ಬೆಂಗಳೂರಿಗೆ ಬಂದ ಹಲವು ಶಾಸಕರು 2 ಮದುವೆ ಆಗಿದ್ದಾರೆ; ಅಂಥವರ ಪಟ್ಟಿ ನನ್ನ ಬಳಿಯಿದೆ-ಸಿಎಂ ಡಿ.ಕೆ. ಶಿವಕುಮಾರ್

Published : Sep 25, 2026, 11:06 AM ISTUpdated : Sep 25, 2026, 11:19 AM IST
DK Shivakumar

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಾಸಕರ ವೈಯಕ್ತಿಕ ಬದುಕಿನ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ರಾಜ್ಯದ ವಿವಿಧ ಪ್ರದೇಶಗಳಿಂದ ಬೆಂಗಳೂರಿಗೆ ಬಂದ ಹಲವು ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಹಾಗೂ ತಮ್ಮ ಬಳಿ ಆ ಪಟ್ಟಿ ಇದೆ ಎಂದು ಹೇಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ.

ಬೆಂಗಳೂರು (ಸೆ.25): ಒಮ್ಮೆ ಬೆಂಗಳೂರಿಗೆ ಬಂದವರು ಯಾರೂ ವಾಪಸು ಹೋಗಲ್ಲ. ರಾಜ್ಯದ ಬಹುತೇಕ ಶಾಸಕರಿಗೆ ಬೆಂಗಳೂರಿನಲ್ಲಿ ಮನೆ ಇದೆ. ಹಲವು ಶಾಸಕರು ಬೆಂಗಳೂರಿಗೆ ಬಂದು ಎರಡೆರಡು ಮದುವೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತ ಚರ್ಚೆಗೆ ಉತ್ತರಿಸುತ್ತಾ ಡಿ.ಕೆ.ಶಿವಕುಮಾರ್‌ ಅವರು, ಶಾಸಕರ ವೈಯಕ್ತಿಕ ಬದುಕಿನ ಕುರಿತು ನೀಡಿದ ಹೇಳಿಕೆ ಕುತೂಹಲ ಕೆರಳಿಸಿತು.

ನಾನು ಹೇಳುತ್ತಿರುವುದು ಸತ್ಯ. ಬೆಂಗಳೂರಿಗೆ ಬಂದ ಶಾಸಕರೆಲ್ಲರೂ ಎರಡೆರಡು ಮದುವೆಯಾಗಿದ್ದಾರೆ. ನನ್ನ ಬಳಿ ಅಂತಹ ಡಜನ್‌ಗಟ್ಟಲೆ ಶಾಸಕರ ಸಂಪೂರ್ಣ ಲಿಸ್ಟ್ ಇದೆ. ಧಾರವಾಡ, ಕಾರವಾರ, ದಕ್ಷಿಣ ಕನ್ನಡ ಸೇರಿ ಎಲ್ಲಾ ಜಿಲ್ಲೆಗಳಿಂದ ಬಂದವರ ಇತಿಹಾಸವನ್ನೂ ನಾನು ಹೇಳಬಲ್ಲೆ. ಆದರೆ ಈಗ ಆ ಇತಿಹಾಸವನ್ನೆಲ್ಲ ಬಿಚ್ಚಿಡುವುದು ಬೇಡ ಎಂದು ತೆರೆ ಎಳೆದರು.

ಒಮ್ಮೆ ಬೆಂಗಳೂರಿಗೆ ಬಂದವರು ಯಾರೂ ವಾಪಸ್ ತಮ್ಮ ಊರುಗಳಿಗೆ ಹೋಗುವುದೇ ಇಲ್ಲ. ಇಲ್ಲಿನ ಕಾವೇರಿ ನೀರು ಹಾಗೂ ಇಲ್ಲಿನ ಹವಾಮಾನವೇ ಹಾಗಿದೆ. ಉದ್ಯೋಗ, ಶಿಕ್ಷಣಕ್ಕೆ ಬಂದವರು ಯಾರೂ ವಾಪಸು ಹೋಗಲ್ಲ. ನಾನು ಶಿಕ್ಷಣಕ್ಕೆ ಬಂದವನು ವಾಪಸು ಹೋಗಲು ಆಗಲಿಲ್ಲ. ರಾಜಕೀಯಕ್ಕಾಗಿ ಬೆಂಗಳೂರಿಗೆ ಬಂದ ಶಾಸಕರು ಕೂಡ ಆಮೇಲೆ ಈ ನಗರವನ್ನು ಬಿಟ್ಟು ಎಲ್ಲೂ ಹೋಗುತ್ತಿಲ್ಲ ಎಂದರು.

ಯಾವಾಗ ಅಧ್ಯಯನ ಮಾಡಿದಿರಿ-ಕಾಲೆಳೆದ ಶಾಸಕ:

ಇದಕ್ಕೆ ಬಿಜೆಪಿ ಸದಸ್ಯ ಬಿ.ಪಿ.ಹರೀಶ್, ನಾನು ಕೃಷಿಕ, ಉದ್ಯಮಿ, ರಾಜಕಾರಣಿ ಎಂದೆಲ್ಲಾ ಹೇಳುತ್ತಿರುತ್ತೀರಿ. ಇಷ್ಟು ಕರಾರುವಕ್ಕಾಗಿ ಶಾಸಕರು ಎರಡೆರಡು ಮದುವೆಯಾಗಿದೆ ಎನ್ನುತ್ತಿದ್ದೀರಿ. ಇದನ್ನೆಲ್ಲ ಯಾವಾಗ ಅಧ್ಯಯನ ಮಾಡಿದಿರಿ ಎಂದು ಕಾಲೆಳೆದರು. ಇದಕ್ಕೆ ಡಿ.ಕೆ.ಶಿವಕುಮಾರ್, ಅದನ್ನು ವೈಯಕ್ತಿಕವಾಗಿ ಮಾತನಾಡೋಣ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.

PREV
Read more Articles on
click me!

Recommended Stories

ಉಚಿತ ರೂಮ್, ಫ್ರೀ ಊಟ! ‘ಫೇಕ್ ರೂಮ್‌ಮೇಟ್’ಗಾಗಿ ಬೆಂಗಳೂರು ಯುವತಿಯ ಪೋಸ್ಟ್ ವೈರಲ್!
ಲಾಲ್‌ಬಾಗ್‌ ದ್ವಾರದಲ್ಲಿರುವ ನಂದಿನಿ ಮಳಿಗೆ ಹಿಂದಿನ ಅಸಲಿಯತ್ತೇನು? ಎನ್.ಆರ್.ರಮೇಶ್ ಹೇಳಿದ್ದೇನು?