ಸಾಗರ ಮಾಲ ವಿರೋಧಿಸಿ ಬೃಹತ್ : ಮೀನುಗಾರರು ಅಸ್ವಸ್ಥ

Kannadaprabha News   | Asianet News
Published : Jan 14, 2020, 09:32 AM IST
ಸಾಗರ ಮಾಲ ವಿರೋಧಿಸಿ ಬೃಹತ್ : ಮೀನುಗಾರರು ಅಸ್ವಸ್ಥ

ಸಾರಾಂಶ

ಕಾರವಾರದಲ್ಲಿ ಆರಂಭವಾದ ಸಾಗರ ಮಾಲ ಯೋಜನೆಯನ್ನು ವಿರೋಧಿಸಿ ಮೀನುಗಾರರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಲವು ಮೀನುಗಾರರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತು. 

ಕಾರವಾರ [ಜ.14]: ‘ಸಾಗರಮಾಲಾ’ ಯೋಜನೆ ವಿರೋಧಿಸಿ ಕಾರವಾರದಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ಈ ವೇಳೆ ಸಮುದ್ರಕ್ಕಿಳಿದು ಹೋರಾಟ ನಡೆಸುವ ವೇಳೆ ಮೂವರು ಅಸ್ವಸ್ಥಗೊಂಡಿದ್ದಾರೆ.

‘ಸಾಗರಮಾಲಾ’ ಯೋಜನೆಯಡಿ ಇಲ್ಲಿನ ಬಂದರು ವಿಸ್ತರಣೆ ಕಾಮಗಾರಿಗೆ ಸೋಮವಾರ ಬೆಳಗ್ಗೆ ಚಾಲನೆ ದೊರೆಯುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ ನೂರಾರು ಮೀನು ಗಾರರು ಏಕಾಏಕಿ ಪ್ರತಿಭಟನೆಗಿಳಿ ದರು. 

ಈ ವೇಳೆ ಕೆಲವರು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಲು ಮುಂದಾಗು ತ್ತಿದ್ದಂತೆ 80 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದರು. ಈ ವೇಳೆ ಕೆಲವರು ಸಮುದ್ರಕ್ಕಿಳಿದು ಪ್ರತಿಭಟನೆ ಆರಂಭಿಸಿದರು. ಈ ವೇಳೆ ಮೂವರು ಅಸ್ವಸ್ಥಗೊಂಡರು.

ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ...

ಅಸ್ವಸ್ಥಗೊಂಡ ಮೀನುಗಾರರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಕಳೆದ ಕೆಲ ದಿನಗಳ ಹಿಂದಷ್ಟೇ ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉತ್ತರ ಕನ್ನಡಕ್ಕೆ ಆಗಮಿಸಿದ್ದು, ಈ ವೇಳೆಯೂ ಸಾಗರ ಮಾಲಾ ಯೋಜನೆಗೆ ವಿರೋಧಿಸಿ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿದ್ದರು.

PREV
click me!

Recommended Stories

ಮಳೆಗಾಗಿ ಕಾಯುವ ದಿನ ಮುಗಿದಿದೆ.. ಹವಾಮಾನ ಇಲಾಖೆಯಿಂದ ಬಿಗ್ ಅಪ್‌ಡೇಟ್ಸ್
ಆರೋಗ್ಯ ಸಚಿವ ಯುಟಿ ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ, ಗಂಭೀರವಾಗಿ ಗಾಯಗೊಂಡ ರೈಡರ್