ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಸಿಕೊಳ್ಳುವ ಕಪ್ಪತಗುಡ್ಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 70 ಹೆಕ್ಟೇರ್ ಅರಣ್ಯ ನಾಶವಾಗಿದೆ.
ಡಂಬಳ (ಜ.26): ಸಮೀಪದ ಡೋಣಿ ಗ್ರಾಮ ಮತ್ತು ಡೋಣಿ ತಾಂಡಾ ನಡುವಿನ ಕಪ್ಪತ್ತಗುಡ್ಡ ಪ್ರದೇಶಕ್ಕೆ ಬೆಂಕಿ ಹೊತ್ತಿಕೊಂಡು ಸುಮಾರು 70 ಹೆಕ್ಟೇರ್ ಅರಣ್ಯ ಸಂಪತ್ತು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಸೋಮವಾರ ಬೆಳಗ್ಗೆ 11ರ ಸುಮಾರಿಗೆ ಘಟನೆ ನಡೆದಿದ್ದು, ಬೆಂಕಿಯ ಕೆನ್ನಾಲಗೆಗೆ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದ್ದು, ಸರೀಸೃಪಗಳು, ಸಣ್ಣಸಣ್ಣ ಗುಬ್ಬಿಗಳ ಗೂಡು ಸುಟ್ಟಿದ್ದು, ಅದರಲ್ಲಿದ್ದ ಸಣ್ಣ ಮರಿಗಳು ಬಲಿಯಾಗಿವೆ.
'ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ' ...
ಪ್ರತಿವರ್ಷ ಬೇಸಿಗೆ ಆರಂಭಗೊಂಡರೆ ಕಪ್ಪತ್ತಗುಡ್ಡಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚುತ್ತಾರೆ. ಇನ್ನೊಂದೆಡೆ ಕಪ್ಪತ್ತಗುಡ್ಡದಲ್ಲಿರುವ ಹಲವು ಗಾಳಿಯಂತ್ರ ನಿರ್ವಹಣೆಗೆ ಹೋಗುವವರು ಬೀಡಿ, ಸಿಗರೇಟ್ ಹೊತ್ತಿಸಿದಾಗ ಅದರ ಕಿಡಿಯಿಂದಲೂ ಬೆಂಕಿ ಹೊತ್ತಿಕೊಳ್ಳುತ್ತದೆ ಎಂಬುದು ಪರಿಸರಪ್ರೇಮಿಗಳ ಆರೋಪ.
ಈ ಮಧ್ಯೆ, ಕಪ್ಪತ್ತಗುಡ್ಡ ಬೆಟ್ಟದ ಪ್ರದೇಶಗಳಲ್ಲಿ ವಿದ್ಯುತ್‌ಲೈನ್ ಹಾದುಹೋಗಿದ್ದು, ಆಗಾಗ ಶಾರ್ಟ್‌ಸಕ್ರ್ಯೂಟ್‌ನಿಂದ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.