ವಿಜಯಪುರ: ಪ್ರಾಣದ ಹಂಗು ತೊರೆದು ರಾಷ್ಟ್ರ ಪಕ್ಷಿಯ ಜೀವ ಉಳಿಸಿದ ಅಗ್ನಿಶಾಮಕ ಸಿಬ್ಬಂದಿ...!

By Suvarna News  |  First Published Apr 29, 2022, 8:12 PM IST

• 40 ಅಡಿ ಆಳದ ಬಾವಿಗೆ ಬಿದ್ದು 3 ದಿನ ನರಳಿದ ರಾಷ್ಟ್ರಪಕ್ಷಿ..!
• ಹಗ್ಗಕಟ್ಟಿಕೊಂಡು ಬಾವಿಗೆ ಇಳಿದು ನವಿಲಿನ ಪ್ರಾಣ ರಕ್ಷಣೆ..!
• ರಾಷ್ಟ್ರಪಕ್ಷಿಯ ಪ್ರಾಣ ರಕ್ಷಣೆಗೆ ಜೀವ ಒತ್ತೆಇಟ್ಟ ಅಗ್ನಿಶಾಮಕ ಸಿಬ್ಬಂದಿ..!


ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಏ.29) : ನ
ವಿಲು‌ ನಮ್ಮ ರಾಷ್ಟ್ರಪಕ್ಷಿ. ನವಿಲು ಬೇಟೆ, ನವಿಲಿನ ಪ್ರಾಣಕ್ಕೆ ಹಾನಿ ಉಂಟು ಮಾಡೋದು ಅಪರಾಧ. ನವಿಲಿನ ಪ್ರಾಣಕ್ಕೆ ಹಾನಿ ಮಾಡಿದಲ್ಲಿ ದಂಡ ಸಹಿತ ಜೈಲುವಾಸದ ಶಿಕ್ಷೆ ಕೂಡ ಇದೆ. ಹಾಗೇ ರಾಷ್ಟ್ರಪಕ್ಷಿ ನವಿಲು ಪ್ರಾಣಾಪಾಯದಲ್ಲಿದ್ದಾಗ ಅದರ ರಕ್ಷಣೆ ಕೂಡ ನಮ್ಮೆಲ್ಲರ ಹೊಣೆಯಾಗಿದೆ.. ವಿಜಯಪುರ ಜಿಲ್ಲೆಯಲ್ಲಿ ಆಳದ ಬಾವಿಗೆ ಬಿದ್ದು ಪ್ರಾಣಾಪಾಯದಲ್ಲಿದ್ದ ರಾಷ್ಟ್ರಪಕ್ಷಿಯನ್ನ ರಕ್ಷಿಸಲಾಗಿದೆ..

40 ಅಡಿ ಆಳದ ಬಾವಿಗೆ ಬಿದ್ದಿದ್ದ ರಾಷ್ಟ್ರಪಕ್ಷಿ..!

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಹೊರವಲಯದ 40 ಅಡಿ ಆಳದ ಬಾವಿಯಲ್ಲಿ ನವಿಲು ಬಿದ್ದಿದೆ. ಆದ್ರೆ ಬಾವಿ ವಿಪರೀತ ಆಳವಿದ್ದ ಕಾರಣ ನವಿಲಿಗೆ ಮೇಲೆ ಬರೋಕೆ ಆಗಿಲ್ಲ. ಮುಖ್ಯವಾಗಿ ಬಾವಿಗೆ ಮೆಟ್ಟಿಲು ಸಹ ಇಲ್ಲದೆ ಇರೋದು, ಹಾಗೂ ಅತಿಯಾದ ಆಳವಿದ್ದ ಕಾರಣ ನವಿಲಿಗೆ ಮೇಲೆ ಬರೋಕೆ ಆಗಿಲ್ಲ ಎನ್ನಲಾಗಿದೆ..

Latest Videos

undefined

Zero Shadow Day Karnataka: ಈ ದಿನದಂದು ನಿಮ್ಮ ಜಿಲ್ಲೆಯಲ್ಲಿ ನೆರಳೇ ಕಾಣಿಸಲ್ಲ: ಏನಿದರ ಮರ್ಮ?

3 ದಿನಗಳ ಕಾಲ ನವಿಲಿನ ಆಕ್ರಂದನ..!
ನವಿಲು ಬಾವಿಗೆ ಬಿದ್ದು ಮೂರು ದಿನಗಳೆ ಕಳೆದಿವೆ. ನವಿಲು ಬಿದ್ದ ಮರುದಿನ ಸ್ಥಳೀಯರು, ಜಮೀನು ಮಾಲಿಕರು ನೋಡಿದ್ದಾರೆ. ನವಿಲು ರಕ್ಷಣೆಗೆ ಪ್ರಯತ್ನ ನಡೆಸಿದ್ದಾರೆ. ಆದ್ರೆ ಬಾವಿ 40 ಅಡಿಗಳ ಆಳ ಹಾಗೂ ಮೆಟ್ಟಿಲುಗಳು ಇಲ್ಲದೆ ಇರೋದ್ರಿಂದ ರಕ್ಷಣೆ ಸಾಧ್ಯವಾಗಿಲ್ಲ.‌ ಹೀಗಾಗಿ ಮೂರು ದಿನಗಳ ಕಾಲ ನವಿಲು ಬಾವಿಯಲ್ಲೆ ನರಳಾಡಿದೆ.. 

ಚಪ್ಪಡಿ ಮೇಲೆ ಕುಳಿತು ಪ್ರಾಣ ಉಳಿಸಿಕೊಂಡ ನವಿಲು.!
ಬಾವಿ ಆಳದ ಜೊತೆಗೆ ನೀರು ಸಹ ಸಾಕಷ್ಟು ಸಂಗ್ರಹಣೆಯಾಗಿತ್ತು. ಮೇಲೆ ಹಾರೋಕೆ ಪ್ರಯತ್ನ ಪಟ್ಟರು ನವಿಲು ಹಲವು ಬಾರಿ ನೀರಿಗೆ ಬಿದ್ದಿತ್ತು.. ಸ್ಥಳೀಯರು ನಡೆಸಿದ ಪ್ರಯತ್ನ ವಿಫಲವಾದ ಮೇಲೆ ನವಿಲು ಉಳಿಯೋದು ಡೌಟು ಎಂದು ಸ್ಥಳೀಯರು ಭಾವಿಸಿದ್ದಾರೆ. ಆದ್ರೆ ನವಿಲು ಬಾವಿಯಲ್ಲಿದ್ದ ಚಪ್ಪಡಿಯ ಮೇಲೆ ಕುಳಿತು ಬದುಕುಳಿದಿದೆ. ಚಪ್ಪಡಿ ಕಲ್ಲು ರಾಷ್ಟ್ರಪಕ್ಷಿಗೆ ಪ್ರಾಣ ಉಳಿಸಿಕೊಳ್ಳಲು ಸಹಾಯ ಮಾಡಿದೆ.

ಪೀಲ್ಡಿಗಿಳಿದ ಅಗ್ನಿ ಶಾಮಕ ತಂಡ..!

ಎರೆಡು ದಿನ ಸ್ಥಳೀಯರು ಎಷ್ಟೇ ಪ್ರಯತ್ನಿಸಿದ್ರು ನವಿಲಿನ ರಕ್ಷಣೆ ಸಾಧ್ಯವಾಗಲಿಲ್ಲ. ಬಳಿಕ‌ ಕೊನೆಗೆ ಸ್ಥಳೀಯರು ನವಿಲು ಬಾವಿಗೆ ಬಿದ್ದು, ಪ್ರಾಣಾಪಾಯದಲ್ಲಿರೋ ವಿಚಾರವನ್ನ ಸಿಂದಗಿ ಅಗ್ನಿ ಶಾಮಕ ಕಚೇರಿಗೆ ಮುಟ್ಟಿಸಿದ್ದಾರೆ.‌ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ನವಿಲು ರಕ್ಷಣಾ ಕಾರ್ಯಾಚರಣೆ ಕೈಗೊಂಡು ಯಶಸ್ವಿಯಾಗಿದ್ದಾರೆ..

ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಕ್ಕೆ ಅಭಿನಂದಿಸಿದ ಗ್ರಾಮಸ್ಥರು..!

40 ಅಡಿ ಆಳದ‌ ಬಾವಿಗೆ ಅಗ್ನಿಶಾಮಕ ಸಿಬ್ಬಂದಿ ಶಾಂತಪ್ಪ ಬಿರಾದಾರ್ ಹಗ್ಗ ಕಟ್ಟಿಕೊಂಡು ಇಳಿದು ನವಿಲು ರಕ್ಷಣೆ ಮಾಡಿದ್ದಾರೆ. ಆಳದ ಬಾವಿಗೆ ಇಳಿಯುವಾಗ ತಮ್ಮ‌ ಪ್ರಾಣವನ್ನ ಲೆಕ್ಕಿಸದೆ ಶಾಂತಪ್ಪ‌ ರಾಷ್ಟ್ರಪಕ್ಷಿಯ ಜೀವ ಉಳಿಸಿದ್ದಾರೆ. ಸಿಬ್ಬಂದಿಗಳಾದ ಸುರೇಶ್ ವೇದಪಾಠಕ್, ಸಿದರಾಯ್ ಪಾರ್ಥನಳ್ಳಿ, ಕಲ್ಯಾಣಕುಮಾರ್ ಭಜಂತ್ರಿ, ಶರಣಬಸು ಬಾಗೇವಾಡಿ ಕಾರ್ಯಾಚರಣೆಗೆ ಸಾತ್ ನೀಡಿದ್ದರು..

click me!