ಕೃಷ್ಣ ಪ್ರವಾಹ ಆತಂಕ : ಸೇತುವೆ ಮುಳುಗಡೆ

By Kannadaprabha News  |  First Published Sep 16, 2021, 7:49 AM IST
  •  ಕೃಷ್ಣಾನದಿಯಲ್ಲಿ ಪ್ರವಾಹ ಉಂಟಾಗಿದ್ದು ನಡುಗಡ್ಡೆ ಗ್ರಾಮಗಳ ಸಂಪರ್ಕಕ್ಕೆ ಆಸರೆಯಾಗಿದ್ದ ಶೀಲಹಳ್ಳಿ ಸೇತುವೆ ಮುಳಗಡೆ
  • ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ಬೆಳಗಿನ ಮಾಹಿತಿಯಂತೆ 90,000 ಕ್ಯೂಸೆಕ್‌ ಒಳಹರಿವು 

ಲಿಂಗಸುಗೂರು (ಸೆ.16):  ತಾಲೂಕಿನ ಕೃಷ್ಣಾನದಿಯಲ್ಲಿ ಪ್ರವಾಹ ಉಂಟಾಗಿದ್ದು ನಡುಗಡ್ಡೆ ಗ್ರಾಮಗಳ ಸಂಪರ್ಕಕ್ಕೆ ಆಸರೆಯಾಗಿದ್ದ ಶೀಲಹಳ್ಳಿ ಸೇತುವೆ ಮುಳಗಡೆಯಾಗಿದೆ.

ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ಬೆಳಗಿನ ಮಾಹಿತಿಯಂತೆ 90,000 ಕ್ಯೂಸೆಕ್‌ ಒಳಹರಿವು ಇದೆ. 1,30,700 ಕ್ಯೂಸೆಕ್‌ ನೀರು ನದಿಗೆ ಹರಿಬಿಡಲಾಗುತ್ತಿದೆ. ಇದರಿಂದ ನಡುಗಡ್ಡೆಯ ಹಂಚಿನಾಳ, ಯರಗೋಡಿ, ಯಳಗುಂದಿ ಹಾಗೂ ಕಡದರಗಡ್ಡಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಪರಿಣಾಮ ನಡುಗಡ್ಡೆಯ ಜನರು ಜಲದುರ್ಗದ ಸೇತುವೆಯಿಂದ ಸುತ್ತುಬಳಸಿ ಪರ ಊರುಗಳಿಗೆ ತೆರಳುವ ಸಂಕಷ್ಟಎದುರಾಗಿದೆ.

Tap to resize

Latest Videos

ಸೇತುವೆ ಇಲ್ಲದೆ ಪ್ರತಿದಿನ ಪರದಾಟ.. ಇನ್ನಾದರೂ ಮುಕ್ತಿ ಬೇಕು

ಕೃಷ್ಣಾನದಿಯಲ್ಲಿ ಪ್ರವಾಹ ಉಂಟಾಗಿದ್ದರಿಂದ ಜನರು ನದಿ ಪಾತ್ರದತ್ತ ಸುಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಶೀಲಹಳ್ಳಿ ಸೇತುವೆ ಮೇಲಿನ ಸಂಚಾರ ನಿರ್ಬಂಧಿಸಿ ಬ್ಯಾರೆಕೇಡ್‌ ಹಾಕಿ ಸಂಚಾರ ಬಂದ್‌ ಮಾಡಲಾಗಿದೆ.

click me!