ವಿನಯ್ ಗುರೂಜಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಅನುಯಾಯಿಗಳಿಂದ ದೂರು

By Web Desk  |  First Published Jun 5, 2019, 3:07 PM IST

ಭೂತಾರಾಧನೆ ಮತ್ತು ನಾಗಾರಾಧನೆ ಕರಾವಳಿ ಜನರು ಆರಾಧಿಸುವ ಭಕ್ತಿಯ ಆಚರಣೆ. ಆದರೆ ಚಿಕ್ಕಮಗಳೂರು ಮೂಲದ ಅವಧೂತ ವಿನಯ್ ಗುರೂಜಿ, ನಾಗಾರಾಧನೆ ಮತ್ತು ಭೂತಾರಾಧನೆಯನ್ನು ಅವಹೇಳನಗೈದು ಮಾತನಾಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.  ಇದ್ರಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿನಯ್ ಗುರೂಜಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿವೆ.


ಚಿಕ್ಕಮಗಳೂರು, (ಜೂನ್.05):  ಸಾಮಾಜಿಕ ಜಾಲತಾಣದಲ್ಲಿ ಅವಧೂತ ವಿನಯ್ ಗುರೂಜಿ ವಿರುದ್ದ ಅವಹೇಳನಕಾರಿ ಪೋಸ್ಟ್ ಹಿನ್ನೆಲೆಯಲ್ಲಿ ಗೌರಿಗದ್ದೆಯ ದತ್ತಾಶ್ರಮದ ಅನುಯಾಯಿಗಳು ದೂರು ನೀಡಿದ್ದಾರೆ.

ಗೌರಿಗದ್ದೆಯ ದತ್ತಾಶ್ರಮದ ಅನುಯಾಯಿಗಳು ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡೆಗೆ ದೂರು ನೀಡಿದ್ದು, ವಿನಯ್ ಗುರೂಜಿ ವಿರುದ್ದ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ದ ಕ್ರಮಕ್ಕೆ ಅಗ್ರಹಿಸಿದ್ದಾರೆ.

Tap to resize

Latest Videos

ಕರಾವಳಿಯ ಜನತೆ ಬಹುವಾಗಿ ನಂಬುವ ಭೂತಾರಾಧನೆ, ನಾಗಮಂಡಲ ಮತ್ತು ನಾಗಾರಾಧನೆಯ ಬಗ್ಗೆ ಗೌರಿಗದ್ದೆ ಆಶ್ರಮದ ಶ್ರೀ ವಿನಯ್ ಗುರೂಜಿ ವಿವಾದಕಾರಿ ಹೇಳಿಕೆ ನೀಡಿದ್ದರು. ಇದ್ರಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿನಯ್ ಗುರೂಜಿ ವಿರುದ್ಧ ಆಕ್ರೋಶ ವ್ಯಕ್ತವಾಗಿವೆ.

ವಿನಯ್ ಗುರೂಜಿ ಹೇಳಿದ್ದೇನು..?
ಇತ್ತೀಚೆಗೆ ಕರಾವಳಿಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿನಯ್ ಗುರೂಜಿ, ಇನ್ನೊಬ್ಬರಿಗೆ ಅಡ್ಡ ಬೀಳಬೇಕಾದರೆ (ಕಾಲಿಗೆ ಬೀಳಬೇಕಾದರೆ) ಯಾಕೆ ಬೀಳಬೇಕು? ಅವನು ಏನು? ನಾನು ಏನು? ಎಂದು ಯೋಜನೆ ಮಾಡಿ. ಪೂಜೆ ಎಂದರೆ ಏನು? ಏಕೆ ಪೂಜೆ ಮಾಡಬೇಕು? ಅದರಿಂದ ಏನಾಗುತ್ತದೆ ಎಂದು ತಿಳಿದುಕೊಂಡು ಪೂಜೆ ಮಾಡಿ. 

ನಾಗಮಂಡಲಕ್ಕಾಗಿ ಕೆಲವರು 2- 3 ಕೋಟಿ ರೂ. ಖರ್ಚು ಮಾಡುತ್ತಾರೆ. ನಾಗಮಂಡಲಕ್ಕೆ ಮಾಡುವ ಕೋಟಿ ಕೋಟಿ ಖರ್ಚಿನಲ್ಲಿ ಒಳ್ಳೆಯ ರಸ್ತೆ ಮಾಡಬಹುದು ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು.

click me!