ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನೌಕಾನೆಲೆಯ ಎನ್‌ಸಿಸಿ ಗುತ್ತಿಗೆ ಕಂಪೆನಿ ಕಾರ್ಮಿಕರ ಶೆಡ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಅಡುಗೆಯ ಸಿಲಿಂಡರ್ ಸಿಡಿದ ಪರಿಣಾಮ ಬೆಂಕಿ ಹೊತ್ತಿಕೊಂಡಿ ಎಂದು ತಿಳಿದು ಬಂದಿದೆ. ಒಂದು ಸಾಲಿನ ನಾಲ್ಕೈದು ಶೆಡ್‌ಗಳಿಗೆ ಬೆಂಕಿ ವ್ಯಾಪಿಸಿದೆ.
ಕಾರವಾರ(ಮಾ.10): ಸಿಲಿಂಡರ್ ಸಿಡಿದು ಕಾರ್ಮಿಕರ ಕಾಲೋನಿಯ ಮನೆಗಳಿಗೆ ಬೆಂಕಿ ಹೊತ್ತಿದ ಘಟನೆ ಕಾರವಾರದ ಮುದಗಾ ನೌಕಾನೆಲೆ ಲೇಬರ್ ಕಾಲೋನಿಯಲ್ಲಿ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನೌಕಾನೆಲೆಯ ಎನ್‌ಸಿಸಿ ಗುತ್ತಿಗೆ ಕಂಪೆನಿ ಕಾರ್ಮಿಕರ ಶೆಡ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಅಡುಗೆಯ ಸಿಲಿಂಡರ್ ಸಿಡಿದ ಪರಿಣಾಮ ಬೆಂಕಿ ಹೊತ್ತಿಕೊಂಡಿ ಎಂದು ತಿಳಿದು ಬಂದಿದೆ. ಒಂದು ಸಾಲಿನ ನಾಲ್ಕೈದು ಶೆಡ್‌ಗಳಿಗೆ ಬೆಂಕಿ ವ್ಯಾಪಿಸಿದೆ.
ಬೆಂಗಳೂರಲ್ಲಿ ಮತ್ತೊಂದು ಬ್ಲಾಸ್ಟ್: ಇದು ಬಾಂಬ್ ಅಲ್ಲ, ಕಾರ್ ಗ್ಯಾರೇಜಿನ ಗ್ಯಾಸ್ ವೆಲ್ಡಿಂಗ್ ಮಶಿನ್!
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರ್ಮಿಕರು ಶೆಡ್ ಬಿಟ್ಟು ಹೊರಗೆ ಓಡಿ ಬಂದಿದ್ದಾರೆ. ಲೇಬರ್ ಕಾಲೋನಿ 150ಕ್ಕೂ ಅಧಿಕ ಶೆಡ್‌ಗಳಿವೆ. ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದ್ದಾರೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.