ಕೊರೋನಾ ಟೆಸ್ಟ್ ಮಾಡಿದ್ಮೇಲೇನೇ ಕರ್ನಾಟಕದ ಈ ಗ್ರಾಮಕ್ಕೆ ಪ್ರವೇಶ..!

By Kannadaprabha NewsFirst Published Jul 11, 2020, 3:21 PM IST
Highlights

ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಗ್ರಾಮಕ್ಕೆ ಬರುವವರಿಗೆ ಕೊರೋನಾ ಪರೀಕ್ಷೆ ಕಡ್ಡಾಯ ಎಂದು ತಾಲೂಕಿನ ಆಲಹಳ್ಳಿ ಗ್ರಾಮಸ್ಥರು ನಿರ್ಧಾರ ಕೈಗೊಂಡಿದ್ದಾರೆ.

ಕೊಳ್ಳೇಗಾಲ(ಜು.11): ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಗ್ರಾಮಕ್ಕೆ ಬರುವವರಿಗೆ ಕೊರೋನಾ ಪರೀಕ್ಷೆ ಕಡ್ಡಾಯ ಎಂದು ತಾಲೂಕಿನ ಆಲಹಳ್ಳಿ ಗ್ರಾಮಸ್ಥರು ನಿರ್ಧಾರ ಕೈಗೊಂಡಿದ್ದಾರೆ.

ಗ್ರಾಮಸ್ಥರಿಗೆ ಕೊರೋನಾ ಹರಡದಂತೆ ತಡೆಯಲು ಗ್ರಾಮದ ಮುಖಂಡರು, ಹಿರಿಯರ ಸಮ್ಮುಖದಲ್ಲಿ ನಡೆದ ಸಭೆ ನಡೆಯಿತು. ಕೊರೋನಾ ಎಗ್ಗಿಲ್ಲದೆ ಹರಡುತ್ತಿರುವ ಹಿನ್ನೆಲೆ ನಮ್ಮ ಗ್ರಾಮದವರು ಕೆಲಸ ಕಾರ್ಯಗಳಿಗೆ ಬೆಂಗಳೂರು ಸೇರಿದಂತೆ ವಿವಿಧೆಡೆ ತೆರಳಿದ್ದರು.

'ಗೋಮಾತೆ ಕಸಾಯಿಖಾನೆಗೆ ಹೋಗಬಾರದು ಇದು ಬಿಜೆಪಿ ಸರ್ಕಾರದ ಸಂಕಲ್ಪ'

ಅವರು ಪುನಃ ಇಲ್ಲಿಗೆ ಬರಬೇಕಾದರೆ ಅವರು ಕೋವಿಡ್‌ ಪರೀಕ್ಷೆ ಕಡ್ಡಾಯ, ವರದಿ ಪ್ರತಿ ತಂದರೆ ಮಾತ್ರ ಗ್ರಾಮಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗುವುದು, ಇಲ್ಲದಿದ್ದರೆ ಗ್ರಾಮಕ್ಕೆ ಪ್ರವೇಶಕ್ಕೆ ಅವಕಾಶ ನೀಡದಂತೆ ಸಭೆಯಲ್ಲಿ ನಿರ್ಣಯಿಸಲಾಗಿದೆ. ಅಲ್ಲದೆ ಹೋಟೆಲ್‌ಗಳಲ್ಲಿ ತಿಂಡಿ , ಊಟವನ್ನು ಅಂತರ ಕಾಯ್ದುಕೊಂಡು ಕೇವಲ ಪಾರ್ಸಲ್‌ ನೀಡಬೇಕು.

'ಸಿದ್ದರಾಮಯ್ಯ ಮನಸ್ಸು ಗೋ ಹತ್ಯೆ ಪರವಿದೆ'

ನಮ್ಮ ಗ್ರಾಮಸ್ಥರಿಗೆ ಮಾತ್ರ ಕಟಿಂಗ್‌ ಶಾಪ್‌ ಗಳಲ್ಲಿ ಕಟಿಂಗ್‌, ಶೇವಿಂಗ್‌ ಮಾಡತಕ್ಕದ್ದು, ಅನ್ಯರು ಬಂದರೆ ಮಾಡದಂತೆಯೂ ಸಹ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕೆ ಗ್ರಾಮಸ್ಥರು ಹಾಗೂ ಮುಖಂಡರು ಸಹಕರಿಸಬೇಕು ಎಂದು ಮುಖಂಡ ಆಲಹಳ್ಳಿ ತೋಟೇಶ್‌ ಮನವಿ ಮಾಡಿದ್ದಾರೆ.

click me!