Russia-Ukraine War: ನವೀನ್‌ ಮನೆಗೆ ಸಿದ್ದರಾಮಯ್ಯ ಭೇಟಿ: ಪೋಷಕರಿಗೆ ಸಾಂತ್ವನ

By Girish GoudarFirst Published Mar 10, 2022, 10:24 AM IST
Highlights

*  ಪ್ರಧಾನಿ ಜೊತೆ ಮಾತನಾಡಿ ನವೀನ್‌ ಪ್ರಾರ್ಥಿವ ಶರೀರ ತರಿಸಲು ಪ್ರಯತ್ನ
*  ಯುದ್ಧದಿಂದಾಗಿ ನವೀನ್‌ ಮೃತಪಟ್ಟಿರುವುದು ನಾಡಿಗೆ ಆಗಿರುವ ನಷ್ಟ
*  ಇಂತಹ ಸಂದರ್ಭದಲ್ಲಿ ವಿದೇಶಾಂಗ ಸಚಿವಾಲಯ ಪಾದರಸದಂತೆ ಕೆಲಸ ನಿರ್ವಹಿಸಬೇಕು
 

ರಾಣಿಬೆನ್ನೂರು(ಮಾ.10): ಉಕ್ರೇನ್‌(Ukraine) ಯುದ್ಧದಲ್ಲಿ ಮೃತಪಟ್ಟ ತಾಲೂಕಿನ ಚಳಗೇರಿ ಗ್ರಾಮದ ನವೀನ್‌(Naveen) ಮನೆಗೆ ಬುಧವಾರ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಭೇಟಿ ನೀಡಿ ನವೀನ್‌ ಪೋಷಕರಿಗೆ ಸಾಂತ್ವನ(Condolences) ಹೇಳಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯನಾಗಿ ಗ್ರಾಮದ ಬಡಜನರ ಸೇವೆ ಮಾಡುವ ಮಹದಾಸೆ ಹೊಂದಿದ್ದ ನವೀನ್‌ ಕನಸು ಅವನ ಸಾವಿನಿಂದ ಕಮರಿ ಹೋಗಿದೆ. ಯುದ್ಧದಿಂದಾಗಿ(War) ನವೀನ್‌ ಮೃತಪಟ್ಟಿರುವುದು ನಾಡಿಗೆ ಆಗಿರುವ ನಷ್ಟವಾಗಿದೆ. ಮಗನ ಶವಕ್ಕಾಗಿ ಆತನ ಪೋಷಕರು ಕಾತುರರಾಗಿದ್ದಾರೆ. ನಾನು ಪ್ರಧಾನಮಂತ್ರಿ ಹಾಗೂ ವಿದೇಶಾಂಗ ಸಚಿವರ ಜತೆ ಖುದ್ದಾಗಿ ಮಾತನಾಡಿ ಆದಷ್ಟು ಶೀಘ್ರ ಪ್ರಾರ್ಥಿವ ಶರೀರ(Deadbody) ತರಿಸಲು ವ್ಯವಸ್ಥೆ ಮಾಡುತ್ತೇನೆ ಎಂದರು.

Latest Videos

ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಕುಟುಂಬಕ್ಕೆ 25 ಲಕ್ಷ ಪರಿಹಾರ ವಿತರಿಸಿದ ಬೊಮ್ಮಾಯಿ

ನವೀನ್‌ ಸಾವನ್ನಪ್ಪಿದ ದಿನವೇ ವಿಧಾನಸಭಾ ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಪುತ್ರ ಪ್ರಕಾಶ ಕೋಳಿವಾಡ ಅವರು ವಿದೇಶಾಂಗ ಸಚಿವರಿಗೆ ಪತ್ರ ಬರೆದು ನಮ್ಮದೇ ಏರಲೈನ್ಸ್‌ ಇದ್ದು ಕೇಂದ್ರ ಸರ್ಕಾರದಿಂದ(Central Government) ಅನುಮತಿ ನೀಡಿದರೆ ಉಕ್ರೇನ್‌ ದೇಶದಿಂದ ನವೀನ್‌ ಶವ ಹಾಗೂ ಇತರೇ ವಿದ್ಯಾರ್ಥಿಗಳನ್ನು ಕರೆತರುವುದಾಗಿ ತಿಳಿಸಿದ್ದರು. ಆದರೆ, ಅಂದಿನಿಂದ ಇಂದಿನ ವರೆಗೂ ಅದರ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ರಷ್ಯಾ(Russia) ದೇಶ ಉಕ್ರೇನ್‌ ಮೇಲೆ ದಾಳಿ ನಡೆಸುವ ಮುನ್ಸೂಚನೆ ವಿದೇಶಾಂಗ ಸಚಿವಾಲಯಕ್ಕೆ ಇತ್ತು. ಬೇರೆ ದೇಶದವರು ತಮ್ಮವರನ್ನು ಯುದ್ಧಕಿಂತ ಮುಂಚಿತವಾಗಿ ಕರೆಯಿಸಿಕೊಂಡಿದ್ದು ಭಾರತ ಈ ವಿಚಾರದಲ್ಲಿ ಎಡವಿದೆ. ಇಂತಹ ಸಂದರ್ಭದಲ್ಲಿ ವಿದೇಶಾಂಗ ಸಚಿವಾಲಯ ಪಾದರಸದಂತೆ ಕೆಲಸ ನಿರ್ವಹಿಸಬೇಕು. ಉಕ್ರೇನ್‌ನಲ್ಲಿ ಸಿಲುಕಿದ್ದ ತಾಲೂಕಿನ ಉಳಿದ ವಿದ್ಯಾರ್ಥಿಗಳೆಲ್ಲಾ ಇಂದು (ಬುಧವಾರ) ಊರಿಗೆ ಹಿಂದಿರುಗಿರುವುದು ಇದ್ದುದರಲ್ಲಿ ಸಮಾಧಾನಕರ ಸಂಗತಿಯಾಗಿದೆ ಎಂದರು.

ವಿಧಾನಸಭೆಯ ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ(KB Koliwada), ಮಾಜಿ ಸಚಿವರುಗಳಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಜಯಮಾಲಾ, ಮಾಜಿ ಶಾಸಕರುಗಳಾದ ಅಜ್ಜಂಪೀರ ಖಾದ್ರಿ, ಬಿ.ಎಚ್‌. ಬನ್ನಿಕೋಡ, ಸೋಮಣ್ಣ ಬೇವಿನಮರದ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಂ. ಹಿರೇಮಠ, ಪ್ರಕಾಶ ಕೋಳಿವಾಡ, ಎಸ್‌.ಆರ್‌. ಪಾಟೀಲ, ಮಂಜನಗೌಡ ಪಾಟೀಲ, ಮೀರಾ ಪ್ರಭಾಕರ ಮತ್ತಿತರರಿದ್ದರು.

ಭಾವುಕರಾದ ನವೀನ್‌ ತಾಯಿ:

ಈ ಸಮಯಲ್ಲಿ ಅಲ್ಲಿಗೆ ಆಗಮಿಸಿದ ನವೀನ್‌ ಸ್ನೇಹಿತರಾದ ಅಮಿತ್‌ ಮತ್ತು ಸುಮನ್‌ ಕಂಡು ನವೀನ್‌ ತಾಯಿ ವಿಜಯಲಕ್ಷ್ಮಿ ಭಾವುಕರಾದರು. ಅಮಿತ್‌ನನ್ನು ಬಿಗಿದಪ್ಪಿ ಕಣ್ಣೀರು ಸುರಿಸಿದರು.

ಚಳ್ಳಕೆರೆಯಿಂದ ಆಗಮಿಸಿ ಸಾಂತ್ವನ ಹೇಳಿದ ನವೀನ ಸ್ನೇಹಿತ:

ಉಕ್ರೇನ್‌ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ನಿತೀಶಕುಮಾರ ತಂದೆ- ತಾಯಿ ಜತೆ ನವೀನ್‌ ಮನೆಗೆ ಆಗಮಿಸಿ ಅವನ ಪೋಷಕರಿಗೆ ಸಾಂತ್ವನ ಹೇಳಿದರು. ಈ ಸಮಯದಲ್ಲಿ ತಮ್ಮ ಅನುಭವ ಹಂಚಿಕೊಂಡ ನಿತೀಶ, ನವೀನ ಜತೆ ಒಂದೇ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವ ಚಿಂತನೆಯಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಬೇರೆ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೆ. ನವೀನ್‌ ಸಾವು ತೀವ್ರ ದುಃಖ ಉಂಟು ಮಾಡಿದೆ ಎಂದರು.

NEET Exam ನವೀನ್ ಸಾವಿನ ಬೆನ್ನಲ್ಲೇ ನೀಟ್ ವಿರುದ್ಧ ಸಮರ ಸಾರಿದ ಕುಮಾರಸ್ವಾಮಿ

ಉಕ್ರೇನಿನಲ್ಲಿ ಮೃತಪಟ್ಟ ಕನ್ನಡಿಗ ನವೀನ್ ಮೃತದೇಹ ಪತ್ತೆ, ಸಿಎಂ ಬೊಮ್ಮಾಯಿ ಮಾಹಿತಿ

ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ (Russia Ukraine War) ಸಾವನ್ನಪ್ಪಿದ  ನವೀನ್ (Naveen) ಮೃತದೇಹ ಸಿಕ್ಕಿದೆ ಎಂದು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಬೊಮ್ಮಾಯಿ, ನವೀನ್ ಮೃತದೇಹ(Naveen Dead Body ) ಸಿಕ್ಕಿದೆ. ಉಕ್ರೇನಿನ‌ (Ukraine) ಶವಾಗಾರದಲ್ಲಿ ಮೃತ ದೇಹ ಇಡಲಾಗಿದೆ. ಯುದ್ಧ ಇನ್ನೂ ನಡೀತಿದೆ ಎಂದು ಹೇಳಿದರು. ರಾಯಭಾರಿ ಕಚೇರಿ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ಮೃತದೇಹ ತರುವ ಬಗ್ಗೆ ಮಾತುಕತೆ ನಡೆಸ್ತಿದ್ದೇವೆ ಎಂದು ಹೇಳಿದ್ದಾರೆ. ನವೀನ್ ಮೃತದೇಹ ತರುವ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿದೆ ಎಂದು ತಿಳಿಸಿದರು.
 

click me!