ಡಿಕೆಜಿಗೆ KPCCಅಧ್ಯಕ್ಷ ಗಾದಿ, ಕೊಲ್ಲೂರಲ್ಲಿ ಚಂಡಿಕಾ ಹೋಮ

Kannadaprabha News   | Asianet News
Published : Jan 21, 2020, 09:06 AM IST
ಡಿಕೆಜಿಗೆ KPCCಅಧ್ಯಕ್ಷ ಗಾದಿ, ಕೊಲ್ಲೂರಲ್ಲಿ ಚಂಡಿಕಾ ಹೋಮ

ಸಾರಾಂಶ

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗಾದಿಯ ರೇಸಲ್ಲಿರುವ ಡಿ.ಕೆ. ಶಿವಕುಮಾರ್‌ ಅವರೇ ಅಧ್ಯಕ್ಷರಾಗಬೇಕು ಎಂದು ಪ್ರಾರ್ಥಿಸಿ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದಲ್ಲಿ ಸೋಮವಾರ ಚಂಡಿಕಾ ಹೋಮ ನಡೆಸಲಾಗಿದೆ.

ಉಡುಪಿ(ಜ.21): ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗಾದಿಯ ರೇಸಲ್ಲಿರುವ ಡಿ.ಕೆ. ಶಿವಕುಮಾರ್‌ ಅವರೇ ಅಧ್ಯಕ್ಷರಾಗಬೇಕು ಎಂದು ಪ್ರಾರ್ಥಿಸಿ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದಲ್ಲಿ ಸೋಮವಾರ ಚಂಡಿಕಾ ಹೋಮ ನಡೆಸಲಾಗಿದೆ. ಡಿ.ಕೆ.ಶಿವಕುಮಾರ್‌ ಅವರ ಆಪ್ತ, ಕುಟುಂಬದ ಕುಟುಂಬ ಜ್ಯೋತಿಷಿಯೂ ಆಗಿರುವ ಬೆಂಗಳೂರಿನ ವಾಸ್ತುಶಾಸ್ತ್ರಜ್ಞ ಡಾ.ಬಿ.ಪಿ. ಆರಾಧ್ಯ ಈ ವಿಶೇಷ, ಪೂಜೆ, ಹೋಮ ನಡೆಸಿದ್ದಾರೆ.

ಈ ಹಿಂದೆ ಡಿ.ಕೆ. ಶಿವಕುಮಾರ್‌ ಜೈಲು ಸೇರಿದ್ದಾಗಲೂ ಅವರ ಶೀಘ್ರ ಬಿಡುಗಡೆಗೆ ಪ್ರಾರ್ಥಿಸಿ ಡಾ.ಆರಾಧ್ಯ ಕೊಲ್ಲೂರಿನಲ್ಲಿ ಚಂಡಿಕಾ ಹೋಮ ನಡೆಸಿದ್ದರು. ಕಾಕತಾಳೀಯ ಎಂಬಂತೆ ಕೆಲವೇ ದಿನಗಳಲ್ಲಿ ಡಿ.ಕೆ.ಶಿವಕುಮಾರ್‌ ಬಿಡುಗಡೆಯಾಗಿತ್ತು.

ಬಾಂಬ್ ಇಟ್ಟಲ್ಲಿಂದ, ನಿಷ್ಕ್ರಿಯಗೊಳಿಸಿದ ತನಕ, ಇಲ್ಲಿದೆ ಎಲ್ಲ ಫೊಟೋಸ್..!

ಈ ಬಾರಿಯೂ ಶಿವಕುಮಾರ್‌ ರಾಜಕೀಯ ಏಳಿಗೆಗೆ ಪ್ರಾರ್ಥಿಸಿ ಈ ನವಚಂಡಿಕಾ ಹೋಮ ನಡೆಸಿರುವುದಾಗಿ ಹೇಳಿರುವ ಆರಾಧ್ಯ, ಚಂಡಿಕಾ ಹೋಮ, ಪೂಜೆಯ ಪ್ರಸಾದವನ್ನು ಡಿ.ಕೆ.ಶಿವಕುಮಾರ್‌ ಕುಟುಂಬಕ್ಕೆ ಕೊಡುತ್ತೇವೆ. ಇದರಿಂದ ಖಂಡಿತ ಅವರಿಗೆ ಒಳ್ಳೆದಾಗುತ್ತದೆ ಎಂದಿದ್ದಾರೆ.Pooja offerd at kollur temple for dk shivakumar

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು