ಬಾಲಕಿಯರ ವಸತಿ ನಿಲಯದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ವಸತಿ ನಿಲಯದ ಎರಡು ಕೊಠಡಿಗಳೇ ಸುಟ್ಟು ಭಸ್ಮವಾಗಿವೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣನ್ಯೂಸ್, ವಿಜಯಪುರ
ವಿಜಯಪುರ (ಮಾರ್ಚ್ 21): ಬಾಲಕಿಯರ ವಸತಿ ನಿಲಯದಲ್ಲಿ (Girls Hostel) ಇದ್ದಕ್ಕಿದ್ದಂತೆ ಬೆಂಕಿ (Fire) ಕಾಣಿಸಿಕೊಂಡ ಘಟನೆ ವಿಜಯಪುರ (Vijayapura) ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ವಸತಿ ನಿಲಯದ ಎರಡು ಕೊಠಡಿಗಳೇ ಸುಟ್ಟು ಭಸ್ಮವಾಗಿವೆ. ಸಂಜೆ 5.30ರ ಸುಮಾರಿಗೆ ವಸತಿ ನಿಲಯದ ಕಂಪ್ಯೂಟರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೊದಲು ಸಣ್ಣ ಪ್ರಮಾಣದಲ್ಲಿ ಹೊಗೆ ಬಂದು ಬಳಿಕ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ನೋಡ-ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಕಿಟಕಿಗಳಿಂದ ಹೊರ ಬಂದಿವೆ. ಬೆಂಕಿ ಕಂಡ ಸ್ಥಳೀಯರು ಹಾಸ್ಟೆಲ್ ಬಳಿ ದೌಡಾಯಿಸಿದ್ದಾರೆ.. ಇತ್ತ ವಿಷಯ ಅರಿತು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
undefined
ಗಾಬರಿ ಬಿದ್ದು ಹಾಸ್ಟೆಲ್‌ನಿಂದ ಹೊರಬಂದ ವಿದ್ಯಾರ್ಥಿನಿಯರು: ಮೆಟ್ರಿಕ್ ನಂತರದ ಬಾಲಕಿಯರ ಈ ವಸತಿ ನಿಲಯದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೊದಲು ಕಂಪ್ಯೂಟರ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಳ್ತಿದ್ದಂತೆ ವಿದ್ಯಾರ್ಥಿನಿಯರು ಗಾಭರಿಗೊಂಡಿದ್ದಾರೆ. ಅಲ್ಲದೆ ಬೆಂಕಿ ಆರ್ಭಟ ಹೆಚ್ಚಾಗಿ, ಮತ್ತೊಂದು ಕೊಠಡಿಯ ಲೈಬ್ರರಿಗು ಹಬ್ಬಿದಾಗ ವಿದ್ಯಾರ್ಥಿನಿಯರು ಆತಂಕಗೊಂಡು ಹೊರ ಬಂದಿದ್ದಾರೆ. ಇನ್ನು ಬೆಂಕಿ ಹೊತ್ತಿಕೊಂಡಿದ್ದ ಕೊಠಡಿಗಳು ವಿದ್ಯಾರ್ಥಿನಿಯರು ವಾಸವಿದ್ದ ಕೊಠಡಿಗಳಿಗು ದೂರವಿದ್ದರಿಂದ ಯಾವುದೆ ಅನಾಹುತ ಉಂಟಾಗಿಲ್ಲ. ಅದೃಷ್ಟವಶಾತ್ ಯಾವ ವಿದ್ಯಾರ್ಥಿಗಳಿಗು ಹಾನಿ ಅಪಾಯವಾಗಿಲ್ಲ. ಆದರೆ ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೆಂಕಿ ಹೊತ್ತಿ ಉರಿಯುವಾಗ ಆತಂಕ ಹಾಗೂ ಗಾಭರಿಯಲ್ಲಿದ್ದ ವಿದ್ಯಾರ್ಥಿನಿಯರನ್ನ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಮಾಧಾನ ಪಡೆಸಿದ ಘಟನೆಯು ನಡೆಯಿತು..
Chikkamagaluru: ಆಕಸ್ಮಿಕ ಬೆಂಕಿಗೆ ಸುಟ್ಟು ಭಸ್ಮವಾದ ಅರಣ್ಯ ಪ್ರದೇಶ
ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಅನಾಹುತ: ವಸತಿ ನಿಲಯದ ಎರೆಡು ಕೊಠಡಿಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗ್ತಿದೆ. ಕಂಪ್ಯೂಟರ್ ಕೊಠಡಿಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದಾಗಿಯೇ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗ್ತಿದೆ. ಇನ್ನು ಬೆಂಕಿಯ ಕೆನ್ನಾಲಿಗೆಗೆ ಕೊಠಡಿಯಲ್ಲಿದ್ದ ಕಂಪ್ಯೂಟರ್ ಗಳು, ಲೈಬ್ರರಿಯಲ್ಲಿದ್ದ ಪುಸ್ತಕಗಳು ಸುಟ್ಟು ಭಸ್ಮವಾಗಿವೆ. ಮೇಲ್ಮಹಡಿಯಲ್ಲಿ ಬೆಂಕಿ ಆವರಿಸಿಕೊಂಡಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಗು ಬೆಂಕಿ ನಂದಿಸಲು ಪರದಾಡಬೇಕಾಯ್ತು. ಇನ್ನು ಎಷ್ಟೆಷ್ಟು ಕಂಪ್ಯೂಟರ್ ಹಾಗೂ ಪುಸ್ತಕಗಳು ಹಾನಿಯಾಗಿವೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಕಾಡ್ಗಿಚ್ಚು ತಡೆಯಲು ಮಾಸ್ಟರ್ ಪ್ಲಾನ್: ಬೆಂಕಿ ತಡೆಯಲು ಡ್ರೋಣ್ ಕಣ್ಗಾವಲು: ಅರಣ್ಯವನ್ನ ಯಾರೂ ಬೆಳೆಸೋದು ಬೇಡ. ಅದೇ ಬೆಳೆಯುತ್ತೆ. ಆದ್ರೆ, ರಕ್ಷಣೆ ಮಾಡೋದು ಮಾತ್ರ ಅನಿವಾರ್ಯ. ಅದ್ರಲ್ಲೂ ಈ ಬಾರಿ ಭಾರೀ ಮಳೆಯ ಮಧ್ಯೆಯೂ ಬಿಸಿಲಿನ ತಾಪ ವಿಶ್ವದ ಸೂಕ್ಷ್ಮ ಅರಣ್ಯಕ್ಕೂ ತಟ್ಟಿದೆ. ಹಾಗಾಗಿ, ಬೇಸಿಗೆಗೂ ಮುನ್ನವೇ ಬಿಸಿಲ ಬೇಗೆಯಿಂದ ಅರಣ್ಯ ರಕ್ಷಣೆಗೆ ಇಲಾಖೆ ಮುಂದಾಗಿದೆ. ಬೆಂಕಿಯಿಂದ ಕಾಡನ್ನ ರಕ್ಷಿಸಲು ನೂರಾರು ಕಿ.ಮೀ. ಫೈರ್ ಲೈನ್ ನಿರ್ಮಿಸಿದೆ. ಕಿಡಿಗೇಡಿಗಳಿಂದ ಬೀಳುವ ಬೆಂಕಿಯನ್ನು ತಡೆಯುಲು ಇಲಾಖೆ ಮಾಸ್ಟರ್ ಪ್ಲಾನ್ ರೂಪಿಸಿದೆ.
Mandya Accident: ಪಿಲ್ಲರ್‌ಗೆ ಡಿಕ್ಕಿ ಹೊಡೆದ ಟಿಪ್ಪರ್‌ಗೆ ಬೆಂಕಿ: ಡ್ರೈವರ್ ಸಜೀವ ದಹನ
ಹೌದು, ಪ್ರಪಂಚದ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರೋ ಪಶ್ಚಿಮಘಟ್ಟಗಳ ಸೌಂದರ್ಯದ ಶಕ್ತಿಯೇ ಶೋಲಾ ಕಾಡುಗಳು. ನೀರನ್ನ ಹಿಡಿದಿಟ್ಟುಕೊಂಡು ವರ್ಷಪೂರ್ತಿ ಹರಿಸೋ ಸಾಮರ್ಥ್ಯವಿರೋ ಶೋಲಾ ಕಾಡುಗಳು ಕೂಡ ಈ ಬಾರಿ ಬಿಸಿಲ ಛಾಯೆಯಿಂದ ತನ್ನ ಸಾಮರ್ಥ್ಯವನ್ನ ಕಳೆದುಕೊಂಡಿವೆ. ತಾಪದ ತೀವ್ರತೆಯಿಂದ ಶೋಲಾ ಕಾಡುಗಳು ಸೇರಿದಂತೆ ಅಲ್ಲಲ್ಲೇ ಅರಣ್ಯ ಬೆಂಕಿಗಾಹುತಿಯಾಗ್ತಿದೆ. 2004ರಲ್ಲಿ ಮುತ್ತೋಡಿಯಲ್ಲಿ ಕಾಡ್ಗಿಚ್ಚಿನಿಂದಾದ ದುರಂತದಿಂದ ಎಚ್ಚೆತ್ತುಕೊಂಡಿರೋ ಇಲಾಖೆ ಬೆಂಕಿಯಿಂದ ಕಾಡನ್ನ ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ತಿದೆ.