ಶಿರಾಲಿ ಗ್ರಾಪಂ ವ್ಯಾಪ್ತಿಯ ತಟ್ಟಿಹಕ್ಕಲಿನಲ್ಲಿ ಅಡುಗೆ ಮಾಡುತ್ತಿರುವ ಸಂದರ್ಭದಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ತಗುಲಿದ್ದು, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಡುಗೆ ಮನೆ ಸುಟ್ಟು ಕರಕಲಾಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ಭಟ್ಕಳ (ಸೆ.3) : ಶಿರಾಲಿ ಗ್ರಾಪಂ ವ್ಯಾಪ್ತಿಯ ತಟ್ಟಿಹಕ್ಕಲಿನಲ್ಲಿ ಅಡುಗೆ ಮಾಡುತ್ತಿರುವ ಸಂದರ್ಭದಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ತಗುಲಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಶುಕ್ರವಾರ ನಡೆದಿದೆ.ತಟ್ಟಿಹಕ್ಲಿನ ವೆಂಕಟೇಶ ಶ್ಯಾನಭಾಗ ಎನ್ನುವವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ತಗುಲಿದೆ. ಸುದ್ದಿ ತಿಳಿದ ತಕ್ಷಣ ಆಗಮಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಅನಾಹುತದಿಂದ ಅಡುಗೆ ಮನೆಯಲ್ಲಿದ್ದ ಕೆಲವು ವಸ್ತುಗಳು ಹಾನಿಯಾಗಿವೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಭರತ್ ವಿ. ಭೇಟಿ ನೀಡಿ ಮಾಹಿತಿ ಪಡೆದರು.
ಚಾಮರಾಜನಗರ: ಗ್ಯಾಸ್ ಸಿಲಿಂಡರ್ ಸ್ಫೋಟ: ಯುವಕ ಸಜೀವ ದಹನ
ಅಗ್ನಿಶಾಮಕ ದಳದ ಪ್ರಭಾರ ಅಧಿಕಾರಿ ಎಸ್. ರಮೇಶ, ಮನೋಜ ಬಾಡಕರ್, ನಾರಾಯಣ ಪಟಗಾರ, ಕುಮಾರ ನಾಯ್ಕ, ಅಕ್ಷಯ ಹಿರೇಮಠ, ಪುರುಷೋತ್ತಮ ನಾಯ್ಕ, ಮಂಜುನಾಥ ಶೇಟ್, ಕುಮಾರ ನಾಯ್ಕ ಮುಂತಾದವರು ಅಗ್ನಿಶಮನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಅಕ್ರಮ ಗ್ಯಾಸ್ ಸಿಲೆಂಡರ್ ದಾಸ್ತಾನು, ವಶಕ್ಕೆ
ತಾಲೂಕಿನ ಕಣ್ಣೀಗೇರಿ ಗ್ರಾಪಂ ವ್ಯಾಪ್ತಿಯ ಕೊಡಸೆ ಗ್ರಾಮದಲ್ಲಿ ಅನಧಿಕೃತ ಹಾಗೂ ಅಸುರಕ್ಷಿತ ಅಡುಗೆ ಸಿಲೆಂಡರ್ ದಾಸ್ತಾನು ಮಾಡಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ತಾಲೂಕಿನ ದಂಡಾಧಿಕಾರಿ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮೌಲಾಲಿ ಫಕ್ಕಿರಸಾಬ್ ಎನ್ನುವವರ ಅರಣ್ಯ ಅತಿಕ್ರಮಣ ಜಾಗದ ಮನೆ ಪಕ್ಕದ ತೆರೆದ ಖಾಲಿ ಜಾಗದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಹಾಗೂ ಅನಧಿಕೃತವಾಗಿ ಅಗ್ನಿ ಎಂಬ ಹೆಸರಿನ 30 ತುಂಬಿದ ಅಡುಗೆ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿದ್ದರು. ಇವುಗಳನ್ನು ದಂಡಾಧಿಕಾರಿ ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ತಾಲೂಕು ದಂಡಾಧಿಕಾರಿ ಶ್ರೀಕೃಷ್ಣ ಕಾಮ್ಕರ್, ಗ್ರೇಡ್-2 ತಹಶೀಲ್ದಾರ ಸಿ.ಜಿ. ನಾಯ್ಕ, ಆಹಾರ ಶಿರಸ್ತೇದಾರ ಮತ್ತು ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು. Udupi: ಗುಜರಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟಕ್ಕೆ ಕಾರಣವೇನು?