ತುಮಕೂರು: ಮದುಮಗ ಬಂದಿದ್ದ ಜಾಗ್ವಾರ್‌ ಕಾರು ಬೆಂಕಿಗೆ ಆಹುತಿ

Published : Nov 10, 2023, 11:31 AM IST
ತುಮಕೂರು: ಮದುಮಗ ಬಂದಿದ್ದ ಜಾಗ್ವಾರ್‌ ಕಾರು ಬೆಂಕಿಗೆ ಆಹುತಿ

ಸಾರಾಂಶ

ಬೆಂಗಳೂರು ಮೂಲದ ರಾಜಕುಮಾರ್ ಎಂಬುವರಿಗೆ ಸೇರಿದ ಕಾರು ಎಂದು ತಿಳಿದು ಬಂದಿದೆ. ಕಾರು ನಿಲ್ಲಿಸಿ ಕಲ್ಯಾಣ ಮಂಟಪಕ್ಕೆ ತೆರಳಿದ್ದಾಗ ಕಾರಿನ ಎಂಜಿನ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಬೆಂಕಿ ಕಾಣಿಸಿಕೊಂಡಿದೆ. 

ಕುಣಿಗಲ್(ನ.10): ತುಮಕೂರು ಜಿಲ್ಲೆ ಕುಣಿಗಲ್‌ನ ನಕ್ಷತ್ರ ಪ್ಯಾಲೇಸ್ ಕಲ್ಯಾಣ ಮಂಟಪದ ಬಳಿ ಗುರುವಾರ ಮದುಮಗ ಬಂದಿದ್ದ ಕೋಟ್ಯಂತರ ರೂ.ಮೌಲ್ಯದ ಜಾಗ್ವಾರ್‌ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಭಾಗಶ: ಸುಟ್ಟು ಹೋಗಿದೆ.

ಇದು ಬೆಂಗಳೂರು ಮೂಲದ ರಾಜಕುಮಾರ್ ಎಂಬುವರಿಗೆ ಸೇರಿದ ಕಾರು ಎಂದು ತಿಳಿದು ಬಂದಿದೆ. ಕಾರು ನಿಲ್ಲಿಸಿ ಕಲ್ಯಾಣ ಮಂಟಪಕ್ಕೆ ತೆರಳಿದ್ದಾಗ ಕಾರಿನ ಎಂಜಿನ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಬೆಂಕಿ ಕಾಣಿಸಿಕೊಂಡಿದೆ. 

ಯಾದಗಿರಿ: ಸ್ಟೀಯರಿಂಗ್‌ ಕಿತ್ತು ಹಳ್ಳಕ್ಕೆ ಬಿದ್ದ ಸಾರಿಗೆ ಸಂಸ್ಥೆ ಬಸ್‌, ತಪ್ಪಿದ ಭಾರೀ ದುರಂತ

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಕಾರಿನಲ್ಲಿ ಒಡವೆ, ಹಣ, ದಾಖಲೆ ಪತ್ರಗಳು ಇದ್ದ ಕಾರಣ ಗಾಜನ್ನು ಒಡೆದು ಅವುಗಳನ್ನು ಹೊರತೆಗೆಯಲಾಯಿತು.

PREV
Read more Articles on
click me!

Recommended Stories

New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!
'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ