ಹೋಂ ಕ್ವಾರಂಟೈನ್ ಆಗಿರುವ BSYಗೆ  ಕುಮಾರಸ್ವಾಮಿ ಪೋನ್ ಕಾಲ್

Published : Jul 11, 2020, 05:11 PM IST
ಹೋಂ ಕ್ವಾರಂಟೈನ್ ಆಗಿರುವ BSYಗೆ  ಕುಮಾರಸ್ವಾಮಿ ಪೋನ್ ಕಾಲ್

ಸಾರಾಂಶ

ಕೊರೋನಾ ಆತಂಕ/ ಮನೆಯಲ್ಲೇ ಕ್ವಾರಂಟೈನ್ ಆದ ಸಿಎಂ ಯಡಿಯೂರಪ್ಪ/ ಯಡಿಯೂರಪ್ಪಗೆ ಕುಮಾರಸ್ವಾಮಿ ದೂರವಾಣಿ ಕರೆ/ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಎಂದು ಸಲಹೆ

ಬೆಂಗಳೂರು(ಜು.  11)   ಮನೆಯಲ್ಲೇ ಕ್ವಾರಂಟೈನ್ ಆಗಿರುವ ಸಿಎಂ ಯಡಿಯೂರಪ್ಪ ಅವರಿಗೆ ಕರೆ ಮಾಡಿದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆರೋಗ್ಯ ವಿಚಾರಿಸಿಕೊಂಡಿದ್ದಾರೆ.

ಶನಿವಾರ ಮಧ್ಯಾಹ್ನ ಕರೆ ಮಾಡಿ ಮಾತನಾಡಿದ ಕುಮಾರಸ್ವಾಮಿ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿಎಂ ಯಡಿಯೂರಪ್ಪ ಸಹ ಕುಮಾರಸ್ವಾಮಿಯವರೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದ್ದಾರೆ. ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡ ಹಾಲಿ ಹಾಗೂ ಮಾಜಿ ಸಿಎಂ ಗಳು ಬೇರೆ ಯಾವ ವಿಚಾರವನ್ನು ಮಾತನಾಡಿಲ್ಲ. 

ಕೊರೋನಾ ತಡೆಗೆ ಫೈನಲ್ ಸೂತ್ರ, ಬೆಂಗಳೂರು ಆಗಮನ ನಿರ್ಗಮನ ಬಂದ್?

ಬಿಎಸ್ ಯಡಿಯೂರಪ್ಪ ಸುತ್ತಮುತ್ತಲಿದ್ದವರಿಗೆ,  ಹೆಚ್ಚುವರಿ ಕಾರು ಚಾಲಕನಿಗೆ ಕೊರೋನಾ ಕಾಣಿಸಿಕೊಂಡಿದ್ದು ವರದಿಯಾಗಿತ್ತು. ಮುಂಜಾಗೃತಾ ಕ್ರಮವಾಗಿ ಸಿಎಂ ಯಡಿಯೂರಪ್ಪ ಮನೆಯಲ್ಲೇ ಇದ್ದು ಸರ್ಕಾರ ಮತ್ತು ರಾಜ್ಯದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ತಜ್ಞರು ಮತ್ತು ಸಚಿರೊಂದಿಗೆ ತಮ್ಮ ನಿವಾಸದಲ್ಲಿಯೇ ಸಭೆ ಮಾಡುತ್ತಿದ್ದಾರೆ. 

PREV
click me!

Recommended Stories

Breaking: ವಿಜಯಪುರದಲ್ಲಿ ಐದು ಖಾಸಗಿ ಬಸ್‌ಗಳ ಸರಣಿ ಅಪಘಾತ; ತಪ್ಪಿದ ಅನಾಹುತ!
ಬೆಂಗಳೂರಿಗರಿಗೆ ಗುಡ್‌ನ್ಯೂಸ್: ಹೊಸ ಮೆಟ್ರೋ ಪಿಂಕ್ ಲೈನ್ ಟ್ರಯಲ್ ರನ್ ಶುರು: ಮುಗಿಯಲಿದೆ ಟ್ರಾಫಿಕ್ ಗೋಳು!