
'ಪ್ರವಾದಿ ಮೊಹಮ್ಮದ್ಗೇ ಪೂಜೆ ಮಾಡುವುದು ಇಸ್ಲಾಮ್ನಲ್ಲಿ ನಿಷಿದ್ಧ. ಮನುಷ್ಯರಿಗೆ, ಸೃಷ್ಟಿಗೆ ಪೂಜೆ ಮಾಡುವಂತಿಲ್ಲ. ಅಲ್ಹಾನಿಗೆ ಮಾತ್ರ ಆರಾಧನೆ ಮಾಡಬಹುದು' ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಶಫಿ ಸ-ಅದಿ ಹೇಳಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮನುಷ್ಯರಿಗೆ, ಸೃಷ್ಟಿಗೆ ಪೂಜೆ ಮಾಡುವುದು ಶಿರ್ಕ್ ಮಹಾಪಾಪ. ಇದು ಇಸ್ಲಾಮಿನ ಕಟ್ಟಾಜ್ಞೆ ಎಂದು ಅವರು ಹೇಳಿದ್ದಾರೆ. ಇಸ್ಲಾಮ್ನಲ್ಲಿ ಮೂರ್ತಿ ಪೂಜೆ ಇಲ್ಲ. ಇಸ್ಲಾಮ್ನಲ್ಲಿ ಏನಿದ್ದರೂ 'ಲಾ ಇಲಾಹಾ ಇಲ್ಲಲ್ಲಾ, ಮೊಹಮ್ಮದ್ ರಸೂಲುಲ್ಲಾ' ಎನ್ನುವುದು ಮಾತ್ರ ರೂಢಿಯಲ್ಲಿದೆ. ಇದರ ಅರ್ಥ "ಅಲ್ಲಾಹನನ್ನು ಹೊರತುಪಡಿಸಿ ಅಸ್ತಿತ್ವದಲ್ಲಿ ಯಾವುದೇ ದೇವರು ಸರಿಯಾಗಿ ಪೂಜಿಸಲ್ಪಡುವುದಿಲ್ಲ ಎನ್ನುವುದು ಎಂದು ಅವರು ಹೇಳಿದ್ದಾರೆ.
ಅಲ್ಹಾನಿಲ್ಲದೇ ಆರಾಧ್ಯನಿಲ್ಲ. ಎಲ್ಲರಿಗೂ ಇರುವುದು ದೇವರೊಬ್ಬನೇ. ಆ ಅಲ್ಹಾನಿಗೆ ಆರಾಧನೆ ಮಾಡಿದರೆ ಮಾತ್ರ ಮುಸ್ಲಿಮನಾಗುವುದು. ಬೇರೆ ಯಾರಿಗೂ ಆರಾಧನೆ ಮಾಡುವ ಹಾಗಿಲ್ಲ, ಪೂಜೆಯನ್ನೂ ಮಾಡುವ ಹಾಗಿಲ್ಲ ಎಂದು ಮುಹಮ್ಮದ್ ಶಫಿ ಸ-ಅದಿ ಹೇಳಿದ್ದಾರೆ. ಅವರವರ ಧರ್ಮಕ್ಕೆ ಅನುಸಾರವಾಗಿ ಪೂಜೆ ಮಾಡಿ ಎಂದು ಅಲ್ಹಾನೇ ಹೇಳುತ್ತಾರೆ. ನಿಮ್ಮ ಧರ್ಮ ನಿಮಗೆ, ಅವರವರಿಗೆ ಆ ಧರ್ಮ ಎಂದಿರುವ ಅವರು, ಅಲ್ಹಾನೇ ಅವಕಾಶ ಕೊಡದಿದ್ದ ಮೇಲೆ ಇನ್ನು ಅದನ್ನು ಪಾಲನೆ ಮಾಡಲು ನಾವ್ಯಾರು ಎಂದು ಪ್ರಶ್ನಿಸಿದ್ದಾರೆ.
ಪೆಹಲ್ಗಾಮ್ ಘಟನೆ ನೆನಪಿಗೆ….
'ಲಾ ಇಲಾಹಾ ಇಲ್ಲಲ್ಲಾ, ಮೊಹಮ್ಮದ್ ರಸೂಲುಲ್ಲಾ' ಎನ್ನುವುದನ್ನು ಕೂಡ ಇಸ್ಲಾಂನಲ್ಲಿ ಕಲ್ಮಾ ಎನ್ನುತ್ತಾರೆ. ಈ ಶಬ್ದ ಇತ್ತೀಚೆಗೆ ಕೇಳಿಬಂದದ್ದು, ಕಳೆದ ಏಪ್ರಿಲ್ನಲ್ಲಿ ಕಾಶ್ಮೀರದ ಪೆಹಲ್ಗಾಮ್ನಲ್ಲಿ (Pahalgam attack) ನಡೆದ ದುರ್ಘಟನೆಯ ಸಂದರ್ಭದಲ್ಲಿ. ಪೆಹಲ್ಗಾಮ್ನಗೆ ಬಂದ ಪ್ರವಾಸಿಗರು ಮುಸ್ಲಿಮರು ಹೌದೋ ಅಲ್ಲವೋ ಎನ್ನುವುದನ್ನು ತಿಳಿಯುವುದಕ್ಕಾಗಿ ಕಲ್ಮಾ ಪಠಿಸುವಂತೆ ಕೇಳಲಾಗಿತ್ತು. ಆ ಸಂದರ್ಭದಲ್ಲಿ ಇದನ್ನು ಪಠಿಸದ ಹಲವರು ಪ್ರಾಣ ಕಳೆದುಕೊಂಡಿದ್ದರು. ಆದರೆ ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಅಸ್ಸಾಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ದೇಬಶಿಶ್ ಭಟ್ಟಾಚಾರ್ಯ ಅವರು ಪ್ರಾಣ ಉಳಿಸಿಕೊಂಡಿದ್ದರು. ಆ ಘಟನೆಯ ಬಳಿಕ ಇದು ಸೋಷಿಯಲ್ ಮೀಡಿಯಾದಲ್ಲಿ ಬಹಳ ಸದ್ದು ಮಾಡಿದ ಶಬ್ದವಾಗಿತ್ತು.
ಘಟನೆ ನಡೆದು ಐದು ತಿಂಗಳ ಬಳಿಕ ಮತ್ತೆ ಈ ಬಗ್ಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಶಫಿ ಸ-ಅದಿ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.