ಚಿತ್ರದುರ್ಗದಲ್ಲಿ ಎಗ್ಗಿಲ್ಲದೇ ಬಲವಂತದ ಮತಾಂತರ ನಡೆಯುತ್ತಲೇ ಇದೆ. ಅದಕ್ಕೆ ಸೂಕ್ತ ನಿದರ್ಶನ ಎಂಬಂತೆ ಹಿರಿಯೂರು ತಾಲೂಕಿನ ಮಲ್ಲೇಣು ಗ್ರಾಮದಲ್ಲಿ ಬಲವಂತದ ಮತಾಂತರ ಮಾಡುವ ಪ್ರಕ್ರಿಯೆ ಬೆಳಕಿಗೆ ಬಂದಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜೂನ್ 29): ಚಿತ್ರದುರ್ಗ ಜಿಲ್ಲೆಯಲ್ಲಿ ಮತಾಂತರ ಎಂಬುದು ದೊಡ್ಡ ಮಟ್ಟದ ಪಿಡುಗಾಗಿದೆ. ಈ ವಿಚಾರವಾಗಿ ಸರ್ಕಾರ ಬಲವಂತದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ರು ಯಾವುದೇ ಪ್ರಯೋಜನ ಆಗ್ತಿಲ್ಲ. ಯಾಕಂದ್ರೆ ಜಿಲ್ಲೆಯಲ್ಲಿ ಮಾತ್ರ ಎಗ್ಗಿಲ್ಲದೇ ಬಲವಂತದ ಮತಾಂತರ ಮಾತ್ರ ನಡೆಯುತ್ತಲೇ ಇದೆ. ಅದಕ್ಕೆ ಸೂಕ್ತ ನಿದರ್ಶನ ಎಂಬಂತೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಮಲ್ಲೇಣು ಗ್ರಾಮದಲ್ಲಿ ಬಲವಂತದ ಮತಾಂತರ ಮಾಡುವ ಪ್ರಕ್ರಿಯೆ ಬೆಳಕಿಗೆ ಬಂದಿದೆ.
ಈಗಾಗಲೇ ಹಿಂದೂ ಸಮಾಜದಲ್ಲಿ ಹುಟ್ಟು ಈಗ ಮತಾಂತರಗೊಂಡಿರೋ ಕೆಲ ವ್ಯಕ್ತಿಗಳು ರಾತ್ರೋರಾತ್ರಿ ಗ್ರಾಮೀಣ ಭಾಗದ ಹಳ್ಳಿಗಳಿಗೆ ಲಗ್ಗೆ ಇಟ್ಟು ಬಲವಂತದ ಮತಾಂತರ ಪ್ರಕ್ರಿಯೆಯನ್ನು ಶುರು ಮಾಡಿದ್ದಾರೆ. ಬೆಳಗಿನ ವೇಳೆಯಲ್ಲಿ ಯಾರಾದ್ರು ನಿಷೇಧ ಏರಬಹುದು ಎಂಬ ಭಯದಿಂದ ರಾತ್ರಿ ವೇಳೆ ಜನರನ್ನು ಮರುಳು ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಕುರಿತು ಜಿಲ್ಲೆಯಲ್ಲಿ ಅನೇಕ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಗಲಾಟೆ ಮಾಡಿ ಮತಾಂತರ ಮಾಡಲು ಬಂದಂತಹ ಎಷ್ಟೋ ಮಂದಿಯನ್ನು ಊರಿಂದ ಆಚೆ ಕಳಿಸಿದ್ದಾರೆ. ಆದ್ರೆ ಈಗ ಪ್ಲಾನ್ ಉಪಯೋಗಿಸಿರೋ ಹಿಂದೂ ಮಿಶ್ರಿತ ಕ್ರಿಶ್ಚಿಯನ್ನರು ಮಹಿಳೆಯರನ್ನು ಮುಂದೆ ಬಿಟ್ಟು ಮತಾಂತರ ಮಾಡಿಸುವ ಕೆಲಸವನ್ನು ಮಾಡಿಸುತ್ತಿದ್ದಾರೆ.
ನಟಿ ಅನುಷ್ಕಾ ಶೆಟ್ಟಿ ಅಣ್ಣನ ಹತ್ಯೆಗೆ ಸಂಚು, ಮಂಗಳೂರು ಪೊಲೀಸರಿಂದ ನೋಟಿಸ್
ಇಂದು ಹಿರಿಯೂರು ತಾಲೂಕಿನ ಮಲ್ಲೇಣು ಗ್ರಾಮದಲ್ಲಿ ರಾತ್ರಿ ವೇಳೆ ಮಹಿಳೆಯೋರ್ವಳು ಹಿಂದೂಗಳ ಮನೆಯಲ್ಲಿ ಬಲವಂತವಾಗಿ ಮತಾಂತರ ಮಾಡಿಸಲಾಗ್ತಿದೆ ಎಂಬ ಮಾಹಿತಿ ಬಂದ ಕೂಡಲೇ, ಹಿಂದೂ ಸಂಘಟನೆಗಳು ಅದ್ರಲ್ಲೂ ಭಜರಂಗದಳದ ಕಾರ್ಯಕರ್ತರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ರೆಡ್ ಹ್ಯಾಂಡ್ ಆಗಿ ಮತಾಂತರಿಗಳು ಸಿಕ್ಕಿಬಿದ್ದಿದ್ದಾರೆ. ಇದ್ರಿಂದ ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ಕೂಡಲೇ ಅವರನ್ನು ಮನೆಯಿಂದ ಆಚೆ ಕರೆಸಿ ಅವರಿಗೆ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಕೆಲ ಕಾಲ ಕ್ರಿಶ್ಚಿಯನ್ ಮಹಿಳೆ ಹಾಗೂ ಭಜರಂಗದಳದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಇದ್ರಿಂದ ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ಕೂಡಲೇ ಪ್ರಾರ್ಥನೆ ಹೇಳಿ ಕೊಡಲು ಬಂದಿದ್ದ ಕ್ರಿಶ್ಚಿಯನ್ ಮಹಿಳೆಯ ಬಳಿ ಇದ್ದ ಬೈಬಲ್ ಗ್ರಂಥದ ಪ್ರತಿಗಳನ್ನು ಹರಿದು ಹಾಕಿದ್ದಾರೆ. ಅಲ್ಲದೇ ಆ ಪ್ರತಿಗಳನ್ನು ಅಲ್ಲೇ ಅವರ ಮುಂದೇ ಸುಟ್ಟು ಭಸ್ಮ ಮಾಡಿದ್ದಾರೆ. ಇದ್ರಿಂದ ಪ್ರತಿಯೊಬ್ಬ ಹಿಂದೂಗಳಿಗೆ ಯಾರೂ ಮತಾಂತರ ಆಗಬಾರದು ಎಂದು ಸಂದೇಶ ರವಾನಿಸಿದರು. ಇಷ್ಟೆಲ್ಲಾ ಆದ ಮೇಲೆ ಗ್ರಾಮದ ಕೆಲ ಜನರು ಮತಾಂತರ ಆಗುವುದು ಸರಿಯಲ್ಲ ಎಂದು ಬುದ್ದಿಪಾಠ ಕಲಿತರು ಎನ್ನಲಾಗ್ತಿದೆ.
Udaipur murder; ಒಳ್ಳೆಯ ಮುಸ್ಲಿಂಮರು ಈಗ್ಯಾಕೆ ಮೌನ ವಹಿಸಿದ್ದೀರಿ: ಸಂಸದ ಸಿಂಹ ಕಿಡಿ
ಆದ್ರೆ ಈ ಮತಾಂತರ ಪ್ರಕ್ರಿಯೆ ಹೇಗೆ? ಹಾಗೂ ಯಾರ ಮೇಲೆ ಪ್ರಯೋಗ ಮಾಡಲಾಗುತ್ತೆ ಎಂದು ಪರಿಶೀಲಿಸಿದಾಗ, ಹಿಂದೂ ಸಮುದಾಯದಲ್ಲಿ ಇರುವ ದಲಿತ, ಹಿಂದುಳಿದ ವರ್ಗಗಳ ಜನರೇ ಈ ಮತಾಂತರಿಗಳಿಗೆ ಟಾರ್ಗೆಟ್. ಯಾಕಂದ್ರೆ ಅವರು ಅಶಕ್ತರು, ಆ ಮನೆಯಲ್ಲಿ ಯಾರೂ ಜವಾಬ್ದಾರಿಯಿಂದ ಜೀವನ ಸಾಗಿಸ್ತಿಲ್ಲ, ಸೋಮಾರಿಗಳು ಆಗಿದ್ದಾರೆ ಎಂಬುದನ್ನು ಮೊದಲು ಸರ್ವೇ ನಡೆಸಿ ಆನಂತರ ಮತಾಂತರಿಗಳು ಅಂತಹ ಅಶಕ್ತ ಮನೆಗಳ ಮೇಲೆ ದಾಳಿ ಮಾಡಿ ಅವರಿಗೆ ಆಸೆ ಆಮೀಷ ತೋರಿಸುವ ಮೂಲಕ ಮತಾಂತರ ಮಾಡಿಸುತ್ತಾರೆ. ಇದು ಚಿತ್ರದುರ್ಗ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು. ಇನ್ನಾದ್ರು ಪೊಲೀಸರು ಇಂತಹವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳಲಿ ಎಂಬುದು ಪ್ರತಿಯೊನ್ನ ಹಿಂದೂವಿನ ಬಯಕೆ.