ಲಾಟರಿ ಆಸೆ ತೋರಿಸಿ ಮಕ್ಕಳ ಕಿಡ್ನಾಪ್‌ ಯತ್ನ?

By Kannadaprabha NewsFirst Published Sep 16, 2021, 7:35 AM IST
Highlights
  • ‘ನಿಮಗೆ ಲಾಟರಿಯಲ್ಲಿ ಬಹುಮಾನ ಬಂದಿದೆ’ ಎಂದು ಮಕ್ಕಳಿಗೆ ಆಸೆ ತೋರಿಸಿ ಕಿಡ್ನ್ಯಾಪ್ ಯತ್ನ
  • ಅನುಮಾನಗೊಂಡು ಅವರನ್ನು ಮಕ್ಕಳು ಕದಿಯುವವರು ಎಂದು ಭಾವಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಕೋಲಾರದಲ್ಲಿ ನಡೆದಿದೆ

ಕೋಲಾರ (ಸೆ.16): ‘ನಿಮಗೆ ಲಾಟರಿಯಲ್ಲಿ ಬಹುಮಾನ ಬಂದಿದೆ’ ಎಂದು ಮಕ್ಕಳಿಗೆ ಆಸೆ ತೋರಿಸಿ ಕಾರಿನ ಬಳಿ ಕರೆಸಿಕೊಂಡು ಹೋಗಿದ್ದನ್ನು ನೋಡಿದ ಸಾರ್ವಜನಿಕರು ಅನುಮಾನಗೊಂಡು ಅವರನ್ನು ಮಕ್ಕಳು ಕದಿಯುವವರು ಎಂದು ಭಾವಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.

 ‘ನಿಮಗೆ ಲಾಟರಿಯಲ್ಲಿ ಫ್ಯಾನ್‌, ಲೈಟ್‌, ಕುಕ್ಕರ್‌, ಹಾಟ್‌ಬಾಕ್ಸ್‌ ಬಂದಿದೆ. ಕಾರಿನ ಬಳಿ ಬಂದು ತೆಗೆದುಕೊಂಡು ಹೋಗಿ’ ಎಂದು ಮಕ್ಕಳನ್ನು 5 ಮಂದಿಯು ಮಕ್ಕಳನ್ನು ಪುಸಲಾಯಿಸುತ್ತಿದ್ದರು. ಇದನ್ನು ನೋಡಿ ಅನುಮಾನಗೊಂಡ ಸಾರ್ವಜನಿಕರು ಅವರನ್ನು ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಇಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ. 

ವಿವಾಹಿತೆ ಕಿಡ್ನಾಪ್ ಮಾಡಿ ಲೈಂಗಿಕ ದೌರ್ಜನ್ಯ, ಧರ್ಮ ಬದಲಿಸಬೇಕಂತೆ!

ಮೂವರನ್ನು ಸ್ಥಳೀಯರು ಹಿಡಿದಿದ್ದಾರೆ. ಬಳಿಕ ಗಲ್‌ಪೇಟೆ ಪೊಲೀಸರಿಗೆ ಒಪ್ಪಿಸಲಾಗಿದೆ. ಲಾಟರಿ ವಸ್ತುಗಳು ಮತ್ತು ಓಮ್ನಿ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

click me!