ಲಸಿಕೆ ಖರೀದಿಗೆ ಒಂದು ಕೋಟಿ ನೀಡಲು ಸಿದ್ಧ: ನೇಮಿರಾಜನಾಯ್ಕ

Kannadaprabha News   | Asianet News
Published : Jun 17, 2021, 01:29 PM IST
ಲಸಿಕೆ ಖರೀದಿಗೆ ಒಂದು ಕೋಟಿ ನೀಡಲು ಸಿದ್ಧ: ನೇಮಿರಾಜನಾಯ್ಕ

ಸಾರಾಂಶ

* 150 ಆಟೋ ಚಾಲಕರಿಗೆ ಆಹಾರ ಕಿಟ್ ವಿತರಣೆ *  ಹಗರಿಬೊಮ್ಮನಹಳ್ಳಿ ಕ್ಷೇತ್ರದ ಎಲ್ಲರಿಗೂ ಲಸಿಕೆ ದೊರೆಯಬೇಕು * ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ   

ಕೊಟ್ಟೂರು(ಜೂ.17):  ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜನತೆಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ದೊರೆಯವಂತಾಗಲು ವೈಯಕ್ತಿಕವಾಗಿ 1 ಕೋಟಿ ನೀಡಲು ಸಿದ್ಧ ಎಂದು ಮಾಜಿ ಶಾಸಕ ನೇಮಿರಾಜನಾಯ್ಕ ಘೋಷಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ಕ್ಷೇತ್ರದ ಎಲ್ಲರಿಗೂ ಲಸಿಕೆ ದೊರೆಯುವಂತಾಗಲು ಸ್ವಂತ ಹಣದಿಂದ ಒಂದು ಕೋಟಿ ರು. ನೀಡುವೆ ಎಂದು ಶಾಸಕ ಭೀಮಾನಾಯ್ಕ ಮಂಗಳವಾರ ಕೊಟ್ಟೂರಿನಲ್ಲಿ ಹೇಳಿಕೆ ನೀಡಿದ್ದರು. ಅಲ್ಲದೇ ಮಾಜಿ ಶಾಸಕರು ಸಹ ಒಂದು ಕೋಟಿ ರು. ಲಸಿಕೆಗೆ ಸ್ವಂತ ಹಣ ನೀಡಲಿ ಎಂದು ಸವಾಲು ಹಾಕಿದ್ದರು.

ಸರ್ಕಾರದ ವಿರುದ್ಧ ಕಾಂಗ್ರೆಸ್‌ ಅಪಪ್ರಚಾರ: ನೇಮಿರಾಜ್‌ ನಾಯ್ಕ್‌

ಇದಕ್ಕೆ ಪ್ರತಿಯಾಗಿ ಮಾಜಿ ಶಾಸಕ ನೇಮಿರಾಜನಾಯ್ಕ ಸಹ ಒಂದು ಕೊಟಿ ರುಪಾಯಿ ಕೊಡಲು ಸಿದ್ಧ ಎಂದು ಬುಧವಾರ ಘೋಷಿಸಿದ್ದಾರೆ. ಕೊಟ್ಟೂರಿನ ಮರಿಕೊಟ್ಟೂರೇಶ್ವರ ದೇವಸ್ಥಾನದ ಬಳಿ 150 ಆಟೋ ಚಾಲಕರಿಗೆ ಬಿಜೆಪಿ ಯುವ ಮೋರ್ಚಾದಿಂದ ಆಹಾರ ಕಿಟ್‌ಗಳನ್ನು ವಿತರಿಸಿ ನಂತರ ಮಾತನಾಡಿ, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಇದುವರೆಗೂ 3000 ಕಿಟ್‌ಗಳನ್ನು ವಿತರಿಸಿರುವುದಾಗಿ ಹೇಳಿದರು.

ಕೊಟ್ಟೂರು ಬಿಜೆಪಿ ಪಟ್ಟಣ ಘಟಕದ ಅಧ್ಯಕ್ಷ ಬಿ.ಆರ್‌. ವಿಕ್ರಮ್‌, ಕೋಗಳಿ ಸಿದ್ದಲಿಂಗನಗೌಡ್ರು, ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ಎಸ್‌. ಈಶ್ವರಗೌಡ, ತಿಪ್ಪೇಸ್ವಾಮಿ ಬೋರ್‌ವೆಲ್‌, ಜಿ. ಸಿದ್ದಯ್ಯ, ಬಿಜೆಪಿ ಮಂಡಲ ಕಾರ್ಯದರ್ಶಿ ಡಾ. ರಾಖೇಶ್‌, ಹಗರಿಬೊಮ್ಮನಹಳ್ಳಿ ಬಿಜೆಪಿ ಪಟ್ಟಣ ಘಟಕದ ಜಗದೀಶ್‌, ರಾಜು ಪಾಟೇಲ್‌, ಕೊನಾಪುರ ಬಸವರಾಜ್‌, ಅರವಿಂದ ಬಸಾಪುರ, ಎಸ್‌. ವೀರೇಶ್‌ಗೌಡ, ಪ್ರಕಾಶ್‌ ಇತರರು ಇದ್ದರು.
 

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು