'ಚುಕ್ಕಿ, ಚಂದ್ರಮ ತೋರಿಸಿ ಹೆಬ್ಬಾ​ಳ​ಕ​ರ್‌ ರಾಜಕೀಯ'

By Kannadaprabha News  |  First Published Oct 1, 2021, 2:49 PM IST

*  ಬಿಜೆಪಿಯು ಕಾಂಗ್ರೆಸ್‌ ರೀತಿ ಹೊಲಸು ರಾಜಕೀಯ ಮಾಡುತ್ತಿಲ್ಲ
*  ಹೆಬ್ಬಾಳಕರ್‌ಗೆ ಸತ್ಯ ಎದುರಿಸುವ ಶಕ್ತಿ ಇನ್ನೂ ಬಂದಿಲ್ಲ
*  ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿರುವ ಹೆಬ್ಬಾಳಕರ್‌ 
 


ಬೆಳಗಾವಿ(ಅ.01): ಕ್ಷೇತ್ರದ ಜನತೆಗೆ ಚುಕ್ಕಿ, ಚಂದ್ರಮ ತೋರಿಸಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌(Lakshmi Hebbalkar) ಅವ​ರು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ(Sanjay Patil) ಟೀಕಿಸಿದ್ದಾರೆ. 

ಬುಧವಾರ ರಾತ್ರಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಹೆಬ್ಬಾಳಕರ್‌ಗೆ ಸತ್ಯ ಎದುರಿಸುವ ಶಕ್ತಿ ಇನ್ನೂ ಬಂದಿಲ್ಲ. ಶಾಸಕಿ ಆಗುವುದಕ್ಕೂ ಮೊದಲು ನಾನು ನಿಮ್ಮ ಮಗಳು, ವಿವಿಧ ಅಭಿವೃದ್ಧಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಹಾಗಾಗಿ, ಕ್ಷೇತ್ರದ ಜನರೇ ಇದೀಗ ಅವರಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ, ಹೆಬ್ಬಾಳಕರ್‌ ಬಿಜೆಪಿ(BJP) ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

Tap to resize

Latest Videos

ಬೆಳಗಾವಿ: ಅಕ್ಕ 30% ಕಮಿಷನ್‌ ಪಡೆದು ರಸ್ತೆ ಮಾಡಿಸ್ತಾರೆ, ಹೆಬ್ಬಾಳಕರ್‌ ವಿರುದ್ಧ ಬ್ಯಾನರ್‌..!

ಬಿಜೆಪಿಯು ಕಾಂಗ್ರೆಸ್‌(Congress) ರೀತಿ ಹೊಲಸು ರಾಜಕೀಯ ಮಾಡುತ್ತಿಲ್ಲ. ಜನರು ಟೀಕೆ ಮಾಡುವುದನ್ನು ಹೆಬ್ಬಾಳಕರ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದಾಗಿ ಬಿಜೆಪಿ ಮೇಲೆ ಸಿಟ್ಟು ತೋರಿಸುತ್ತಿದ್ದಾರೆ. ಅವರಿಗೆ ಟೀಕೆ, ಟಿಪ್ಪಣಿಗಳನ್ನು ಸಹಿಸಿಕೊಳ್ಳುವ ಶಕ್ತಿ ಬರಲಿ ಎಂದರು.

ನಾನು ಶಾಸಕನಾಗಿದ್ದ ವೇಳೆ ಅಭಿವೃದ್ಧಿ ಕೆಲಸವನ್ನೇ ಮಾಡಿಲ್ಲ ಎಂದು ಹೆಬ್ಬಾಳಕರ್‌ ಟೀಕಿಸುತ್ತ ಬಂದಿದ್ದರು. ಈಗ ಅವರ ಕ್ಷೇತ್ರದಲ್ಲಿ ಮರಾಠಿ ಭಾಷಿಗರು ಬ್ಯಾನರ್‌ ಬರವಣಿಗೆ ನೋಡಿದರೆ ಯಾರು ಕೆಲಸ ಮಾಡುತ್ತಿಲ್ಲ ಎನ್ನುವುದು ಗೊತ್ತಾಗುತ್ತದೆ. ಹೆಬ್ಬಾಳಕರ್‌ ಸ್ವಯಂ ಘೋಷಿತವಾಗಿ ಮಹಾರಾಣಿ ಇಲ್ಲವೇ ಅಭಿವೃದ್ಧಿ ರಾಣಿ ಎಂದು ತಮ್ಮನ್ನು ತಾವು ಕರೆದುಕೊಳ್ಳಲಿ, ಅದಕ್ಕೆ ನಾನೇನು ಮಾಡಲಿಕ್ಕಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.
 

click me!