ತಡ ಮಾಡಿ ಮತ್ತೊಂದು ಕತೆ ಸೃಷ್ಟಿಸದಿರಲಿ: ಎಚ್ಡಿಕೆ

By Kannadaprabha News  |  First Published Jan 21, 2020, 9:06 AM IST

ತ್ವರಿತ ಗತಿಯಲ್ಲಿ ತನಿಖೆ ಮಾಡಿ. ತಡ ಮಾಡಿ ಈ ಬಗ್ಗೆಯೂ ಮತ್ತೊಂದು ಕತೆಯನ್ನು ಸೃಷ್ಟಿ ಮಾಡಬೇಡಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. 


ಶೃಂಗೇರಿ [ಜ.21]: ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಂಬ್‌ ಸಿಕ್ಕಿರುವ ಬಗ್ಗೆ ತ್ವರಿತ ಗತಿಯಲ್ಲಿ ತನಿಖೆ ನಡೆಸಬೇಕು. ಈ ವಿಷಯದಲ್ಲಿ ವಿಳಂಬ ಮಾಡಿ ಮತ್ತೊಂದು ಕಥೆ ಸೃಷ್ಟಿಯಾಗದಿರಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶೃಂಗೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣದಲ್ಲಿ ಸಿಸಿಟೀವಿಗಳಿರುತ್ತವೆ. ಬಾಂಬ್‌ ಇಟ್ಟಿರುವ ಬಗ್ಗೆ ಕಾರಣ ಹುಡುಕಲು ಹದಿನೈದು ಅಥವಾ ಒಂದು ತಿಂಗಳು ಸಮಯ ತೆಗೆದುಕೊಂಡು ನಂತರದಲ್ಲಿ ಮತ್ತೊಂದು ಕಥೆಯನ್ನು ಸೃಷ್ಟಿಮಾಡದಿರಲಿ ಎಂದರು. 

Latest Videos

undefined

ಬಾಂಬ್ ಇಟ್ಟಲ್ಲಿಂದ, ನಿಷ್ಕ್ರಿಯಗೊಳಿಸಿದ ತನಕ, ಇಲ್ಲಿದೆ ಎಲ್ಲ ಫೊಟೋಸ್..!.

ವಾಸ್ತವಾಂಶವನ್ನು ಜನರ ಮುಂದಿಡಬೇಕು ಎಂದು ಬಿಜೆಗೆ ಸಲಹೆ ನೀಡಿದ್ದಾರೆ. ಜನರಲ್ಲಿ ಸಂಘರ್ಷದ ಮನೋಭಾವನೆಯನ್ನು ಉಂಟು ಮಾಡಲು ಸರ್ಕಾರವೇ ಕೆಲವು ಪೊಲೀಸ್‌ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಅನುಮಾನವಿದೆ ಎಂದು ಗಂಭೀರ ಆರೋಪ ಮಾಡಿದರು.

ಅಪಾಯ ಲೆಕ್ಕಿಸದೆ ಏಕಾಂಗಿಯಾಗಿ ಬಾಂಬ್‌ ನಾಶಗೊಳಿಸಿದ ಗಂಗಯ್ಯ!.

click me!