
ಬೆಂಗಳೂರು: ಒಂದಷ್ಟು ನಿಯಮಗಳನ್ನು ಇಟ್ಟು ಮೂರು ವರ್ಷಗಳ ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಆರಂಭಿಸಿದ್ದ ಗೃಹಲಕ್ಷ್ಮಿ (Gruhalakshmi Scheme) ಯೋಜನೆ ಫಲಾನುಭವಿಗಳ ಪೈಕಿ, ಇದೀಗ ಒಂದಿಷ್ಟು ಮಂದಿಗೆ ಬಿಗ್ ಶಾಕ್ ಕಾದಿದೆ. ಅಕ್ರಮವಾಗಿ ಇಷ್ಟು ವರ್ಷ ಹಣವನ್ನು ಪಡೆದುಕೊಂಡಿದ್ದವರು, ಒಂದೇ ಮನೆಯಲ್ಲಿ ಇಬ್ಬರು- ಮೂವರು ಸೇರಿ ಹಲವಾರು ಮಂದಿ ಸಹಸ್ರಾರು ರೂಪಾಯಿಗಳನ್ನು ಪಡೆದು ಖುಷಿಪಟ್ಟಿದ್ದವರಿಗೆಲ್ಲಾ ಇದೀಗ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಕಡಿವಾಣ ಹಾಕಿದೆ. ಗ್ಯಾರೆಂಟಿ ಯೋಜನೆಗಳಲ್ಲಿ ಕೋಟ್ಯಂತರ ರೂಪಾಯಿಗಳ ಅಕ್ರಮ ನಡೆಯುತ್ತಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ಕಾರ್ಯ ನಡೆಯುತ್ತಿದೆ. ಈ ಕುರಿತು ಅಂಗನವಾಡಿ ಶಿಕ್ಷಕಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮನೆಗೆ ಗೃಹಲಕ್ಷ್ಮಿ ಮರುಪರಿಶೀಲನೆಗೆ ಬಂದಾಗ ಕಡ್ಡಾಯವಾಗಿ ಏನೇನು ಮಾಹಿತಿ ನೀಡಬೇಕು ಎನ್ನುವ ಬಗ್ಗೆ ಶಿಕ್ಷಕಿ ವಿವರಿಸಿದ್ದು, ಇವುಗಳಲ್ಲಿ ಒಂದು ಇಲ್ಲದಿದ್ದರೂ ಗೃಹಲಕ್ಷ್ಮಿ ಯೋಜನೆಯಿಂದ ನೀವು ಔಟ್ ಆಗುವ ಸಾಧ್ಯತೆ ಇದೆ.renukakanadathi ಎನ್ನುವ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಇದನ್ನು ಶೇರ್ ಮಾಡಲಾಗಿದೆ.
* ನೀವು ಗೃಹಲಕ್ಷ್ಮಿ ಯೋಜನೆಗೆ ನೀಡುವ ಮೊಬೈಲ್ ನಂಬರ್ ಅರ್ಥಾತ್ ಸಿಮ್ ಕಾರ್ಡ್ ಫಲಾನುಭವಿ ಹೆಸರಲ್ಲೇ ಇರಬೇಕು. ಬೇರೆಯವರ ಹೆಸರಿನಲ್ಲಿ ಆ ಸಿಮ್ ಕಾರ್ಡ್ ಇದ್ದರೆ, ನೀವು ಅನರ್ಹರಾಗುವಿರಿ
* ಒಂದು ವೇಳೆ ನೀವು ನಿಜವಾಗಿಯೂ ಫಲಾನುಭವಿಯಾಗಿದ್ದು, ಸಿಮ್ ಕಾರ್ಡ್ ನಿಮ್ಮ ಹೆಸರಿನಲ್ಲಿ ಇಲ್ಲದೇ ಹೋದರೆ,, ಕೂಡಲೇ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿ ಮಾಡಿ, ಅದನ್ನು ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗೆ ಕೂಡಲೇ ಲಿಂಕ್ ಮಾಡಿಕೊಳ್ಳಬೇಕು. ಜೊತೆಗೆ E-KYC ಮಾಡಿಸಲೇಬೇಕು.
* ಎಪಿಎಲ್-ಬಿಪಿಎಲ್ ಕಾರ್ಡ್ ಕಡ್ಡಾಯ,
* ಮತದಾರರು ಗುರುತಿನ ಚೀಟಿ ಕಡ್ಡಾಯ
* ನಿಮ್ಮ ಆಧಾರ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರೇ ಕೊಡಬೇಕು. ಬೇರೆಯ ನಂಬರ್ ಇದ್ದರೆ ಯೋಜನೆ ಸಿಗುವುದಿಲ್ಲ.
* ಫಲಾನುಭವಿ ಹೆಸರಿನಲ್ಲಿ ಸಿಂಗಲ್ ಬ್ಯಾಂಕ್ ಅಕೌಂಟ್ ಇರಬೇಕು. ಇದರ ಅರ್ಥ ಪತಿಯೋ ಇನ್ನಾರದ್ದೋ ಹೆಸರಿನಲ್ಲಿ ಜಾಯಿಂಟ್ ಅಕೌಂಟ್ ಇರಬಾರದು.
* ಪೋಸ್ಟ್ ಆಫೀಸ್ನಲ್ಲಿ ಅಕೌಂಟ್ ಇದ್ದರೂ ಪರವಾಗಿಲ್ಲ. ಆದರೆ ಇದು ಲೋನ್ ಅಕೌಂಟ್ ಆಗಿರಬಾರದು
* ಬ್ಯಾಂಕ್ ಯಾವುದೇ ಆಗಿರಬಹುದು. ಆದರೆ ಕರ್ನಾಟಕದಲ್ಲಿ ಅದರ ಶಾಖೆ ಇರಲೇಬೇಕು
*ಪತಿಯ ಆಧಾರ್ ಕಾರ್ಡ್ ಮಾಹಿತಿ ನೀಡುವುದು ಕಡ್ಡಾಯ
* ಪತಿಯ ಉದ್ಯೋಗದ ಮಾಹಿತಿ ನೀಡಲೇಬೇಕು.
* ಎಸ್ಸಿ ಎಸ್ಟಿ ಆಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಕಡ್ಡಾಯ