ಯಲ್ಲಾಪುರ: ಅಕ್ರಮವಾಗಿ ಜಾನುವಾರು ಸಾಗಣೆ, ಐವರ ಬಂಧನ

Kannadaprabha News   | Asianet News
Published : Nov 02, 2020, 03:34 PM IST
ಯಲ್ಲಾಪುರ: ಅಕ್ರಮವಾಗಿ ಜಾನುವಾರು ಸಾಗಣೆ, ಐವರ ಬಂಧನ

ಸಾರಾಂಶ

ಅಕ್ರಮವಾಗಿ ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ ಜಾನುವಾರು| ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಜೋಡುಕೆರೆ ಬಳಿ ನಡೆದ ಘಟನೆ| ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲು|   

ಯಲ್ಲಾಪುರ(ನ.02): ಯಾವುದೇ ಪರವಾನಗಿ ಇಲ್ಲದೇ, ಅಕ್ರಮವಾಗಿ ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ 9 ಜಾನುವಾರುಗಳನ್ನು ಭಾನುವಾರ ಪಟ್ಟಣದ ಜೋಡುಕೆರೆ ಬಳಿ ಪೊಲೀಸರು ರಕ್ಷಿಸಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರಿನ ಮಹಮ್ಮದ್‌ ಹುಸೇನ್‌ ಮೊವಾರಿ ಅಬ್ಬಾ, ಸಾದಿಕ್‌ ಇದಿನಬ್ಬಾ, ಬಾತೀಶ ಅಬ್ದುಲ್‌ ರಜಾಕ್‌, ಮಹಮ್ಮದ್‌ ಅರಫಾತ್‌ ಅಬ್ದುಲ್‌ ಖಾದರ್‌ ಹಾಗೂ ಮಹಮ್ಮದ್‌ ಹನೀಫ್‌ ಗುಡೆಮನೆ ಖಾದರಸಾಬ್‌ ಎಂದು ಗುರುತಿಸಲಾಗಿದೆ. 

ಕಸಾಯಿಖಾನೆಗೆ ಹಸುಗಳ ಸಾಗಾಟ: ಆಹಾರವಿಲ್ಲದೆ ಲಾರಿಯಲ್ಲೇ ಸತ್ತ ಎಮ್ಮೆಗಳು..!

ಇವರು ಬಲಿ ಕೊಡುವ ಉದ್ದೇಶದಿಂದ ರಾಣಿಬೆನ್ನೂರಿನಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಏಳು ಎತ್ತುಗಳು ಹಾಗೂ ಎರಡು ಎಮ್ಮೆಗಳನ್ನು ಹಿಂಸಾತ್ಮಕವಾಗಿ ತುಂಬಿಕೊಂಡು, ನೀರು, ಆಹಾರ ನೀಡದೇ ಸಾಗಿಸುತ್ತಿದ್ದ ವೇಳೆ ಪಟ್ಟಣದ ಜೋಡುಕೆರೆ ಬಳಿ ಪೊಲೀಸರು ತಪಾಸಣೆ ನಡೆಸಿದಾಗ ಸಿಕ್ಕಿ ಬಿದ್ದಿದ್ದಾರೆ. ಲಾರಿಯಲ್ಲಿ ಹಿಂಸಾತ್ಮಕವಾಗಿ ತುಂಬಿದ ಪರಿಣಾಮ ಒಂದು ಎತ್ತು ಮೃತಪಟ್ಟಿದೆ. ಈ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

PREV
click me!

Recommended Stories

ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!
ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!