ಆ.24ರಿಂದ ಬೀದರ್‌-ತಿರುಪತಿಗೆ ವಿಮಾನ ಸೇವೆ

By Kannadaprabha News  |  First Published Aug 19, 2023, 10:00 PM IST

ಸೋಮವಾರ ಮತ್ತು ಶುಕ್ರವಾರದಂದು 2 ದಿನಗಳು, ಬೀದರ್‌ನಿಂದ ಸಾಯಂಕಾಲ 05.30ಕ್ಕೆ ಹೊರಟು ಬೆಂಗಳೂರಿಗೆ ಸಾ. 6.45ಕ್ಕೆ ತಲುಪಿ, ಅಲ್ಲಿಂದ ರಾ. 7.10ಕ್ಕೆ ಬಿಟ್ಟು ರಾತ್ರಿ. 8 ಗಂಟೆಗೆ ತಿರುಪತಿ ತಲುಪುತ್ತದೆ. ನಂತರ ಅದೇ ದಿನ ರಾತ್ರಿ 8.25ಕ್ಕೆ ತಿರುಪತಿಯಿಂದ ಹೊರಟು ರಾತ್ರಿ 09.15ಕ್ಕೆ ಬೆಂಗಳೂರಿಗೆ ತಲುಪಲಿದೆ, ರಾತ್ರಿ ಬೆಂಗಳೂರಿನಲ್ಲಿಯೆ ವಿಮಾನ ಇರಲಿದೆ. ಮರುದಿನ ಮತ್ತೆ ಮಧ್ಯಾಹ್ನ ಎಂದಿನಂತೆ ಬೆಂಗಳೂರಿನಿಂದ ಬೀದರ್‌ಗೆ ವಿಮಾನ ಬರಲಿದೆ.


ಬೀದರ್‌(ಆ.19):  ತಿರುಪತಿಯ ಬಾಲಾಜಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗಲೆಂದು ವಾರದ ಐದು ದಿನ ಬೀದರ್‌ನಿಂದ ತಿರುಪತಿಗೆ ವಿಮಾನ ಸೇವೆ ಇದೇ 24ರಿಂದ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.

ಈ ಕುರಿತು ಪ್ರಕಟಣೆ ನೀಡಿ, ಸತತ ಪ್ರಯತ್ನದಿಂದ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಬೀದರ್‌ನಿಂದ ತಿರುಪತಿಗೆ ವಿಮಾನಯಾನ ಸೇವೆ ಪ್ರಾರಂಭಿಸುವಲ್ಲಿ ಯಶಸ್ವಿಯಾಗಿದ್ದೇನೆ. ಈ ವಿಮಾನವು ಬೀದರ್‌ನಿಂದ ಬೆಂಗಳೂರು ಪ್ರಯಾಣಿಸುವ ವಿಮಾನವನ್ನು ತಿರುಪತಿವರೆಗೆ ವಿಸ್ತರಿಸಿ, ನಮ್ಮಲ್ಲಿಯ ಜನರಿಗೆ ಅನುಕೂಲ ಮಾಡಿಕೊಡುವಂತೆ ನಾಗರಿಕ ವಿಮಾನಯಾನ ಸಚಿವಾಲಕ್ಕೆ ಮನವಿ ಮಾಡಿಕೊಂಡಿದ್ದೆ, ಅದರಂತೆ ನನ್ನ ಮನವಿ ಪುರಸ್ಕರಿಸಿ ವಾರದ ಐದು ದಿನಗಳು ತಿರುಪತಿಗೆ ಚಲಿಸಲಿದೆ. ಈ ವಿಮಾನಯಾನ ಸೇವೆ ಸೋಮವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಇರಲಿದೆ.

Latest Videos

undefined

ಬಸವಕಲ್ಯಾಣ: ನೂತನ ಅನುಭವ ಮಂಟಪ ಕಾಂಗ್ರೆಸ್‌ ಸರ್ಕಾರದ ಕೊಡುಗೆ: ಸಚಿವ ಖಂಡ್ರೆ

ವೇಳಾಪಟ್ಟಿ:

ಸೋಮವಾರ ಮತ್ತು ಶುಕ್ರವಾರದಂದು 2 ದಿನಗಳು, ಬೀದರ್‌ನಿಂದ ಸಾಯಂಕಾಲ 05.30ಕ್ಕೆ ಹೊರಟು ಬೆಂಗಳೂರಿಗೆ ಸಾ. 6.45ಕ್ಕೆ ತಲುಪಿ, ಅಲ್ಲಿಂದ ರಾ. 7.10ಕ್ಕೆ ಬಿಟ್ಟು ರಾತ್ರಿ. 8 ಗಂಟೆಗೆ ತಿರುಪತಿ ತಲುಪುತ್ತದೆ. ನಂತರ ಅದೇ ದಿನ ರಾತ್ರಿ 8.25ಕ್ಕೆ ತಿರುಪತಿಯಿಂದ ಹೊರಟು ರಾತ್ರಿ 09.15ಕ್ಕೆ ಬೆಂಗಳೂರಿಗೆ ತಲುಪಲಿದೆ, ರಾತ್ರಿ ಬೆಂಗಳೂರಿನಲ್ಲಿಯೆ ವಿಮಾನ ಇರಲಿದೆ. ಮರುದಿನ ಮತ್ತೆ ಮಧ್ಯಾಹ್ನ ಎಂದಿನಂತೆ ಬೆಂಗಳೂರಿನಿಂದ ಬೀದರ್‌ಗೆ ವಿಮಾನ ಬರಲಿದೆ.

ಉಳಿದ ಮೂರು ದಿನಗಳಾದ ಗುರುವಾರ, ಶನಿವಾರ ಮತ್ತು ಭಾನುವಾರ ಬೀದರ್‌ನಿಂದ ಸಾ. 4.50ಕ್ಕೆ ಬೀದರ್‌ನಿಂದ ಹೊರಟು, ಬೆಂಗಳೂರಿಗೆ ಸಾ. 6.05ಕ್ಕೆ ತಲುಪಿ, ಸಾ. 6.30ಕ್ಕೆ ಬೆಂಗಳೂರಿನಿಂದ ಹೊರಟು ತಿರುಪತಿಗೆ ರಾ. 7.20ಕ್ಕೆ ತಲುಪಲಿದೆ, ತಿರುಪತಿಯಿಂದ ಮತ್ತೆ ರಾತ್ರಿ 7.45ಕ್ಕೆ ಹೊರಟು ಬೆಂಗಳೂರಿಗೆ ರಾ. 8.35ಕ್ಕೆ ತಲುಪಲಿದೆ. ಮರುದಿನ ಮಧ್ಯಾಹ್ನ ಎಂದಿನಂತೆ ಬೆಂಗಳೂರಿನಿಂದ ಬೀದರ್‌ಗೆ ವಿಮಾನ ಬರಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಮಾಹಿತಿ ನೀಡಿದ್ದಾರೆ.

ಕ್ಷೇತ್ರದ ಬಹುದಿನಗಳ ಕನಸಾಗಿದ್ದ ಬೀದರ್‌ ವಿಮಾನಯಾನದ ಸೇವೆಗೆ ನಾನು ಸಂಸದನಾದ ಮೇಲೆ ನಿರಂತರವಾಗಿ 6 ವರ್ಷಗಳ ಕಾಲ ಪರಿಶ್ರಮಪಟ್ಟು, ಬೀದರ್‌ನಿಂದ ವಿಮಾನಯಾನ ಸೇವೆ ಪ್ರಾರಂಭಿಸುವಲ್ಲಿ ಇದ್ದ ಹಲವಾರು ಅಡೆತಡೆಗಳು ನಿವಾರಿಸಿಕೊಂಡು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಎಲ್ಲಾ ರೀತಿಯ ಸಮನ್ವಯ ಸಾಧಿಸಿ ವಿಮಾನಯಾನ ಸೇವೆ ಪ್ರಾರಂಭಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.

ಬಸವರಾಜ ಯತ್ನಾಳ್‌ ಹೇಳಿಕೆ ಅಸಂಬದ್ಧ, ನಾವು ಗಟ್ಟಿಯಾಗಿದ್ದೇವೆ: ಸಚಿವ ಈಶ್ವರ ಖಂಡ್ರೆ

ಕೆಲ ದಿನಗಳ ಹಿಂದಷ್ಟೇ 25 ಕೋಟಿ ಅನುದಾನದಲ್ಲಿ ಬೀದರ್‌ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು ಮತ್ತು ವಿಕಾರಾಬಾದ್‌ ಪರಳಿ ವಯಾ ಬೀದರ್‌ ಮಾರ್ಗಕ್ಕೆ 267 ಕಿ.ಮೀ. ಫೈನಲ್‌ ಲೋಕೇಷನ್‌ ಸರ್ವೆ ಮಾಡಲು ಆದೇಶಿಲಾಗಿದೆ. ಇದು ಸಹ ಮಂಜೂರಾತಿಯಾಗಲಿದೆ. ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ಸಂಸದನಾದ ನಂತರ ಐತಿಹಾಸಿಕ ಅಭಿವೃದ್ಧಿ ಕೆಲಸಗಳು ಕೈಗೊಂಡಿರುವೆ. ಜನತೆ ಈ ಎಲ್ಲಾ ಅಭಿವೃದ್ಧಿ ಕಾರ್ಯಗಳ ಅನುಕೂಲತೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ಬೀದರ್‌ನಿಂದ ತಿರುಪತಿಗೆ ವಿಮಾನಯಾನದ ಸೇವೆ ಆ.24 ಗುರುವಾರದಿಂದ ಪ್ರಾರಂಭವಾಗಲಿದೆ. ಬೀದರ್‌ ಲೋಕಸಭಾ ಕ್ಷೇತ್ರದ ಜನತೆಯೂ ಈ ವಿಮಾನಯಾನದ ಸೇವೆ ಪಡೆದುಕೊಳ್ಳಬೇಕೆಂದು ಜನರಲ್ಲಿ ಕೋರಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ, ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾಧಿತ್ಯಾ ಸಿಂಧಿಯಾ ಹಾಗೂ ಎಲ್ಲಾ ಅಧಿಕಾರಿಗಳಿಗೆ ಸಚಿವ ಭಗವಂತ ಖೂಬಾ ಧನ್ಯವಾದಗಳು ತಿಳಿಸಿದ್ದಾರೆ.

click me!