ಫುಡ್ ಆರ್ಡರ್ ವಿಚಾರಕ್ಕೆ ಜಗಳ, ಡೆಲಿವರಿ ಬಾಯ್‌ಗೆ ಇರಿತ

Suvarna News   | Asianet News
Published : Mar 01, 2020, 07:41 AM IST
ಫುಡ್ ಆರ್ಡರ್ ವಿಚಾರಕ್ಕೆ ಜಗಳ, ಡೆಲಿವರಿ ಬಾಯ್‌ಗೆ ಇರಿತ

ಸಾರಾಂಶ

ಫುಡ್ ಡೆಲಿವರಿ ಬಾಯ್‌ಗೆ ಸ್ನೇಹಿತರೇ ಇರಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇಬ್ಬರು ಆ ರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  

ಬೆಂಗಳೂರು(ಮಾ.01): ಫುಡ್ ಡೆಲಿವರಿ ಬಾಯ್‌ಗೆ ಸ್ನೇಹಿತರೇ ಇರಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇಬ್ಬರು ಆ ರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಎಂ.ಎಸ್.ಪಾಳ್ಯ ನಿವಾಸಿ ಸುನೀಲ್ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ತುಮಕೂರು ಮೂಲದ ತೇಜಸ್ ಮತ್ತು ಪ್ರವೀಣ್‌ನನ್ನು ಬಂಧಿಸಲಾಗಿದೆ. ಎಂ.ಎಸ್.ಪಾಳ್ಯ ಮೂಲದ ಸುನೀಲ್, ಬಿಟಿಎಂ ಲೇಔಟ್‌ನ ಪೇಯಿಂಗ್ ಗೆಸ್ಟ್‌ನಲ್ಲಿ ನೆಲೆಸಿದ್ದು ಜೊಮ್ಯಾಟೋದಲ್ಲಿ ಫುಡ್ ಡಿಲಿವರಿ ಕೆಲಸ ಮಾಡಿಕೊಂಡಿದ್ದರು. ಫೆ.೨೮ರ ರಾತ್ರಿ ಸ್ನೇಹಿತರ ನಡುವೆ ಫುಡ್ ಆರ್ಡರ್ ಮಾಡುವ ವಿಚಾರಕ್ಕೆ ಗಲಾಟೆಯಾಗಿ
ದೆ. ಈ ವೇಳೆ ಆರೋಪಿಗಳು ಸುನೀಲ್‌ಗೆ ಚಾಕುವಿನಿಂದಇರಿದಿದ್ದಾರೆ.

ಗಾಯಕಿ ಸುಶ್ಮಿತಾ ಆತ್ಮಹತ್ಯೆ ಕೇಸ್: ಪತಿ ಸೇರಿ ಮೂವರ ಬಂಧನ

ಆರೋಪಿಗಳಿಂದ ತಪ್ಪಿಸಿಕೊಂಡು ಹೊರ ಬಂದಿದ್ದ ಗಾಯಾಳು ಬಿಟಿಎಂ ಲೇಔಟ್‌ನ ೧ನೇ ಕ್ರಾಸ್‌ನ ರಸ್ತೆ ಬದಿ ಬಿದ್ದಿದ್ದ. ನಸುಕಿನ ಜಾವ ಐದು ಗಂಟೆಯಲ್ಲಿ ಆತನ ಸ್ನೇಹಿತ ನಾಗರಾಜ್ ಎಂಬಾತ ಫುಡ್ ಡಿಲಿವರಿ ಮಾಡಿ ಪಿಜಿಗೆ ವಾಪಸ್ ಆಗುತ್ತಿದ್ದ ವೇಳೆ ರಸ್ತೆಯಲ್ಲಿ ಜನರು ಗುಂಪು ಸೇರಿದ್ದರು.

ಅದನ್ನು ಗಮನಿಸಿ ಅಲ್ಲಿಗೆ ಹೋಗಿ ನೋಡಿದಾಗ ಗಾಯಗೊಂಡು ಬಿದ್ದಿದ್ದ ವ್ಯಕ್ತಿ ಸ್ನೇಹಿತ ಸುನೀಲ್ ಎಂಬುದು ಗೊತ್ತಾಗಿದೆ. ಕೂಡಲೇ ಸ್ನೇಹಿತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನ ಸ್ಥಿತಿ ಗಂಭೀರವಾಗಿದೆ ಎಂದುಪೊಲೀಸರು ಹೇಳಿದ್ದಾರೆ.

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!