ದಟ್ಟ ಮಂಜು: ಹುಬ್ಬಳ್ಳೀಲಿ ಲ್ಯಾಂಡ್‌ ಆಗದೆ ಮಂಗ್ಳೂರಿಗೆ ಹೋದ ವಿಮಾನ

Kannadaprabha News   | Asianet News
Published : Apr 04, 2021, 01:49 PM IST
ದಟ್ಟ ಮಂಜು: ಹುಬ್ಬಳ್ಳೀಲಿ ಲ್ಯಾಂಡ್‌ ಆಗದೆ ಮಂಗ್ಳೂರಿಗೆ ಹೋದ ವಿಮಾನ

ಸಾರಾಂಶ

20 ನಿಮಿಷ ಆಗಸದಲ್ಲಿ ಸುತ್ತಿದ ವಿಮಾನ| 62 ಪ್ರಯಾಣಿಕರಿದ್ದ ಇಂಡಿಗೋ ವಿಮಾನ| ಅನಿವಾರ್ಯವಾಗಿ ಮಾರ್ಗ ಬದಲಿಸಿ ಮಂಗಳೂರಿನತ್ತ ವಿಮಾನ ಕೊಂಡೊಯ್ದ ಪೈಲಟ್‌| ಎರಡು ಗಂಟೆ ಬಳಿಕ ವಾತಾವರಣ ಸುಧಾರಿಸಿದಾಗ ಅಲ್ಲಿಂದ ಪುನಃ ಹುಬ್ಬಳ್ಳಿಗೆ ವಾಪಸಾದ ವಿಮಾನ| 

ಹುಬ್ಬಳ್ಳಿ(ಏ.04): ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ವಿಮಾನ ದಟ್ಟವಾದ ಮಂಜು ಮುಸುಕಿನ ವಾತಾವರಣದ ಕಾರಣ ಲ್ಯಾಂಡ್‌ ಆಗದೆ ಮಂಗಳೂರಿಗೆ ತೆರಳಿದ ಘಟನೆ ಶನಿವಾರ ನಡೆದಿದೆ.

62 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ಬೆಳಗ್ಗೆ 7.20ಕ್ಕೆ ಹುಬ್ಬಳ್ಳಿಗೆ ಬಂದಾಗ ದಟ್ಟ ಮಂಜಿನ ಕಾರಣ ಲ್ಯಾಂಡಿಂಗ್‌ ಆಗದೆ ಆಗಸದಲ್ಲಿ 20 ನಿಮಿಷ ಸುತ್ತಾಡಿತು. ಇದು ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಕೊನೆಗೂ ರನ್‌ವೇ ಸ್ಪಷ್ಟವಾಗಿ ಕಾಣಲು ಸಾಧ್ಯವಾಗಲಿಲ್ಲ. ಅಲ್ಲದೆ ವಿಮಾನ ನಿಲ್ದಾಣದಿಂದ ಎಟಿಎಸ್‌ ಸಿಗ್ನಲ್‌ ಸಿಗಲಿಲ್ಲ. ಹೀಗಾಗಿ ಪೈಲಟ್‌ ಅನಿವಾರ್ಯವಾಗಿ ಮಾರ್ಗ ಬದಲಿಸಿ ಮಂಗಳೂರಿನತ್ತ ವಿಮಾನವನ್ನು ಕೊಂಡೊಯ್ದರು. 

ಹುಬ್ಬಳ್ಳಿ ಏರ್‌ಪೋರ್ಟ್‌ ಬಳಿಯೆ ಹೆಲಿಪೋರ್ಟ್‌!

ಎರಡು ಗಂಟೆ ಬಳಿಕ ವಾತಾವರಣ ಸುಧಾರಿಸಿದಾಗ ಅಲ್ಲಿಂದ ಪುನಃ ಹುಬ್ಬಳ್ಳಿಗೆ ವಾಪಸಾಗಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ್‌ ಕುಮಾರ್‌ ಠಾಕ್ರೆ ತಿಳಿಸಿದ್ದಾರೆ.
 

PREV
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು