ಉಡುಪಿ: ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಮೀನುಗಾರರ ಯತ್ನ

By Girish Goudar  |  First Published Dec 3, 2022, 2:37 PM IST

ಐದು ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟು ಪ್ರತಿಭಟನೆ ನಡೆಸಿದ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು 


ಉಡುಪಿ(ಡಿ.03):  ಕಳೆದ ಮೂರು ತಿಂಗಳಿಂದ ಸೀಮೆಎಣ್ಣೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ಸುಮಾರು 5000 ಮೀನುಗಾರರು ನಗರದ ಡಿಸಿ ಕಚೇರಿಗೆ ಮುತ್ತಿಗೆ ಹಾಕುಲು ಯತ್ನಿಸಿದ ಘಟನೆ ಇಂದು(ಶನಿವಾರ) ನಡೆದಿದೆ. 

ನಾಡದೋಣಿ ಮೀನುಗಾರರ ಒಕ್ಕೂಟ ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಐದು ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟು ಪ್ರತಿಭಟನೆ ನಡೆಸಿದೆ. 

Tap to resize

Latest Videos

undefined

ಉಡುಪಿ: ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ರೂ ಸಹಾಯಕ್ಕೆ ಬಾರದ ಜನ..!

ನಾಡ ದೋಣಿಗಳ ಮೋಟಾರೀಕರಣಕ್ಕೆ ಸಹಾಯಧನಕ್ಕಾಗಿ ಮೀನುಗಾರರ ಒಕ್ಕೂಟ ಒತ್ತಾಯಿಸಿದೆ. ನೆರೆಯಿಂದ ನಷ್ಟವಾದ ದೋಣಿಗಳಿಗೆ ಗರಿಷ್ಠ ಪರಿಹಾರ, ನಾಡದೋಣಿ ಮೀನುಗಾರರ ಅಭಿವೃದ್ಧಿಗೆ 250 ಕೋಟಿ ರುಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಮೀನುಗಾರರು. 

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರಿಂದ ಪ್ರತಿಭಟನಾಕರರನ್ನ ಗೇಟ್ ಮುಂದೆಯೇ ಪೊಲೀಸರು ತಡೆದಿದ್ದಾರೆ. ಇದೇ ವೇಳೆ ಮೀನುಗಾರರ ಮನವಿಯನ್ನ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಅವರು ಸ್ವೀಕರಿಸಿದ್ದಾರೆ. 
 

click me!