ಆತಂಕ ಮೂಡಿಸಿದ ವಿದೇಶಿ ಹಕ್ಕಿ ಸಾವು, ಪತ್ತೆಯಾಗದ ಕಾರಣ

By Kannadaprabha News  |  First Published Mar 21, 2020, 1:01 PM IST

ಬ್ಲಾಕ್‌ ಹೈಬಿಯಸ್‌ ಜಾತಿಗೆ ಸೇರಿದ ಹಕ್ಕಿಯೊಂದು ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ ಶೆಟ್ಟಿಹಳ್ಳಿ ಗ್ರಾಮದ ಸಮೀಪ ಸತ್ತು ಬಿದ್ದಿದೆ. ಈ ಪಕ್ಷಿಯ ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲದಿರುವುದು, ಈ ಕೊಕ್ಕರೆಯ ಸಾವು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.


ಬೆಂಗಳೂರು(ಮಾ.21): ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ ಶೆಟ್ಟಿಹಳ್ಳಿ ಗ್ರಾಮದ ಸಮೀಪ ವಿದೇಶಿ ಹಕ್ಕಿಯೊಂದು ಸಾವಿಗೀಡಾಗಿರುವುದು ಇದೀಗ ಜನತೆಯಲ್ಲಿ ಆತಂಕ ಮೂಡಿಸಿದೆ.

ಗುರುವಾರ ಸಂಜೆ ಬ್ಲಾಕ್‌ ಹೈಬಿಯಸ್‌ ಜಾತಿಗೆ ಸೇರಿದ ಹಕ್ಕಿಯೊಂದು ಸತ್ತು ಬಿದ್ದಿದೆ. ಈ ಪಕ್ಷಿಯ ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲದಿರುವುದು, ಈ ಕೊಕ್ಕರೆಯ ಸಾವು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

Latest Videos

undefined

2 ರೂಪಾಯಿ ಮೊಟ್ಟೆಗೆ ಮುಗಿಬಿದ್ರು ಜನ..! ಕ್ಷಣ ಹೊತ್ತಲ್ಲಿ ಖಾಲಿ ಆಯ್ತು 90 ಸಾವಿರ ಮೊಟ್ಟೆ

ಈಗಾಗಲೇ ರಾಜ್ಯದಲ್ಲಿ ಕೊರೋನಾ ಜ್ವರದ ಭೀತಿ ಹೆಚ್ಚಿದೆ. ಮತ್ತೊಂದೆಡೆ ಹಕ್ಕಿಜ್ವರದ ಭೀತಿಯೂ ಮೂಡಿದ್ದು, ಮೈಸೂರಿನಲ್ಲಿ ಹಕ್ಕಿಜ್ವರದ ಸೋಂಕಿನ ಬಗ್ಗೆ ವರದಿಯಾಗಿರುವ ಹಿನ್ನೆಲೆಯಲ್ಲಿ ಈ ಕೊಕ್ಕರೆ ಸಾವು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಹಲವಾರು ವಿದೇಶ ಹಕ್ಕಿಗಳು ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿಗೆ ವಲಸೆ ಬರುತ್ತವೆ. ಈ ವಲಸೆ ಹಕ್ಕಿಗಳು ತಾಲೂಕಿನ ಕೆರೆಗಳು ತುಂಬಿರುವ ಹಿನ್ನೆಲೆಯಲ್ಲಿ ಆಹಾರ ಅರಸಿ ಇತ್ತ ಆಗಮಿಸುತ್ತವೆ. ಹೀಗೆ ಆಗಮಿಸಿದ ಈ ಪಕ್ಷಿ ಸಾವಿಗೀಡಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಅಧಿಕಾರಿಗಳ ಭೇಟಿ:

ಕೊಕ್ಕರೆ ಸಾವಿಗೀಡಾಗಿರುವ ಸುದ್ದಿ ತಿಳಿದು ಸ್ಥಳಕ್ಕೆ ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಜಯರಾಮು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಪಕ್ಷಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದು, ಪ್ರಯೋಗಾಲಯದ ವರದಿ ಬಂದ ಬಳಿಕ ಕೊಕ್ಕರೆ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆತಂಕ ಬೇಡ:

ತಾಲೂಕಿನಲ್ಲಿ ಇರುವರೆಗೆ ಯಾವುದೇ ಹಕ್ಕಿಜ್ವರದ ಪ್ರಕರಣ ಪತ್ತೆಯಾಗಿಲ್ಲ. ಈ ಪಕ್ಷಿ ಸಾವು ಸಹ ಮೇಲ್ನೋಟಕ್ಕೆ ಹಕ್ಕಿಜ್ವರದಿಂದ ಸಂಭವಿಸಿದ ಸಾವಿನಂತೆ ಕಂಡು ಬರುತ್ತಿಲ್ಲ. ಹಕ್ಕಿಯ ರೆಕ್ಕೆ ಮುರಿದಿದ್ದು, ಯಾವುದೋ ಅವಘಡದಲ್ಲಿ ಸಾವಿಗೀಡಾಗಿದೆ ಎನಿಸುತ್ತಿದೆ. ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸಾರ್ವಜನಿಕರಲ್ಲಿ ಯಾವುದೇ ಕಾರಣಕ್ಕೂ ಆತಂಕ ಬೇಡ ಎಂದು ರಾ.ಜಯರಾಮ್‌ ತಿಳಿಸಿದ್ದಾರೆ.Foreign bird found dead in Channapatna

click me!