ಧಾರವಾಡ ಬಳಿ ಭೀಕರ ಅಪಘಾತ: ಸ್ಥಳದಲ್ಲೇ ಐವರ ದುರ್ಮರಣ

By Girish Goudar  |  First Published Feb 23, 2023, 10:30 PM IST

ಧಾರವಾಡ ತಾಲೂಕಿನ‌ ತೇಗೂರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದ ಘಟನೆ. 


ಧಾರವಾಡ(ಫೆ.23):  ಲಾರಿಗೆ ಹಿಂಬದಿಯಿಂದ ಕಾರು ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಐವರು ಸಾವನ್ನಪ್ಪಿ ಮೂವರಿಗೆ ಗಾಯಗಳಾದ ಘಟನೆ ಧಾರವಾಡ ತಾಲೂಕಿನ‌ ತೇಗೂರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇಂದು(ಗುರುವಾರ) ನಡೆದಿದೆ.  ಮೃತರನ್ನ ನಾಗರಾಜ ಈರಪ್ಪ ಮೂದೋಜಿ(26), ಮಹಾಂತೇಶ ಬಸಪ್ಪ ಮೂದೋಜಿ(46), ನಿಚ್ಚಣ್ಣಕಿ ಗ್ರಾಮದ ಬಸವರಾಜ ನರಗುಂದ (36), ಶ್ರವಣ ಬಸವರಾಜ ನರಗುಂದ (5) ಈರಣ್ಣ ರಾಮಗೌಡರ ಪಾದಾಚಾರಿ ಅಂತ ಗುರುತಿಸಲಾಗಿದೆ.  

ಲಾರಿಗೆ ಹಿಂಬದಿಯಿಂದ ಕಾರು ಗುದ್ದಿದ ಪರಿಣಾಮ ಕಾರನಲ್ಲಿದ್ದ ನಾಲ್ವರ ಸಾವನ್ನಪ್ಪಿದ್ದು ಪಕ್ಕದಲ್ಲಿ ಹೊರಟಿದ್ದ ಓರ್ವ ಪಾದಚಾರಿಗೂ ಕಾರು ತಾಗಿದ ಪರಿಣಾಮ ಅವನೂ ಸಹ ಮೃತಪಟ್ಟಿದ್ದಾನೆ. 
ಕಾರು ಬೆಳಗಾವಿಯಿಂದ ಧಾರವಾಡ ಕಡೆ ಬರುತ್ತಿತ್ತು ಅಂತ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನ ಧಾರವಾಡದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. 
ಮೃತರು ಬೆಳಾಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದವರು ಅಂತ ತಿಳಿದು ಬಂದಿದೆ. ಆರ್ಮಿ ಸೇರುವ ಯುವಕ ಮಂಜುನಾಥ ಮುದ್ಸೋಜಿಯನ್ನ ರೇಲ್ವೆ ಸ್ಟೆಷನ್ ಬಿಡಲು ಕುಟುಂಬಸ್ಥರು ಹೋಗುತ್ತಿದ್ದರು ಅಂತ ತಿಳಿದು ಬಂದಿದೆ. 

Tap to resize

Latest Videos

ಬಸವನಬಾಗೇವಾಡಿ: ಲಾರಿ-ಬೈಕ್‌ ಡಿಕ್ಕಿ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು

ಓರ್ವ ಪಾದಾಚಾರಿಯನ್ನ ತಪ್ಪಿಸಲು ಹೋಗಿ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಐದು ಜನರ ಸಾವನ್ನಪ್ಪಿದ್ದಾರೆ. 

click me!