿಜಯಪುರದಲ್ಲಿಯೂ ಬಾಲಕಿಯ ಮೇಲೆ ವಿವಾಹಿತನೊಬ್ಬ ನಿರಂತರ ಅತ್ಯಾಚಾರ ನಡೆಸಿ ಬಾಲಕಿ ಗರ್ಭಿಣಿಯಾದ ಘಟನೆ ನಡೆದಿತ್ತು. ಲಾಕ್‌ಡೌನ್ ನಂತರದಲ್ಲಿ ಅತ್ಯಾಚಾರ ಸೇರಿದಂತೆ ಅಪರಾಧ ಕೃತ್ಯಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವ ಬಗ್ಗೆ ವರದಿಯಾಗಿತ್ತು.
ವಿವಾಹಿತನ ಕಾಮದಾಟದಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ 13ರ ಬಾಲೆ
ಈ ನಡುವೆಯೇ ಮಡಿಕೇರಿಯಲ್ಲಿ ಇಂತಹ ಘಟನೆ ನಡೆದಿರುವುದು ಜನರನ್ನು ಬೆಚ್ಚಿಬೀಳಿಸಿದೆ. ಸಣ್ಣ ಮಗುವಿನ ಮೇಲೆ ಅಪ್ರಾಪ್ತ ಬಾಲಕ ಅತ್ಯಾಚಾರ ನಡೆಸಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.