ಮಂಗಳೂರು: ಅಡ್ಯಾರ್ ಐಸ್ ಕ್ರೀಮ್ ದಾಸ್ತಾನು ಕೇಂದ್ರಕ್ಕೆ ಬೆಂಕಿ, ಕೋಟ್ಯಂತರ ರೂ. ನಷ್ಟ

By Girish Goudar  |  First Published Mar 28, 2023, 8:32 AM IST

ಸ್ಥಳಕ್ಕೆ ಧಾವಿಸಿ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಘಟನೆಯಲ್ಲಿ ಸಾವು ನೋವು ಸಂಭವಿಸಿಲ್ಲ. 


ಮಂಗಳೂರು(ಮಾ.28):  ಐಸ್ ಕ್ರೀಮ್ ದಾಸ್ತಾನು ಮತ್ತು ತಯಾರಿಕಾ ಘಟಕದಲ್ಲಿ ಅಗ್ನಿ ದುರಂತ ಸಂಭವಿಸಿದ ಪರಿಣಾಮ ಕೋಟ್ಯಂತರ ರೂಪಾಯಿ ನಷ್ಟ ಉಂಟಾದ ಘಟನೆ ಮಂಗಳೂರು ಹೊರವಲಯದ ಅಡ್ಯಾರ್ ಎಂಬಲ್ಲಿ ನಿನ್ನೆ(ಸೋಮವಾರ) ತಡರಾತ್ರಿ ನಡೆದಿದೆ. 

ಶಾರ್ಟ್ ಸರ್ಕ್ಯೂಟ್‌ನಿಂದ ಕಟ್ಟದದಲ್ಲಿ ಬೆಂಕಿ ಹೊತ್ತಿಕೊಂಡಿದೆ ಅಂತ ತಿಳಿದು ಬಂದಿದೆ. ಈ ಕಟ್ಟಡದಲ್ಲಿ ನಂದಿನಿ ಐಸ್ ಕ್ರೀ‍ಮ್ ಪ್ರೊಡಕ್ಟ್‌ಗಳ ದಾಸ್ತಾನು ಇಡಲಾಗಿತ್ತು. ಇದರ ಜತೆಗೆ ಐಸ್ ಕ್ರಿಮ್ ತಯಾರಿಕಾ ಘಟಕಕ್ಕೂ ಬೆಂಕಿ ಹಬ್ಬಿದೆ. 

Tap to resize

Latest Videos

ಸಿರುಗುಪ್ಪ: ಶಾಲಾ ಬಸ್‌ಗೆ ಬೆಂಕಿ: 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾರು!

ಸ್ಥಳಕ್ಕೆ ಧಾವಿಸಿ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಘಟನೆಯಲ್ಲಿ ಸಾವು ನೋವು ಸಂಭವಿಸಿಲ್ಲ. ಅಗ್ನಿ ದುರಂತದಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಹರ್ಷಮಣಿ ಎಸ್.ರೈ ಎಂಬವರಿಗೆ ಸೇರಿದ ದಾಸ್ತಾನು ಮಳಿಗೆ ಇದಾಗಿದೆ ಅಂತ ತಿಳಿದು ಬಂದಿದೆ. 

click me!