ಮುಡಾ ಹಗರಣ: ಅಂದೇ ಸಿದ್ದು ನನ್ನ ಮಾತು ಕೇಳಿದ್ರೆ ಸಿಎಂ ಕುರ್ಚಿ ಅಲುಗಾಡುತ್ತಿರಲಿಲ್ಲ, ಪ್ರತಾಪ್‌ ಸಿಂಹ

By Girish Goudar  |  First Published Oct 1, 2024, 11:48 AM IST

ಒಡವೆ ಕದ್ದ ಕಳ್ಳ ಒಡವೆ ವಾಪಸ್ ಕೊಟ್ಟರೆ ಕೇಸ್ ಮುಗಿಯುತ್ತಾ? ಇಲ್ಲ‌ ಅಲ್ವಾ?. ಸಿಎಂ ತಮ್ಮ ಸೈಟ್‌ಗೆ  64 ಕೋಟಿ ರು. ಕೇಳಿದ ದಿನವೇ ಸಿಎಂ ಮೇಲಿನ ಗೌರವ, ವಿಶ್ವಾಸ ನೆಲ ಕಚ್ಚಿತು. ಈಗ ಸಿಎಂ ಪತ್ನಿ ಸೈಟ್ ವಾಪಾಸ್ ಕೊಟ್ಟರೂ ಅಷ್ಟೆ ಕೊಡದಿದ್ದರು ಅಷ್ಟೆ. ತನಿಖೆ ಆಗಲೇಬೇಕು ಎಂದು ತಿಳಿಸಿದ ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹ 


ಮೈಸೂರು(ಅ.01):  ಎರಡೂವರೆ ತಿಂಗಳ ಹಿಂದೆಯೇ ನಾನು ಸಿಎಂಗೆ ನಿಮಗೆ ಬಂದ ಅಕ್ರಮ ಸೈಟ್ ವಾಪಾಸ್ ಕೊಟ್ಟು ಬಿಡಿ ಎಂದು ಹೇಳಿದ್ದೆ. ಸಿಎಂ ಅವರ ಇಷ್ಟು ವರ್ಷದ ರಾಜಕೀಯ ಜೀವನವನ್ನು 14 ಸೈಟ್ ನುಂಗಬಾರದು ಎಂದು ಅವತ್ತೆ ಹೇಳಿದ್ದೆ. ಎರಡೂವರೆ ತಿಂಗಳ ಹಿಂದೆ ವಾಪಸ್ ಕೊಟ್ಟಿದ್ದರೆ ಇವತ್ತು ಪ್ರಾಸಿಕ್ಯೂಷನ್, ಕೇಸ್ ಏನೂ ಆಗುತ್ತಿರಲಿಲ್ಲ. ಕುರ್ಚಿಯೂ ಅಲುಗಾಡುತ್ತಿರಲಿಲ್ಲ. ಹೊಗಳು ಭಟ್ಟರು ಬಹುಪರಾಕ್ ಹಾಕುವವರನ್ನು ಇಟ್ಟುಕೊಂಡಿರುವ ಪರಿಣಾಮ ಸಿಎಂ ಸಿದ್ದರಾಮಯ್ಯಗೆ ಈ ಸ್ಥಿತಿ ಬಂದಿದೆ ಎಂದು ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. 

ಮುಡಾಗೆ ಸಿಎಂ ಪತ್ನಿ ಸೈಟ್ ವಾಪಾಸ್ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಅಧಿಕಾರದಲ್ಲಿ ಇದ್ದಾಗ ಕುಟುಂಬ ಹತ್ತಿರವಿಟ್ಟುಕೊಂಡರೆ, ಮಕ್ಕಳ ಬೆಳೆಸಲು ಮುಂದಾದರೆ ಅದೇ ಕುಟುಂಬ ನಿಮ್ಮ ಹೆಸರಿಗೆ ಕಳಂಕ ತರುತ್ತಾರೆ ಎಂಬುದಕ್ಕೆ ಇದು ಇದೊಂದು ಉದಾಹರಣೆಯಾಗಿದೆ. ಒಡವೆ ಕದ್ದ ಕಳ್ಳ ಒಡವೆ ವಾಪಸ್ ಕೊಟ್ಟರೆ ಕೇಸ್ ಮುಗಿಯುತ್ತಾ? ಇಲ್ಲ‌ ಅಲ್ವಾ?. ಸಿಎಂ ತಮ್ಮ ಸೈಟ್‌ಗೆ 64 ಕೋಟಿ ರು. ಕೇಳಿದ ದಿನವೇ ಸಿಎಂ ಮೇಲಿನ ಗೌರವ, ವಿಶ್ವಾಸ ನೆಲ ಕಚ್ಚಿತು. ಈಗ ಸಿಎಂ ಪತ್ನಿ ಸೈಟ್ ವಾಪಾಸ್ ಕೊಟ್ಟರೂ ಅಷ್ಟೆ ಕೊಡದಿದ್ದರು ಅಷ್ಟೆ. ತನಿಖೆ ಆಗಲೇಬೇಕು ಎಂದು ತಿಳಿಸಿದ್ದಾರೆ. 

Tap to resize

Latest Videos

undefined

ಮುಡಾ ಕೇಸ್‌ಗೆ ಇಡಿ ಎಂಟ್ರಿ, ಯಾವುದೇ ಕ್ಷಣದಲ್ಲಿ ಸಿಎಂ ನಿವಾಸದ ಮೇಲೆ ದಾಳಿ!

ವರುಣಾ ಚುನಾವಣೆ ಸಂದರ್ಭದಲ್ಲೇ ನನಗೆ ಈ ಸೈಟ್ ದಾಖಲಾತಿ ಬಂದಿತ್ತು. ಪತ್ನಿ ಹೆಸರಿದೆ ವೈಯಕ್ತಿಕ ದಾಳಿ ಬೇಡ ಅಂತಾ ಸುಮ್ಮನಿದ್ದೆ. ರಾಜಕಾರಣಿಗಳೇ ನಿಮ್ಮ ಹೆಂಡತಿ, ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ. ಈ ಹಿಂದೆ ಸಿಎಂ ಗಳಾಗಿ ಜೈಲಿಗೆ ಹೋಗಿದ್ದು ಅವರ ಕುಟುಂಬದ, ಮಕ್ಕಳ ಕಾರಣಕ್ಕಾಗಿ ಎಂಬುದು ನೆನಪಿರಲಿ. ಈಗ ಸಿಎಂ ಪತ್ನಿಯ ಭಾವನಾತ್ಮಕ ಕಾರ್ಡ್ ವರ್ಕ್ ಆಗಲ್ಲ. ಪಾರ್ವತಮ್ಮ ಅವರಿಗೆ ತಮ್ಮ ಪತಿಯ ತಪ್ಪಸ್ಸಿನ ರೀತಿಯ  ರಾಜಕಾರಣಕ್ಕಿಂತಾ ಸೈಟ್ ಮುಖ್ಯವಾಗಿ ಇಷ್ಟು ದಿನ ಹಠ ಹಿಡಿದು ಕೂತಿದ್ದೆ ಬಹುದೊಡ್ಡ ತಪ್ಪು. ಸೈಟ್ ವಾಪಾಸ್ ಕೊಡುವುದಾಗಿದ್ದರೆ. ಹೈಕೋರ್ಟ್‌ನಲ್ಲಿ ಯಾಕೆ ಈ ಬಗ್ಗೆ ಫೈಟ್ ಮಾಡಿದ್ರಿ? ಎಂದು ಪ್ರಶ್ನಿಸಿದ್ದಾರೆ. 

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮತ್ತು ಲೋಕಾಯುಕ್ತ ಎಡಿಜಿಪಿ ಜಟಾಪಟಿ ವಿಚಾರದ ಬಗ್ಗೆ ಮಾತನಾಡಿದ ಪ್ರತಾಪ್‌ ಸಿಂಹ, ರಾಜಕಾರಣಿಗಳಿಗಿಂತಾ ಅಧಿಕಾರಿಗಳೇ ಹೆಚ್ಚು ಭ್ರಷ್ಟರಾಗಿದ್ದಾರೆ. ಚಂದ್ರಶೇಖರ್  ಬಗ್ಗೆ ಕುಮಾರಸ್ವಾಮಿ ಬಳಿ ದಾಖಲೆ ಇರಬಹುದು. ಅದಕ್ಕೆ ಆರೋಪ ಮಾಡಿದ್ದಾರೆ. ಅಧಿಕಾರಿ ಚಂದ್ರಶೇಖರ್ ಸತ್ಯಸಂಧ ನಾಗಿದ್ದರೆ, ಕುಮಾರಸ್ವಾಮಿ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಿ ಎಂದು ಹೇಳಿದ್ದಾರೆ. 

ಚಂದ್ರಶೇಖರ್ ಕರ್ನಾಟಕ ಕೇಡರ್ ಅಧಿಕಾರಿ ಅಲ್ಲ. ಹಿಮಾಚಲ ಕೇಡರ್ ಅಧಿಕಾರಿ. ನೀವು ಯಾಕೆ ಕರ್ನಾಟಕದಲ್ಲಿದ್ದಿರಾ?. ಚಂದ್ರಶೇಖರ್ ನೀವು ಈ ರಾಜ್ಯದಿಂದ ತೊಲಗಿ. ಗೆಟ್ ಲಾಸ್ಟ್. ಸಿಎಂ ಹಾಗೂ ಡಿಸಿಎಂಗೆ ಯಾರಾದರೂ ಅಧಿಕಾರಿ ಹಂದಿ ಅಂಥ ಕರೆದಿದ್ದರೆ ಸುಮ್ಮನೆ ಇರುತ್ತಿದ್ದರಾ?. ಚಂದ್ರಶೇಖರ್ ಮೊದಲು ಸಂಸ್ಪೆಡ್ ಆಗಬೇಕು. ಕನ್ನಡಿಗ ಕುಮಾರಸ್ವಾಮಿ ಮೇಲೆ ಏನೇನೋ ಮಾತಾಡಿದರೆ ಸುಮ್ಮನೆ ಬಿಡಲ್ಲ. ಮಿಸ್ಟರ್ ಚಂದ್ರಶೇಖರ್   ಭಾಷೆ ಮೇಲೆ ಹಿಡಿತ ಇರಲಿ. ಹಂದಿಗಳು ಬೇಕಿದ್ರೆ ಆಂಧ್ರಕ್ಕೆ ಹೋಗಿ ಅಲ್ಲೆ ಜಾಸ್ತಿ ಹಂದಿಗಳು ಇರೋದು. ಚಂದ್ರಶೇಖರ್ ನಿಮ್ಮ ಉದ್ಧಟತನ ನಮ್ಮ‌ ಬಳಿ ನಡೆಯಲ್ಲ‌, ಎಚ್ಚರಿಕೆ ಇರಲಿ ಎಂದು ತಿಳಿಸಿದ್ದಾರೆ. 

click me!