ಏಕಾ ಏಕಿ ತಪಾಸಣೆ ಮಾಡುತ್ತಿದ್ದ ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ವ್ಯಕ್ತಿಯೋರ್ವ ದಾಳಿ ಮಾಡಿದ್ದು ತಕ್ಷಣವೇ ಆತನನ್ನು ಅರೆಸ್ಟ್ ಮಾಡಲಾಗಿದೆ. ವಿಟ್ಲದ ಚೆಕ್ ಪೋಸ್ಟ್ ಒಂದರ ಬಳಿ ಈ ಘಟನ ನಡೆದಿದೆ.
ಬಂಟ್ವಾಳ (ಮಾ.26): ಕರ್ತವ್ಯದಲ್ಲಿದ್ದ ಎಸ್.ಐ.ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲು ಯತ್ನಿಸಿದ್ದು, ಆತನನ್ನು ಪೊಲೀಸರು ಅರೆಸ್ಟ್ ಮಾಡಿದ ಘಟನೆ ವಿಟ್ಲ ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.
ಇಂದು ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ಎಸ್ ಐ ವಿನೋದ್ ರೆಡ್ಡಿ ಮೇಲೆ ದುಷ್ಕರ್ಮಿಯೋರ್ವ ಏಕಾಏಕಿ ಗುಂಡು ಹಾರಿಸಿದ್ದಾನೆ. ಎಸ್.ಐ.ವಿನೋದ್ ರೆಡ್ಡಿ ಮತ್ತು ಸಿಬ್ಬಂದಿಗಳು ವಾಹನ ಗಳ ತಪಾಸಣೆ ನಡೆಸುತ್ತಿದ್ದ ವೇಳೆ ಬಿಳಿ ಬಣ್ಣದ ಕಾರಿನಲ್ಲಿದ್ದ ದುಷ್ಕರ್ಮಿ ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿ ದ್ದಾನೆ.
undefined
'ಹಿಂದೂಸ್ತಾನ್ ಜಿಂದಾಬಾದ್; ಪಾಕಿಸ್ತಾನ್ ಮುರ್ದಾಬಾದ್' ಘೋಷಣೆ ಕೂಗು ಎಂದು ಹಲ್ಲೆ ...
ಘಟನೆಯಲ್ಲಿ ಎಸ್.ಐ.ವಿನೋದ್ ರೆಡ್ಡಿ ಅವರು ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಗುಂಡು ಹಾರಿಸಿದ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಈತ ಏಕಾಏಕಿ ಎಸ್‌ಐ ಮೇಲೆ ಗುಂಡಿನ ದಾಳಿ ನಡೆಸಲು ಕಾರಣವೇನು ಎನ್ನುವುದು ಇನ್ನಾದರೂ ತಿಳಿದುಬಂದಿಲ್ಲ.
ಈತನ ವಿಚಾರಣೆ ಮುಗಿದ ಬಳಿಕವಷ್ಟೇ ಈ ಕೃತ್ಯಕ್ಕೆ ಕಾರಣವೇನೆಂಬುದು ಬೆಳಕಿಗೆ ಬರಬೇಕಿದೆ.